ಹೀಗೊಂದು ಸಹ ಜೀವನ
ಅಲ್ಲಿ ಹಿಂದೂ ಮುಸ್ಲಿಂ ಕೋಮು ಗಲಬೆ, ಇಲ್ಲಿ ಸೆಕ್ಷನ್ ೧೪೪ ಜಾರಿ ಇದೆಲ್ಲ್ಲ ಪೇಪರ್ ನಲ್ಲಿ ಓದುತ್ತ ಇರೋವಾಗ ನ೦ಗೆ ಬಹುವಾಗಿ ಕಾಡಿದ್ದು ಈ ಸಹ ಜೀವನ....
ಕೊಲ್ಲಿ ರಾಷ್ಟ್ರ ಅದೊಂದು ಫ್ಲಾಟ್ ! ೨ ಬೆಡ್ ರೂಮ್ ನ ವಿಶಾಲ ಮನೆ .ಸಾಧಾರಣ ಗಾತ್ರದ ಅಡುಗೆ ಮನೆ , ಅಲ್ಲಿ ೩ ಗ್ಯಾಸ್ ಒಲೆ ಗಳು ಇದ್ದುವು .ಇದರ ಅರ್ಥ ಮೂರು ಬೇರೆ ಬೇರೆ ರೀತಿಯ ನಳಪಾಕಗಳು ಪ್ರತಿದಿನ ಸಿದ್ದವಾಗುತ್ತಿದ್ದವು . ಒಂದು ಕೇರಳದ ಮಾದರಿ, ಇನ್ನೊಂದು ಹೈದರಾಬಾದ್ ಶೈಲಿ ಮತ್ತೊಂದು ಕರ್ನಾಟಕದ ರೀತಿ.!

ನಂಗೆ ಇಲ್ಲಿ ರಾಜ್ಯವಾರು ಅಡುಗೆ ಮುಖ್ಯ ಅನ್ನಿಸಲಿಲ್ಲ
ಆದರೆ ಆಹಾರ ಶೈಲಿ ಮತ್ತು ಧರ್ಮ ಮುಖ್ಯ ಅನ್ನಿಸಿತ್ತು .ಒಂದು ಶಾಖಾಹಾರ ಆದರೆ ಉಳಿದೆರಡು
ಮಾಂಸ ಆಹಾರ ಗಳು. ಅದೂ ಏಕಕಾಲದಲ್ಲಿ ಸಿದ್ದವಾಗುತ್ತಿದ್ದವು ಒಬ್ಬರು ಮೀನು ಸಾರು
ಮಾಡುತ್ತಿದ್ದಾಗ ಮತ್ತೊಬ್ಬರು ಚಿಕೆನ್ ಬಿರಿಯಾನಿ ತಯಾರಿಸುತ್ತಿದ್ದರು ,ಮತ್ತೊಬ್ಬರು
ತಣ್ಣಗೆ ಸದ್ದಿಲ್ಲದೇ ಬದನೆಕಾಯಿ ಹುಳಿ ಮಾಡ್ತಾ ಇದ್ದರು . ಆದರೂ ಈ ೩ ಹೆ೦ಗಸರ ಬಾಯಿಗಳು
ಕ್ಷಣಬಿಡುವಿಲ್ಲದೆ ಹರಟುತ್ತಲೇ ಇದ್ದವು. ಅದು ಅವರ ಬಾಲ್ಯ , ಶಾಲಾದಿನಗಳು ಹೀಗೆ ಒಂದ
ಎರಡ? ಆ ಮೂರು ಮಹಿಳೆಯರಿಗೂ ಬೇರೆ ಸಮಯ ಒಟ್ಟಿಗೆ ಕಳೆಯಲು ಸಾಧ್ಯವಾಗದು , ಅದರಲ್ಲಿ ೨
ಮಹಿಳೆಯರು ಉದ್ಯೋಗಸ್ಥರು . ಹೀಗಾಗಿ ದಿನ ರಾತ್ರಿ ಅಡುಗೆ ಸಮಯದಲ್ಲಿ ಈ ಅಡುಗೆಮನೆಯನ್ನು
ಹರಟೆ ಕಟ್ಟೆ ಅಂದು ಕೊಂಡಿದ್ದರು ಅಂದ್ರೆ ತಪ್ಪಾಗಲಿಕ್ಕಿಲ್ಲ..
ಆ ಮೂವರಲ್ಲಿ ೨ ಹಿಂದೂಗಳು ಹಾಗೂ ೧
ಮುಸ್ಲಿಂ ಮಹಿಳೆ . ಈಗ ನಿಜಕ್ಕೂ ನಿಮಗೆ ಅಚ್ಚರಿ ಅನಿಸ್ತ ಇಲ್ವಾ ? ಹೌದು ಆ ೨ ಬೆಡ್
ರೂಂ ನ ಮನೆಯನ್ನು ೩ ಮನೆಗಳನ್ನಾಗಿ ಪರಿವರ್ತಿಸಲಾಗಿತ್ತು . ಅಲ್ಲಿ ೩ ಕುಟುಂಬಗಳು
ವಾಸವಾಗಿದ್ದುವು .ಮನೆ ಹೆ೦ಗಸರು ಮಾತ್ರವಲ್ಲ. ಪತಿ ಮಹಾಶಯರೂ ವಾರಾಂತ್ಯಗಳಲ್ಲಿ ಸಮಯ
ಸಿಕ್ಕರೆ ಕೆಲ ಹೊತ್ತು ಹರಟುತ್ತಿದ್ದರು. ಈ
ಹೆ೦ಗಸರು ಕೆಲಬಾರಿ ರಾತ್ರಿ ೧೨ -೧ ಘಂಟೆ ವರೆಗೂ ಹರಟುತ್ತ ಇರುತ್ತಿದ್ದರು ಇದಿಕ್ಕೆ
ಕಾರಣ ಇಷ್ಟೇ .ಒಬ್ಬ ಪತಿಮಹಾಶಯರಿಗೆ ರಾತ್ರಿ ಪಾಳಿ , ಇನ್ನೊಬ್ಬರಿಗೆ ವ್ಯವಹಾರದ
ಮೇಲ್ವಿಚಾರಣೆ ಮತ್ತೊಬ್ಬರು ಕೆಲಸದಲ್ಲಿ ನಿಷ್ಟಾವಂತ ಹೀಗಾಗಿ ಮನೆಗೆ ಬರೋದು ತುಂಬ ತಡ
.ಹೀಗಾಗಿ ಇಲ್ಲಿ ಎಲ್ಲರು ಸಮಾನ ದುಃಖಿ ಗಳೇ ...
ಒಬ್ಬರಿಗೆ ಹುಷಾರಿಲ್ಲದೆ ಹೋದ್ರೆ
ಅಡುಗೆ ಮಾಡಿ ಹಾಕಿ, ಔಷಧೋಪಚಾರ ಕೊಟ್ಟು ನೋಡಿ ಕೊಳ್ತಾ ಇದ್ದರು. ಆಸ್ಪತ್ರೆಗೂ
ಕರೆದುಕೊಂಡು ಹೋಗಿ, ಜೊತೆಗೆ ನಿಂತು ಸೇವೆ ಮಾಡಿ ನೋಡಿ ಕೊಂಡಿದ್ದರು.
ಈ
೩ ಮಹಿಳೆಯರು ಎಷ್ಟು ಅನ್ಯೋನ್ಯವಾಗಿ ಇದ್ದರು ಅಂದ್ರೆ ಒಂದೇ ತಾಯಿಯ ರಕ್ತ ಹಂಚಿಕೊಂಡು
ಹುಟ್ಟಿದ ಅಕ್ಕ ತಂಗಿಯರೂ ಇಷ್ಟು ಒಗ್ಗಟ್ಟಾಗಿ ಇರ್ತಾರೋ ಇಲ್ವೋ ? ಇವರು ೧ ವರ್ಷಕ್ಕೂ
ಹೆಚ್ಚು ಸಮಯ ಒಟ್ಟಿಗೆ ಅದೇ ಅನ್ಯೋನ್ಯತೆಯಲ್ಲಿ ಇದ್ದರು . ಆಮೇಲೆ ಒಬ್ಬರು ಭಾರತಕ್ಕೆ
ತೆರಳಿದರು, ಇನ್ನೊಬ್ಬರು ಕೆಲಸ ವರ್ಗಾವಣೆ ಆಗಿ ಸ್ವಲ್ಪ ದೂರ ಹೋಗಿ ಮನೆ ಮಾಡಿದರು,
ಕೊನೆಗೆ ಉಳಿದೋರು ಇನ್ನು ನಂಗೆ ಇಲ್ಲಿ ಇರೋದು ಅಸಾಧ್ಯ ಅಂತ ಬೇರೆ ಬಿಲ್ಡಿಂಗ್ ನಲ್ಲಿ
ಕಡಿಮೆ ಬಾಡಿಗೆಗೆ ಮನೆ ಸಿಕ್ಕಿತು ಅಂತ ಮನೆ ಬದಲಾಯಿ ಸಿದರು . ಅ೦ತೂ ಮನೆ ಬಿಡುವದಿನ
ಯಾರಿಗೂ ಸಂತೋಷ ಇರಲಿಲ್ಲ . ಅನಿವಾರ್ಯ ಕಾರಣಗಳಿಂದ ಪರಸ್ಪರ ಅಗಲಿದರು .
ಇನ್ನು ಹಬ್ಬಗಳು ವಾಹ್ ! ಏನು ಸಡಗರ ಏನು ಸಂಭ್ರಮ ? ಹಬ್ಬದ
ತಯಾರಿ ಒಟ್ಟಿಗೆ ಶಾಪಿಂಗ್ ಹೋಗೋದು , ದೀಪಾವಳಿ ದಿನ ಜೊತೆಗೆ ದೀಪ ಹಚ್ಚೋದೇನು ? ಪೂಜೆಗೆ
ಬರೋದೇನು ? ಸಿಹಿ ತಿಂಡಿ ವಿನಿಮಯ ಒಂದ ಎರಡ?
ಇದಿಷ್ಟು ಕಣ್ಣಾರೆ ಕಂಡಿದ್ದು ಇನ್ನು ವಿಲ್ಲಾ ಅಂತ ಒಂದು ಇದೆ .ಇಲ್ಲಿ ಭಾರತದ ಕುಟುಂಬಗಳ ಜೊತೆಗೆ ಪಾಕಿಸ್ತಾನ, ಬಂಗಾಳಿ ಕುಟುಂಬಗಳು ಸಹಜೀವನ ನಡೆಸಿದ್ದಾರೆ ಅಂತ ಕೇಳಿದ್ದೆ ಆದ್ರೆ ನೋಡುವ ಅವಕಾಶ ಸಿಗ್ಲಿಲ್ಲ ..
ಕೊನೆಗೆ ನನ್ಗೆಕಾಡಿದ್ದು ಇಷ್ಟು ಭಾರತಲ್ಲಿ ಇರುವಾಗ ಮಾತ್ರ ಹಿಂದೂ ಮುಸ್ಲಿಂ ಕಿತ್ತಾಟವೇ?ಗಡಿ ದಾಟಿದ ಕೂಡಲೇ ಒಮ್ಮಿ೦ದೊ೦ಮ್ಮೆಗೆ ಸಹೋದರ - ಸಹೋದರಿ ಭಾವಬಂದು ಬಿಡುತ್ತ? ಅಥವಾ ಉಳಿವಿಗಾಗಿ ಹೋರಾಟವೇ? ಅಂದ್ರೆ ೨೦೦೮ ರ ಮಿತಿಮೀರಿದ ಬಾಡಿಗೆ ಏರಿಕೆ ಇಂದ ಬದುಕಿ ಉಳಿಯಲು ಕಂಡು ಕೊಂಡ ಮಾರ್ಗವೇ?

No comments:
Post a Comment