ಕವನಗಳು
ನನ್ನ ಎನ್ನ ಮನದ ಮಂದಾರ
ನೀ ನನ್ನೊಲವಿನ ಪ್ರೀತಿಯ ಹಂದರ
ನಿನ್ನ ಪ್ರೀತಿಯೇ ಹೊದೆಯುವ ಚಾದರ
ನಿನ್ನ ಒಲವೇ ಗಾಳಿ ಬೀಸುವ ಚಾಮರ
ನೀನೆ ನನ್ನ ಬಾಳ ಆಧಾರ
............ಶ್ರೀನಿಧಿ .........
.-.-.-.-.-.-.-.-.-.-.-.-.-.-.-.-.-.-.
ನೀನು -ನಾನು
ಬಯಲ ತಿಳಿ ಕೊಳದ ನೀರು ನೀನು
ಆ ನೀರಲ್ಲಿ ಈಜಾಡೋ ಮೀನು ನಾನು
ಭೂಮಿಗೆ ರಕ್ಷಾ ಹೊದಿಕೆ ಆಕಾಶ ನೀನು
ಅಲ್ಲಿ ತೇಲಾಡೋ ಮೋಡ ನಾನು
ಸೂರ್ಯನ ಸುತ್ತ ತಿರುಗೋ ಭೂಮಿ ನಾನು
ಭೂಮಿಯ ಸುತ್ತ ತಿರುಗೋ ಚಂದ್ರ ನೀನು
ಕಾನನದಲ್ಲಿ ಕಂಗೊಳಿಸುವ ಜಿಂಕೆ ನಾನು
ಆ ಜಿಂಕೆಯ ಕಣ್ಗಳ ಹೊಳೆವ ಮಿಂಚು ನೀನು
No comments:
Post a Comment