ನಂಗೆ ಮೊದಲಿನಿಂದಲೂ ಪಲಾವ್ ಎಂದರೆ ಯಾಕೋ ಅಷ್ಟಕ್ಕಷ್ಟೇ. ಅದರ ಜೊತೆ ಮಾಡೋ ರೈತ ( ಮೊಸರು ಬಜ್ಜಿ) ಮಾತ್ರ ತುಂಬಾ ಇಷ್ಟ . ಅಮ್ಮ ಯಾವಾಗಲೂ ನಂಗೆ '' ನೀನೊಂದು ಯಾವ ಪ್ರಾಣಿ ಕಣೆ ಎಲ್ಲರೂ ಇಷ್ಟ ಪಡುವ ಪಲಾವ್ ನಿಂಗೆ ಇಳಿಯೋದೇ ಇಲ್ಲ'' ಅಂತ ಬೈದು ಕೊಳ್ತಾ ಇದ್ದರು. " ಅಲ್ವೇ ಮದುವೆ ಆದಮೇಲೆ ನಿನ್ನ ಕಟ್ಟಿಕೊಂಡವ , ನಂಗೆ ಪಲಾವ್ ಇಷ್ಟ ಮಾಡಿ ಹಾಕು ಅಂದರೆ ಏನು ಮಾಡುವೆ ?" ಅಂತ ಸವಾಲ್ ಹಾಕುತ್ತಿದ್ದಿದ್ದು ನೆನಪಿದೆ . ಅವ ಎಲ್ಲಾದರು ನನ್ನ ಹತ್ರ ಪಲಾವ್ ಮಾಡಿ ಹಾಕು ಅಂದರೆ ... " ಹೋಗಲ್ಲೋ .. ನಾನು ಮಾಡೋಲ್ಲ ಬೇಕಿದ್ರೆ ಮಾಡಿಕೊಂಡಾದರೂ ತಿನ್ನು , ತರಿಸಿಕೊಂಡಾದರೂ ತಿನ್ನು" ಅಂತ ಹೇಳುವೆ ಅಂದು ಅಮ್ಮನಿಗೆ ಮಾರುತ್ತರ ನೀಡಿ ಸುಮ್ಮನಾಗಿಸಿದ್ದು ಅದೆಷ್ಟೋ ಬಾರಿ .
ಉಳಿದ ಎಲ್ಲ ತಿಂಡಿ ಹೇಗೋ ಹೊಟ್ಟೆ ಹಸಿಯುವ ಕರ್ಮಕ್ಕೆ ತಿನ್ನುತ್ತಿದ್ದೆ. ಆದರೆ ಈ ಪಲಾವ್ ಮಾತ್ರ ಊಹೂಂ... ಏನು ಮಾಡಿದರೂ ಬಾಯಿಯಿಂದ ಕೆಳಗೆ ಇಳಿಯಲು ಒಲ್ಲದ ತಿಂಡಿ. ಇದರ ಬದಲಿಗೆ ಒಂದು ಹಿಡಿ ಅನ್ನ ಕೊಟ್ಟರೂ ಆ ರೈತ ಹಾಕಿ ಉಂಡು ಬರುತ್ತಿದ್ದೆ ಅಂತ ಅಂದುಕೊಂಡಿದ್ದು ಅದೆಷ್ಟೋ ಬಾರಿ ಆದರೂ ಏನೂ ಮಾಡಲೂ ಆಗದ ಸ್ಥಿತಿ , ಅನಿವಾರ್ಯವಾಗಿ ಹೊಂದಿಕೊಂಡೆ ಅರ್ಥಾತ್ ಶನಿವಾರ ಬೆಳಗ್ಗೆ ಉಪವಾಸ ವೃತ ಕೈಗೊಂಡೆ . ಒಂದು ತಿಂಗಳ ನಂತರ ಹೇಗೆ ?ನಿಮಗೆ ಊಟ ತಿಂಡಿ ಸರಿಯಾಗುತ್ತದೋ...? ಅಂದರೆ ಯಾರೊಬ್ಬರೂ ಬಾಯಿ ತೆರೆಯಲೇ ಇಲ್ಲ ಆದರೆ ನಾನು ಎದ್ದು ನಿಂತು ಹೇಳಿದೆ ಶನಿವಾರ ಪಲಾವ್ ಬೇಡ, ಬೇರೆ ಏನೇ ಆದರೂ ಓಕೆ . ಅಲ್ಲಿವರೆಗೆ ತೆಪ್ಪಗೆ ಇದ್ದ ಸುಮಾರು 70-80 ಕಪಿಗಳು ಭಗವಂತಾ .............ಒಂದೇ ಸಲ ನನ್ನ ಮೇಲೆ ಮುತ್ತಿಗೆ ಹಾಕಿದವು " ಬೇಕೇ ಬೇಕು ಪಲಾವ್ ಬೇಕು " ಈಗ ಪಲಾವ್ ಬೇಡ ಅಂದವಳಸ್ಥಿತಿ ಹೇಗಾಗಿರಬೇಡ ? ತೆಪ್ಪಗೆ ಬಾಯಿ ಮುಚ್ಚಿ ಕೊಳ್ಳುವ ಸರದಿ ನನ್ನದು .
ಅಂತೂ ಯಾವ ಜನ್ಮದ ಪಾಪ ಕರ್ಮವೋ, ನಾನು ಮನೆ ಬಿಟ್ಟು ಹಾಸ್ಟೆಲ್ ಸೇರಬೇಕಾಗಿ ಬಂತು . ಆಗ ನಂಗೆ ಎದುರಾಗಿದ್ದು ಮೊದಲು ಆಹಾರ ಶೈಲಿಯ ಸಮಸ್ಯೆ ಆ ಹಾಸ್ಟೆಲ್ನಲ್ಲಿ ವೆಜ್/ನಾನ್ ವೆಜ್ ಎರಡೂ ಇತ್ತು. ಹೀಗಾಗಿ ಹ್ಯಾಗಾದರೂ ನನ್ನ ತಟ್ಟೆಗೆ ನಾನ್ ವೆಜ್ ಬೀಳದೆ ಇದ್ರೆ ಸಾಕು ಅಂತ ಯೋಚಿಸ್ತಾ ಇದ್ದೆ. ನಂಗೆ ಒಂದು ವೆಜ್ ಊಟ ಕೊಡಿ ಹಾಗಿದ್ರೆ ಮಾತ್ರ ಹಾಸ್ಟೆಲ್ ಗೆ ಸೇರಿಕೊಳ್ಳೋದು ಅಂತ ಕಾಲೇಜ್ , ಹಾಸ್ಟೆಲ್ ಅಡ್ಮಿಶನ್ ದಿನವೇ ನಿಖರವಾಗಿ ಹೇಳಿದ್ದೆ . ಅಲ್ಲಿದ್ದ ಭಗಿನಿ ಬಂಧುಗಳು ಒಪ್ಪಿದ ಮೇಲೆ ದಾಖಲಾತಿ ಪಡೆದು ಕೊಂಡೆ.
ಇನ್ನೂ ನೆನಪಿದೆ ಆ ಹಾಸ್ಟೆಲ್ ಮೆನು , ಭಾನುವಾರ ಜಗತ್ತಿನ ಅದ್ವಿತೀಯ ಏಕ ಮಾನ್ಯ ಮಸಾಲ ದೋಸೆ ( ಅಷ್ಟು ರುಚಿಕೆಟ್ಟ ದೋಸೆ ಎಲ್ಲೂ ತಿನ್ನೋಕೆ ಸಿಗಲಿಲ್ಲ) ಮಧ್ಯಾಹ್ನಕ್ಕೆ ಟೊಮೇಟೊ ಸಾರು, ಗೋಬಿ ಮಂಚೂರಿ , (ಅದನ್ನು ಕಂಡೆ ನಂಗೆ ಮಾರು ದೂರ ಹೋಗೋ ಹಾಗೆ ಆಗಿದ್ದು. )ರಾತ್ರಿಗೆ ಮಿಶ್ರ ತರಕಾರಿ ಸಾಂಬಾರು. ಸೋಮವಾರ ಉದ್ದು ಹಾಕದ, ಈಸ್ಟ್ ಹಾಕಿದ ಇಡ್ಲಿ, ಎ೦ತದ್ದೋ ಒಂದು ಸಾಂಬಾರು. ಮಧ್ಯಾಹ್ನಕ್ಕೆ ಸೀಮೆ ಬದನೇಕಾಯಿ ಹಾಕಿದ , ಬೇಳೆ ಸೋಕಿಸದ ನೀರು ಸಾಂಬಾರು , ರಾತ್ರಿಗೂ ಅದೇ ಜೊತೆಗೆ ಒಂದು ಕ್ಯಾಬೇಜ್ ಪಲ್ಯ . ಮಂಗಳವಾರ ಈಸ್ಟ್ ಹಾಕಿದ ದೋಸೆ , ಜೊತೆಗೆ ಇದೇ ಸೀಮೆ ಬದನೆಕಾಯಿ ಸಾಂಬಾರು , ಮಧ್ಯಾಹ್ನಕ್ಕೆ ಮಿಶ್ರ ತರಕಾರಿ ಸಾಂಬಾರು, ಜೊತೆಗೆ ಅರೆ ಬೆಂದ ಬೀನ್ಸ್ ಪಲ್ಯ. ರಾತ್ರಿಗೆ ಟೊಮೇಟೊ ಸಾರು , ಅದರೊಟ್ಟಿಗೆ ಹರಿವೆ & ಮರಳು ಪಲ್ಯ . ಬೇರೆ ದಿನದ ನಾನ್ ವೆಜ್ ಐಟಂ ನೆನಪಿಲ್ಲ ಆದ್ರೆ ಈ ಮಂಗಳ ವಾರ ಬೈಗೆ( ಭೂತಾಯಿ) ಮೀನಿನ ಸಾರು ಇದರ ವಾಸನೆ ಉಫ್ಫ್ ಎಲ್ಲೇ ಬಂದ್ರು ನ೦ಗೆ ಮಂಗಳ ವಾರ ಅನ್ನೋದು ನೆನಪಾಗ್ತಾ ಇತ್ತು. ಬುಧವಾರ ಎಷ್ಟೇ ಜಗಿದರೂ ಮೆದುವಾಗದ ಪರೋಟ,ಏನೋ ಘಮಟು ವಾಸನೆ ಬರೋ "ಕೂರ್ಮಾ"ವತಾರ ,ಮಧ್ಯಾಹ್ನಕ್ಕೆ ಏನೋ ಇದ್ದ ಎಲ್ಲ ತರಕಾರಿ ಹಾಕಿ ಮಾಡಿದ ನೀರು ಸಾಂಬಾರು, ಗುರುವಾರ ಅತ್ತ ಚಪಾತಿಯೂ ಅಲ್ಲದ ಇತ್ತ ರೊಟ್ಟಿಯೂ ಅಲ್ಲದ ಒಂದು ತಿಂಡಿ ಹಾಗೂ ಜೊತೆಗೆ ಅದೇ ಅವತಾರದ ಕೂರ್ಮ . ಶುಕ್ರವಾರ ಮತ್ತದೇ ತಗಡು ಪರೋಟ, ಕೂರ್ಮ ಶನಿವಾರಕ್ಕೆ ನನ್ನ ಆಜನ್ಮ ಶತ್ರು
ಉಳಿದ ಎಲ್ಲ ತಿಂಡಿ ಹೇಗೋ ಹೊಟ್ಟೆ ಹಸಿಯುವ ಕರ್ಮಕ್ಕೆ ತಿನ್ನುತ್ತಿದ್ದೆ. ಆದರೆ ಈ ಪಲಾವ್ ಮಾತ್ರ ಊಹೂಂ... ಏನು ಮಾಡಿದರೂ ಬಾಯಿಯಿಂದ ಕೆಳಗೆ ಇಳಿಯಲು ಒಲ್ಲದ ತಿಂಡಿ. ಇದರ ಬದಲಿಗೆ ಒಂದು ಹಿಡಿ ಅನ್ನ ಕೊಟ್ಟರೂ ಆ ರೈತ ಹಾಕಿ ಉಂಡು ಬರುತ್ತಿದ್ದೆ ಅಂತ ಅಂದುಕೊಂಡಿದ್ದು ಅದೆಷ್ಟೋ ಬಾರಿ ಆದರೂ ಏನೂ ಮಾಡಲೂ ಆಗದ ಸ್ಥಿತಿ , ಅನಿವಾರ್ಯವಾಗಿ ಹೊಂದಿಕೊಂಡೆ ಅರ್ಥಾತ್ ಶನಿವಾರ ಬೆಳಗ್ಗೆ ಉಪವಾಸ ವೃತ ಕೈಗೊಂಡೆ . ಒಂದು ತಿಂಗಳ ನಂತರ ಹೇಗೆ ?ನಿಮಗೆ ಊಟ ತಿಂಡಿ ಸರಿಯಾಗುತ್ತದೋ...? ಅಂದರೆ ಯಾರೊಬ್ಬರೂ ಬಾಯಿ ತೆರೆಯಲೇ ಇಲ್ಲ ಆದರೆ ನಾನು ಎದ್ದು ನಿಂತು ಹೇಳಿದೆ ಶನಿವಾರ ಪಲಾವ್ ಬೇಡ, ಬೇರೆ ಏನೇ ಆದರೂ ಓಕೆ . ಅಲ್ಲಿವರೆಗೆ ತೆಪ್ಪಗೆ ಇದ್ದ ಸುಮಾರು 70-80 ಕಪಿಗಳು ಭಗವಂತಾ .............ಒಂದೇ ಸಲ ನನ್ನ ಮೇಲೆ ಮುತ್ತಿಗೆ ಹಾಕಿದವು " ಬೇಕೇ ಬೇಕು ಪಲಾವ್ ಬೇಕು " ಈಗ ಪಲಾವ್ ಬೇಡ ಅಂದವಳಸ್ಥಿತಿ ಹೇಗಾಗಿರಬೇಡ ? ತೆಪ್ಪಗೆ ಬಾಯಿ ಮುಚ್ಚಿ ಕೊಳ್ಳುವ ಸರದಿ ನನ್ನದು .
ರಾತ್ರಿ ಮೀಟಿಂಗ್ ಮುಗಿದ ಬಳಿಕ ಎಲ್ಲ ದಂಡಿಯಾಗಿ ನನ್ನ ಮೇಲೆ ಹರಿ ಹಾಯ್ದರು . "ಇದ್ದದ್ದರಲ್ಲಿ ಅದೇ ಒಂದು ಚೆನ್ನಾಗಿ ಮಾಡಿ ಹಾಕ್ತಾ ಇದ್ದಿದ್ದು . ನೀನು ಅದನ್ನು ಬೇಡ ಅಂದು ಬಿಟ್ಟೆಯಲ್ಲಾ .. ಥೂ .. ನಿನ್ನ !" ನಾ ಎಲ್ಲರಿಗೂ ಒಂದೇ ಉತ್ತರ ಕೊಟ್ಟೆ . "ಸರಿ ಈಗಲೇ ಹೋಗಿ ಯಾವ ಬದಲಾವಣೆಯೂ ಬೇಡ, ಅಂದು ಬರುವೆ. ಅಂತ ಹೇಳಿ ನಮ್ಮ ಭಗಿನಿ ರೂಪಾ ಬಳಿ ಹೇಳಿ ಬಂದೆ. ಅಲ್ಲಿಗೆ ಎರಡನೇ ತಿಂಗಳೂ ಯಾವ ಬದಲಾವಣೆ ಇಲ್ಲದೆ ಅದೇ ಮೆನು ಮುಂದು ವರೆಯಿತು . ಹೀಗೆ ಎಲ್ಲರೂ ಈ ರೂಪಾಗೆ ಹೆದರಿದ್ದೇ. ಯಾಕೆ ಗೊತ್ತಾ? ಆಕೆ ಹಗಲಿಗೆ ಕಾಲೇಜ್ ನಲ್ಲಿ ಮೆಥಡ್ ಮಾಸ್ಟರ್ ! ಎಲ್ಲರಿಗೂ ತಮ್ಮ ಅಂಕಗಳ ದ್ದೇ ಭಯ. ಹೀಗೆ ಯಾರಿಗೂ ಬೇಡದ ಬದಲಾವಣೆ ನಂಗೆ ಯಾಕೆ ಇಲ್ಲದ ಉಸಾಬರಿ ? ಅಂದು ತೆಪ್ಪಗೆ ಉಳಿದೆ. ಶನಿವಾರಕ್ಕೆ ಮರೆಯದೆ ಅವಲಕ್ಕಿ ಮೊಸರು ನಾನೇ ಹಿಂದಿನ ದಿನ ಮರೆಯದೆ ತಂದು ಇತ್ತು ಕೊಳ್ಳುತ್ತಿದ್ದೆ. ಮೊದಲು ಉಪವಾಸ ಇದ್ದು ಬೆಳಗ್ಗಿನ ಡ್ರಿಲ್ ಸಮಯದಲ್ಲಿ ಸಿಕ್ಕಾಪಟ್ಟೆ ತೊಂದರೆ ಅನುಭವಿಸಿ ಕೊನೆಯಲ್ಲಿ ಅವಲಕ್ಕಿ ಮೊಸರಿಗೆ ಶರಣಾಗಿದ್ದೆ .
ಅಂತೂ ಕೊನೆಗೊಂದು ದಿನ ನವಮಾಸ , ವನವಾಸ ಉಪವಾಸ ಕೊನೆಯಾಗುವ ದಿನ ಬಂತು . ಕಾಲೇಜ್ ನಲ್ಲಿ ಫಾರ್ವೆಲ್ ಅದೇ ದಿನ ಹಾಸ್ಟೆಲ್ನಲ್ಲಿ ವಿಧಾಯ ಸಮಾರಂಭ ಅಂದು ಶನಿವಾರ ;) ಶನಿವಾರ ಬೆಳಗ್ಗಿನ ತಿಂಡಿ ಎಂದಿನಂತೆಯೇ ಪಲಾವ್ & ರೈತ . ನಾ ಮಾತ್ರ ಅವಲಕ್ಕಿ ಮೊಸರು ತಿಂದೆ. ಮಧ್ಯಾಹ್ನ ಕಾಲೇಜ್ ನಲ್ಲಿ ಊಟದ ಸಮಯ ಆದಾಗ ಊಟದ ಟೇಬಲ್ ನೋಡಿ ದಂಗಾಗಿ ಹೋದೆ . ಅಂದು ಸ್ಪೆಷಲ್ ಐಟಂ ಎಂದು ಪಲಾವ್ & ರೈತ, ಅದೇ ತಗಡು ಪರೋಟ , ಕೂರ್ಮ , ಒಂದು ಪಾಯಸ! ಇಷ್ಟೇ . ಒಂದು ತುಂಡು ಪರೋಟ ಬಾಯಿಗೆ ಇಟ್ಟ ಕೂಡಲೇ ತಿಳಿದು ಹೋಯಿತು . ಇದು ಅದೇ ಹೋಟೆಲ್ ದು. ನಮ್ಮ ನಾಲಿಗೆ ರುಚಿಯನ್ನೇ ಕೆಡಿಸಿದ ಹೋಟೆಲ್ ನದ್ದೇ . ಏನೇ ಆದರೂ ಯಾರಿಗೆ ಹೇಳೋದು ಅಂತೂ ಈ ಫಾರ್ವೆಲ್ ದಿನವೂ ಒಳ್ಳೆ ಊಟ ಸಿಗಲಿಲ್ಲ ಅಂತ ಮನದಲ್ಲಿ ಒಂದು ವಿಷಾದ ಛಾಯೆ ಮೂಡಿ ಹೋಯಿತು.

ಅಂತೂ ಬೆರಳೆಣಿಕೆಯ ದಿನ ಕಳೆದರೆ ಜೀವನದಲ್ಲಿ ಮತ್ತೊಮ್ಮೆ ಈ ಕಡೆ ತಲೆ ಕೂಡ ಹಾಕಿ ಮಲಗ ಬಾರದೆಂದು ಹಳಿದು ಕೊಂಡು ಒಲ್ಲದ ಮನಸ್ಸಿನಿ೦ದ ಹಾಸ್ಟೆಲ್ ಕಡೆಗೆ ಹೆಜ್ಜೆ ಹಾಕಿದೆ. ಸಂಜೆಯಾಯಿತು. ಸ್ವಲ್ಪ ಹೊತ್ತು ಕಳೆದು ಶಶಿ ಮೂಡಿ ಬಂದ ಊಟಕ್ಕೆ ಘಂಟೆ ಬಾರಿಸಿತು. ಊಟಕ್ಕೆ ಬಂದು ನೋಡಿದರೆ ಹಾಸ್ಟೆಲ್ ಫಾರ್ವೆಲ್ ಅಂತ ಮತ್ತೆ ಅದೇ ಗಮ್ಮೆನ್ನು ಪಲಾವ್! ಅದೇ ಪರಿಮಳ ಬೆಳಗ್ಗೆ ,ಮಧ್ಯಾಹ್ನ, ರಾತ್ರಿ , ಯಾವ ವ್ಯತ್ಯಾಸ ಇಲ್ಲ . ಹೊಟ್ಟೆ ಹಸಿಯುತ್ತಿದೆ ತಿನ್ನದೇ ಉಪಾಯ ಇಲ್ಲ . ತಿನ್ನೋಕೆ ಇಷ್ಟ ಇಲ್ಲ ಬೆಳಗ್ಗಿಂದ ಅದೇ ಪಲಾವ್ , ಪ.... ಲಾವ್ , ಪಲಾ ...ವ್ ! ಒಂದು ಚೂರು ಅನ್ನ ಇಲ್ಲ ಬೇರೆ ಏನು ಇಲ್ಲ ಥೂಊಊಊ .......
ಊಟದ ಬಳಿಕ ವೆರೈಟಿ ಪ್ರೊಗ್ರಾಮ್ ಮಾಡಬೇಕೆಂದು ಮೊದಲೇ ಹೇಳಿದ್ದರು. ಸರಿ ಇದೇ ಒಂದು ಮನೋರಂಜನೆ ಮಾಡಬೇಕೆಂದು ನಿರ್ಧರಿಸಿದ ನಾನು , ನಮ್ಮ ಗೆಳತಿಯರು ಶುರುವಿಟ್ಟು ಕೊಂಡೆವು .ಕೆಲವು ಮೊದಲೇ ಯೋಚಿಸಿ ರಚಿಸಲ್ಪಟ್ಟ ಐಟಂ ಹೊರಗೆ ಇಟ್ಟು, ಬದಲಿಗೆ ರಸವಾರ್ತೆ . " ಆಕಾಶವಾಣಿ ರಸವಾರ್ತೆ , ಓದುತ್ತಿರುವವರು , ರಾಜೇಶ್ವರಿ .... ಮುಖ್ಯಾಂಶಗಳು :- ಪಿಲಿಕುಳ ನಿಸರ್ಗ ಧಾಮದ ಬಳಿ ಇಂದು ರಸ್ತೆ ಅಪಘಾತ . ಮಂಗಳಾ ಕ್ರೀಡಾಂಗಣದಲ್ಲಿ ಬ್ಯಾಂಡ್ ಇಲ್ಲದೆ ನಡೆದ ಕ್ರೀಡೋತ್ಸವ . ಸೈಂಟ್ ಆನ್ಸ್ ನಲ್ಲಿ ಇಂದು ಪಲಾವ್ ದಿನ . ಮೊದಲೆರಡು ಟಾಪಿಕ್ ಗಳು ತಮಾಷೆಗಾಗಿ ಬರೆದಿದ್ದು . ಈ ಮೂರನೇ ಮುಖ್ಯಾಂಶ ಮಾತ್ರ ಅದೇ ದಿನದ ರಸವಾರ್ತೆ ಸೈಂಟ್ ಆನ್ಸ್ ನಲ್ಲಿ ಇಂದು ಪಲಾವ್ ದಿನ : ಇಂದು ಶನಿವಾರ , ಎಂದಿನ ಬೆಳಗ್ಗಿನ ತಿಂಡಿಯ ಮೆನು ಪಲಾವ್ , ಹೀಗಾಗಿ ಹಾಸ್ಟೆಲ್ ನಲ್ಲಿ ಬೆಳಗ್ಗಿನ ಉಪಾಹಾರ ಪಲಾವ್. ಈ ವರ್ಷದ ಬಿ. ಎಡ್ ಶೈಕ್ಷಣಿಕ ವರ್ಷದ ವಿದಾಯಕೂಟ ಸಮಾರಂಭವನ್ನು ಇಂದು ಸೈಂಟ್ ಆನ್ಸ್ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಲಾಗಿತ್ತು . ಮುಖ್ಯ ಅತಿಥಿಗಳಾಗಿ ಜಸ್ಟೀಸ್ ಸಂತೋಷ್ ಹೆಗ್ಡೆ ಆಗಮಿಸಿದ್ದರು. ಕಾರ್ಯಕ್ರಮವು ತುಂಬ ಸರಳವಾಗಿ ನಡೆಯಿತು. ಮಧ್ಯಾಹ್ನದ ವಿಶೇಷ ಭೋಜನ ಕೂಟಕ್ಕೆ ವಿಶೇಷವಾಗಿ ಮಂಗಳೂರಿನ ಖ್ಯಾತಿ ಪಡೆದ ಕೇಟರಿಂಗ್ ಯಿಂದ ಪಲಾವ್ ಮಾಡಿಸಲಾಗಿತ್ತು . ಹಾಗೆಯೇ ಸೈಂಟ್ ಆನ್ಸ್ ಹಾಸ್ಟೆಲ್ ನಲ್ಲಿಯೂ ವಿದ್ಯಾರ್ಥಿನಿಯರಿಗಾಗಿ ರಾತ್ರಿ ವಿಶೇಷ ವಿದಾಯಕೂಟ ಸಮಾರಂಭವನ್ನು ಏರ್ಪಡಿಸಿದ್ದರು . ಆ ಪ್ರಯುಕ್ತ ರಾತ್ರಿ ಊಟಕ್ಕೂ ಅದೇ ರುಚಿಕರ ಪಲಾವ್ ಸಿದ್ದ ಮಾಡಲಾಗಿತ್ತು. ಎಂದು ನಮ್ಮ ಮಂಗಳೂರಿನ ಬಾತ್ಮೀದಾರರು ಹೇಳಿದ್ದಾರೆ ಇಲ್ಲಿಗೆ ರಸವಾರ್ತೆ ಮುಗಿಯಿತು .
ಅಲ್ಲಿವರೆಗೂ ನಮ್ಮ ಊಟ ತಿಂಡಿಯ ಬಗ್ಗೆ ಕಾಳಜಿ ಇಲ್ಲದ ಭಗಿನಿ ರೂಪಾ ಪೆಚ್ಚಾದರು . ನಮಗೆ ಮೊದಲಿಂದಲೂ ಗೊತ್ತಿತ್ತು . ಊಟ ತಿಂಡಿಯ ವ್ಯವಸ್ಥೆ ಈ ಮಹಾ ಭಗಿನಿ ರೂಪಾರದ್ದೇ. ಆದರೆ ಆಕೆ ಯಾವತ್ತು ನಮ್ಮ ಬಳಿ ಏನೊಂದೂ ಹೇಳದೆ ಕೇಳದೆ ತಮಗಿಷ್ಟ ಬಂದಂತೆ ಮಾಡುತ್ತಿದ್ದರು . ಅದರ ಫಲ ಉಂಡಿದ್ದು ಹಾಸ್ಟೆಲ್ ಸೇರಿದ ಬಡಪಾಯಿ ನಾವು!!!
2 comments:
ತುಂಬಾ ಚೆನ್ನಾಗಿದೆ ,ಇಷ್ಟವಾಯಿತು ಹಾಸ್ಯದ ಲೇಪನ !
ಚೆನ್ನಾಗಿದೆ ಲೇಖನ... :-)
Post a Comment