ಕೊಲ್ಲಿಯಲ್ಲಿ ಕಣ್ಣಿಗೆ ಕಂಡ ಕೈ ತೋಟ -ತೂಗು ಹೂ ತೋಟ
ಬಳ್ಳಿಯ ಬದುಕು ನನ್ನದು!
--------------------------
ಸಂಬಂಧದ ಎಲೆಗಳ ಜೊತೆಗೆ!
ಜೀವನದ ನಡಿಗೆ!
ಕಾಲದ ಎಲ್ಲೆಯ ಮೀರಿ ಯಾವ ಎಲೆಯೂ
ಬಳ್ಳಿಯಲಿ ನಿಲ್ಲದು!
ಎಲೆ ಬಿದ್ದ ಮೇಲೂ ಅದರ ಗುರುತು ಮಾಸದು!
ಅತಿಯಾಗಿ ಸುತ್ತಿಕೊಂಡರೂ
ಅದ ಬಿಟ್ಟು,
ಮುಂದೆ ಸಾಗಬೇಕು ಎನ್ನುವ ನೆನಪಿದೆ!
ಒಣಗಿದ್ದಾಗ ನೋಡಿಕೊಂಡೇ ಹೋದವರೇ ಎಲ್ಲಾ !
ಹಸಿರಾಗಿದ್ದಾಗ ಹತ್ತಿರವಿದ್ದವರೇ!
ಬಾನನ್ನೇ ಮುಟ್ಟಲು ಬಯಕೆ ಇದ್ದರೂ!
ನೀ ಬಾಡದಿರಲು ಕಾಲುಗಳು
ನೆಲದಲ್ಲೇ ಇರಲಿ ಎಂದು
ಹೇಳುತ್ತಿತ್ತು ಬೇರು!
-ಪ್ರಕಾಶ್ ಶ್ರೀನಿವಾಸ್
ಈ ಕವನ ಬಳ್ಳಿ ಬಗ್ಗೆ ಬರೆ ಅಂದಾಗ ಒಂದು ಸಣ್ಣ ಪ್ರಯತ್ನ ಅಂತ ಈ ಪುಟ್ಟ ಹುಡುಗನ ಯತ್ನ ....
ಅಂದು ವಾರಾಂತ್ಯ, ಏನೇ
ಇರಲಿ ನಮ್ಮೂರೇ ಚಂದ. ಏನೋ ಮನಸ್ಸಿಗೆ ಒಂತರಾ ಬೇಜಾರು,ಏನೋ ಕಳಕೊಂಡ
ಭಾವ-ಇದು ಆಗಾಗ ನನ್ನ ಮನಃ ಸ್ಥಿತಿ. ಹೀಗಾದಾಗ ನಾನು ಫೇಸ್ ಬುಕ್ ಗೆ ಬರೋದು ತು೦ಬಾ
ಸಾಮಾನ್ಯ.ನಾನು ಹೇಗೆ ಇದ್ದರೂ ಅಲ್ಲಿ ನನ್ನ ನಕ್ಕು ನಲಿಸುವ ಆತ್ಮೀಯರು ಇದ್ದೇ
ಇರುತ್ತಾರೆ.ನಿನ್ನೆಯೂ ಹಾಗೆ ಆಯಿತು. ಏನೊ ಮಾತಿನ ನಡುವೆ "ಗಾರ್ಡನ್
ಗೆ ಹೋಗೇ ಎಲ್ಲಾ ಸರಿಯಾಗುತ್ತೆ " ನನ್ನ ಆಪ್ತರ ಉವಾಚ . ಹೂo ಅಂದು ,ನನ್ನ ಪ್ರೀತಿಯ
ಮಡಿಲು ಗಣಕವನ್ನು ಬದಿಗೆ ಇಟ್ಟು ಮೀನಾ ಮೇಷ ಯೋಚಿಸಲು ಆರಂಭಿಸಿದೆ. ಇಷ್ಟಾದಾಗ ನನ್ನ
ಪತಿರಾಯ ಇವತ್ತು ಗಾರ್ಡನ್ ಗೆ ಹೋಗೋಣ್ವಾ ?ಅನ್ನೋದೇ ..
ಓಹ್ ! ತುಂಬಾ ಖುಷಿಯಿಂದ ಈಗಲೇ ಹೋಗೋಣ ಅಂದೆ.ಆಗ ಬೆಳಗ್ಗೆ ೯ ರ ಸಮಯ .... ಹಿಂದೊಮ್ಮೆ ಅದೇ ತಾಣಕ್ಕೆ ಹೋಗಿದ್ದೆ ಆದರೆ ಅಲ್ಲಿ ತಲುಪಿದಾಗ ಸೂರ್ಯ ಪಶ್ಚಿಮಕ್ಕೆ ಅದಾಗಲೇ ಧಾವಂತದಿಂದ ಧಾವಿಸಿ ನಮಗೆ "ಸಾಯೋನಾರಾ" ಹೇಳಲು ರೆಡಿಯಾಗಿದ್ದ ... ಸುಮ್ಮನೆ ತೆಪ್ಪಗೆ ತಂಗಾಳಿ ಸೇವನೆ ಮಾಡಿ , ಬೆಳದಿಂಗಳು ಸವಿದು ಬಂದಿದ್ದೆ ! ಆದರೂ ಅಲ್ಲಿನ ತುಂಬಾ ದಟ್ಟ ಮರಗಳು ,ಹಕ್ಕಿಗಳ ಕಲರವ ,ಆ ಜೀರುಂಡೆ ಸದ್ದುಗಳೆಲ್ಲಾ ನನ್ನ ಮತ್ತೆ ಹಳ್ಳಿಗೆ ಹೊತ್ತು ಒಯ್ಯಿದವು.ನಾನು ಅಸಮಾಧಾನದಿಂದಲೇ ಸ್ವಲ್ಪ ಬೇಗ ಹೋಗಿದ್ದರೆ ಚೆನ್ನಾಗಿತ್ತು .ಇಲ್ಲಿ ಗೂಡೊಳಗೆ ಕೂತು ಮಾಡೋದೆನಿತ್ತು ಅಂತ ರಗಳೆ ಮಾಡಿ ಕೊಂಡೇ ಹಿಂದಿರುಗಿದ್ದೆ.
ಈ ಬಾರಿ ಹೀಗಾಗಲು ಬಿಡಲೇ ಬಾರದು ಎಂದು ಲೆಕ್ಕ ಹಾಕಿ ೫ ನಿಮಿಷಕ್ಕೆ ನಾ ತಯಾರು ! ಅಂತೂ ಅರ್ಧ ತಾಸು ಕಳೆದು ನಾವಿಬ್ಬರೂ ಹೊರಬಿದ್ದೆವು. ನಾ ಮೊದಲೇ ಹೇಳಿದ್ದೆ "ಈ ವತ್ತು ಸೀದಾ ಗಾರ್ಡನ್ ಗೆ ಡಿಸ್ಕವರಿ ಗಾರ್ಡನ್ ನೋಡಿ ಆಗಿದೆನಾನು . ದಿನ ಅದೇ ಮರ ಅದೇ ಗಿಡ ಹಾಗೂ ಅದೇ ಗಿಳಿವಿಂಡು ! ಅಲ್ಲೇನಿದೆ ಎಂದು ನೋಡಬೇಕು "ಸರಿ ಕಣೆ ಅಲ್ಲೇ ಹೋಗೋಣ ಅಂತ ಸವಾರಿ ಹೊರಟಿತು .
ಓಹ್ ! ತುಂಬಾ ಖುಷಿಯಿಂದ ಈಗಲೇ ಹೋಗೋಣ ಅಂದೆ.ಆಗ ಬೆಳಗ್ಗೆ ೯ ರ ಸಮಯ .... ಹಿಂದೊಮ್ಮೆ ಅದೇ ತಾಣಕ್ಕೆ ಹೋಗಿದ್ದೆ ಆದರೆ ಅಲ್ಲಿ ತಲುಪಿದಾಗ ಸೂರ್ಯ ಪಶ್ಚಿಮಕ್ಕೆ ಅದಾಗಲೇ ಧಾವಂತದಿಂದ ಧಾವಿಸಿ ನಮಗೆ "ಸಾಯೋನಾರಾ" ಹೇಳಲು ರೆಡಿಯಾಗಿದ್ದ ... ಸುಮ್ಮನೆ ತೆಪ್ಪಗೆ ತಂಗಾಳಿ ಸೇವನೆ ಮಾಡಿ , ಬೆಳದಿಂಗಳು ಸವಿದು ಬಂದಿದ್ದೆ ! ಆದರೂ ಅಲ್ಲಿನ ತುಂಬಾ ದಟ್ಟ ಮರಗಳು ,ಹಕ್ಕಿಗಳ ಕಲರವ ,ಆ ಜೀರುಂಡೆ ಸದ್ದುಗಳೆಲ್ಲಾ ನನ್ನ ಮತ್ತೆ ಹಳ್ಳಿಗೆ ಹೊತ್ತು ಒಯ್ಯಿದವು.ನಾನು ಅಸಮಾಧಾನದಿಂದಲೇ ಸ್ವಲ್ಪ ಬೇಗ ಹೋಗಿದ್ದರೆ ಚೆನ್ನಾಗಿತ್ತು .ಇಲ್ಲಿ ಗೂಡೊಳಗೆ ಕೂತು ಮಾಡೋದೆನಿತ್ತು ಅಂತ ರಗಳೆ ಮಾಡಿ ಕೊಂಡೇ ಹಿಂದಿರುಗಿದ್ದೆ.
ಈ ಬಾರಿ ಹೀಗಾಗಲು ಬಿಡಲೇ ಬಾರದು ಎಂದು ಲೆಕ್ಕ ಹಾಕಿ ೫ ನಿಮಿಷಕ್ಕೆ ನಾ ತಯಾರು ! ಅಂತೂ ಅರ್ಧ ತಾಸು ಕಳೆದು ನಾವಿಬ್ಬರೂ ಹೊರಬಿದ್ದೆವು. ನಾ ಮೊದಲೇ ಹೇಳಿದ್ದೆ "ಈ ವತ್ತು ಸೀದಾ ಗಾರ್ಡನ್ ಗೆ ಡಿಸ್ಕವರಿ ಗಾರ್ಡನ್ ನೋಡಿ ಆಗಿದೆನಾನು . ದಿನ ಅದೇ ಮರ ಅದೇ ಗಿಡ ಹಾಗೂ ಅದೇ ಗಿಳಿವಿಂಡು
ಗಾರ್ಡನ್ಸ್ ಅದೊಂದು
ರೆಸಿಡೆನ್ಶಿಯಲ್ ಕಮ್ಯೂನಿಟಿ (Property manage by Nakheel property &
Management ) ಇದೊಂದು ಪ್ರಶಾಂತವಾದ ತೋಟದೊಳಗೊಂದು ಹಲವು ಮನೆಗಳ ಸಮುಚ್ಚಯ ಎಂದರೆ
ತಪ್ಪಾಗಲಾರದು. ಈ ಉದ್ಯಾನದ ಒಳಹೊಕ್ಕ ಕೂಡಲೇ ನನ್ನ ತಲೆಗೆ ಒಂದಷ್ಟು ಯೋಚನೆಗಳು ದಾಳಿ
ಮಾಡಲಾರ೦ಭಿಸಿದವು.ಇಲ್ಲಿ ಮನೆ ಬಾಡಿಗೆ ಎಷ್ಟಿರಬಹುದು? ಮನೆ ಖಾಲಿ ಇರಬಹುದೇ... ನಂಗೆ
ದೊಡ್ಡ ಮನೆ ಬೇಡಾ ಸಣ್ಣ ಗೂಡು(Studio Flat ) ಸಾಕು !! ಇಲ್ಲಿ ಸ್ಟುಡಿಯೋ ಫ್ಲಾಟ್
ಲಭ್ಯ ಇದೆಯೋ..? ಹೀಗೆ ಸಾಗಿತ್ತು ನನ್ನ ಯೋಚನಾ ಲಹರಿ .... ಅಷ್ಟಾದಾಗ ನನ್ನ ಬಲ
ಭಾಗಕ್ಕೆ ಹಸಿರು ಹುಲ್ಲು ಹಾಸು ಕಂಡಿತು . ವಾಹ್ !! ಎಳೆಬಿಸಿಲಿಗೆ ಮೈ ಚಾಚಿ ಕೂರುವೆ ಎಂದಾಗ ಆ ಹುಲ್ಲಿಗೆ ತುಂತುರು ನೀರುಣಿಸಿ -ನನ್ನ ಆಸೆಗೆ ತಣ್ಣೀರು ಎರಚಿ ಬಿಟ್ಟಿತು -ಈ ನಖೀಲ್ ಮ್ಯಾನೇಜ್ ಮೆಂಟ್. ಹೀಗಾಗಿ ನನ್ನ ಗಮನ ಎಡಗಡೆಗೆ ತಿರುಗಿತು.ಅಲ್ಲಿ ಒಂದಿಷ್ಟು ದಟ್ಟ ಮರಗಳು ,ಎಷ್ಟು ದಟ್ಟ ಅಂದ್ರೆ ಒಂಥರಾ ಕತ್ತಲು ಆವರಿಸಿದಷ್ಟು ದತ್ತ ಮರಗಳು !! ಸೀದಾ ಅಲ್ಲಿಗೇ ನನ್ನ ಕಾಲುಗಳು ಧಾವಿಸಿದುವು. ಒಂದಷ್ಟು ಆಲದ ಮರಗಳು ಕಹಿ ಬೇವಿನ ಮರ, ಬಾದಾಮಿ ಮರ ಇನ್ನು ಏನೇನೋ ಮರಗಳು ಇದ್ದವು.ನನ್ನ ಗಮನ ದೂರದಲ್ಲಿದ್ದ ಒಂದು ಬಳ್ಳಿಯ ಪೊದೆ ಮೇಲೆ ಹೋಯಿತು.ಹತ್ತಿರಕ್ಕೆ ಹೋದೆ.ನೋಡಿದರೆ
ನನಗೇಕೋ ಅದು ತೊಂಡೆಕಾಯಿ ಬಳ್ಳಿಯಂತೆ ಕಂಡಿತು .ಏನೇ ಆದರೂ ಕಂಡ ಕೂಡಲೇ ಕೇಳಿ ತಿಳಿದು
ಕೊಳ್ಳೋ ತವಕ ನಂದು . ನನ್ನ ಪತಿಯ ಬಳಿ ಕೇಳಿಯೇ ಬಿಟ್ಟೆ "ಲೋ ಇದು ತೊಂಡೆ ಕೈ ಬಳ್ಳಿ
ಅಲ್ವಾ ನೋಡು ಎಷ್ಟ್ ಚಂದ ಚಪ್ಪರ ಮಾಡಿ ಹರಡಿದ್ದಾರೆ ? " ಎಂದೆ . ಅಬ್ಬ ದೇವರೇ...
ಸ್ವಲ್ಪ ಸುಮ್ಮನೆ ಇರೇ ! ಈ ಮರುಭೂಮಿಯಲ್ಲಿ ತೊಂಡೆಕಾಯಿ ಬೇರೆ
ಬೆಳೀತಾರಾ ? ಈ ಪ್ರಾಪರ್ಟಿ ಮ್ಯಾನೇಜ್ ಮೆಂಟ್ ನೂರು ಅಲಂಕಾರಕ್ಕಾಗಿ ಬೆಳೆಸಿದ ಯಾವುದೊ
ಒಂದು ಬಳ್ಳಿ ಅದು ! ತೊಂಡೆ ಕಾಯಿ ಯೂ ಇಲ್ಲ ಬೆಂಡೆ ಕಾಯಿಯೂ ಇಲ್ಲ - ಪತಿಯ ವರಾತ.
ನನ್ನ ಕೋತಿ ಬುದ್ದಿ ಎಲ್ಲಿ ಹೋದರೂ ಅದು ಪ್ರತ್ಯಕ್ಷ ವಾಗಿಯೇ ಬಿಡುತ್ತೆ "ಏ ಹೋಗೋ ನಿಂಗೆ ಗೊತ್ತಿಲ್ಲ ಅದು ತೊಂಡೆ ಕಾಯಿ ಬಳ್ಳಿನೇ ... ಅಂದೆ .ಇಷ್ಟಕ್ಕೆ ಸುಮ್ಮನಾಗದೇ ನಿಂಗೆ ಗೊತ್ತಾ ತೊಂಡೆಕಾಯಿ ಯಾವುದರಲ್ಲಿ ಬೆಳೆಯುತ್ತೆ ? ಗಿಡ ಬಳ್ಳಿ ಅಥವಾ ಮರದಲ್ಲಿ ಬೆಳೆಯೋದಾ ಅಂತ ಸ್ವಲ್ಪ ಅಣಕಿಸಿ ಕೇಳಿದೆ. ಅವನ ಉತ್ತರ ಕೇಳಿ ನಾನು ಬೆಪ್ಪು !! ದೇವಾ ನಿಂಗೆ ಅಷ್ಟೂ ಗೊತ್ತಿಲ್ವಾ ?? ಅಂದೆ. ಪಾಪ ಅವನು ನಗರದಲ್ಲಿ ಹುಟ್ಟಿ, ಬೆಳೆದಿದ್ದು !ನನ್ನ ತರ ಹಳ್ಳಿ ಮಿಕ ಅಲ್ಲ , ಪೋಲಿ ದನವೂ ಅಲ್ಲ ..
ಇಷ್ಟೆಲ್ಲಾ ನನ್ನಮಾತು ಸ್ವಲ್ಪ ಗಟ್ಟಿ ಧ್ವನಿಯಲ್ಲೇ ಸಾಗಿರಲು ಅಲ್ಲಿ ಒಬ್ಬ ವ್ಯಕ್ತಿ ಬಂದ . ನಂಗೆ ಸ್ವಲ್ಪ ಭಯ ಆಯಿತು. ಗಲಾಟೆ ಮಾಡಬೇಡಿ ಅಂತ ಹೇಳ್ತಾನೋ ಏನೋ ಅಂತ ! ಏನು ಮಾಡೋದು ನನ್ನ ದ್ವನಿ ಸ್ವಲ್ಪ ಗಟ್ಟಿಯೇ ಆಗಿ ಹೋಗಿದೆ. ನನ್ನ ಕರ್ಮ 'ಸಂಗ ದೋಷದಿಂದ ಸನ್ಯಾಸಿ ಕೆಟ್ಟ -ಇರಾನಿ ಸಂಸ್ಥೆ ಯಲ್ಲಿ ಕೆಲಸ ಮಾಡೋದರ ಪರಿಣಾಮ ಅದು !
ಆದರೂ ಸ್ವಲ್ಪ ಧೈರ್ಯ ಮಾಡಿ ಆತನಿಗೆ ಶುಭೋದಯ (ಗುಡ್ ಮಾರ್ನಿಂಗ್ ) ಹೇಳಿ , ಕೇಳಿಯೇ ಬಿಟ್ಟೆ .Is this tindly creeper ? ( ಇದು ತೊಂಡೆ ಕಾಯಿ ಬಳ್ಳಿನಾ?) ಅವನು ಹೌದು ಅದು ತೊಂಡೆಕಾಯಿ ಬಳ್ಳಿ ಅಂದ.ಈ ಬಾರಿ ಮೊದಲ ಸರ್ತಿಗೆ ಹಾಕಿದೆ ಇನ್ನೂ ಹೂ ಬಿಟ್ಟಿಲ್ಲಾ , ಕಾಯ್ತಾ ಇದ್ದೀನಿ ಹೂ ಬಿಡುತ್ತೋ ,ತೊಂಡೆ ಕಾಯಿ ಆಗುತ್ತೋ ಅಂತ! ನನ್ನ ಕುತೂಹಲ ಮೇರೆ ಮೀರಿತ್ತು .ಇಷ್ಟರಲ್ಲಿ ನನ್ನ ಕಣ್ಣು ಅದಕ್ಕೆ ಅಳವಡಿಸಿದ ನೀರಾವರಿ ಪದ್ಧತಿ ಮೇಲೆ ಬಿದ್ದಾಗಿತ್ತು .ಈ ನೀರಾವರಿ ಪದ್ಧತಿ ಹೇಗೆ ಮಾಡಿದಿರಿ ಎಂದು ಕೇಳಿದೆ 'ನಾನೇ ಪೈಪ್ ಅಂದು extension ಅಳವಡಿಸಿ ನಂಗೆ ತಿಳಿದಂತೆ ಮಾಡಿದೆ' ಎಂದು ಉತ್ತರಿಸಿದ ಆತ. ಈಗ ಆತನಿಗೆ ನನ್ನ ಪ್ರಶ್ನೆಗಳ ಸುರಿಮಳೆ. ಇದನ್ನೆಲ್ಲಾ ಪ್ರಾಪರ್ಟಿ ಮ್ಯಾನೇಜ್ ಮೆಂಟ್ ನೋರು ಮಾಡೋಕೆ ಬಿಡ್ತಾರ?ಅಥವಾ ವಿಶೇಷ ಅನುಮತಿ ಏನಾದರೂ ಪಡೆದುಕೊಳ್ಳುವ ಪದ್ಧತಿ ಇದೆಯೇ ?ಹೂ ದೋಟ ಸ್ವಚ್ಛ ಮಾಡಲು ಬಂದಾಗ ಇದನ್ನೆಲ್ಲಾ ಕಿತ್ತು ಹಾಕಲ್ವಾ ?- ಆತನೂ ಉತ್ಸಾಹಿತನಾಗಿ ನನ್ನ ಎಲ್ಲ ಪ್ರಶ್ನೆಗಳಿಗೂ ಶಾಂತವಾಗಿಯೇ ಉತ್ತರಿಸಿದ. ಸಾಧಾರಣವಾಗಿ ಈ ರೀತಿ ಬೆಳೆಯೋದು ನಿಯಮಕ್ಕೆ ವಿರುದ್ದ ಆದರೂ ನಂಗೆ ಸ್ವಲ್ಪ ಖಾಲಿ ಜಾಗ ಕಂಡರೂ ಏನಾದರೂ ಬೆಳೆವ ಹವ್ಯಾಸ , ೧೦ ವರ್ಷದಿಂದ ಬೆಳಿತಾ ಬಂದಿದ್ದೀನಿ ಯಾರೂ ಏನೂ ಹೇಳಿಲ್ಲ,ಇಲ್ಲಿವರೆಗೆ ಯಾರೂ ಕಿತ್ತೂ ಹಾಕಿಲ್ಲ' ಅಂದ .
ಈಗ ತೊಂಡೆ ಕಾಯಿ ಬಳ್ಳಿಯ ಬುಡದ ಸಮೀಕ್ಷೆ ಆಯಿತು . ನನ್ನ ಕಣ್ಣು ಯಾವ ತರ ಚಪ್ಪರ,ಏನು ಉಪಯೋಗಿಸಿದ್ದಾರೆ ಅಂತ ನೋಡ್ತಾ ಇತ್ತು. ಸಾಮಾನ್ಯ ಕೋಲು ,ಹಗ್ಗ ಸರಿಗೆಗಳಿಂದ ತುಂಬಾ ಅಚ್ಚು ಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು.ನಾನು ಇಷ್ಟೆಲ್ಲಾ ನೋಡಿದ ಮೇಲೆ ಒಂದು ಫೋಟೋ ತೆಗೆಯಲಾ ?ಎಂದು ಅನುಮತಿ ಕೇಳಿದೆ . ಆತ ಬಹಳ ಉತ್ಸಾಹ ದಿಂದ Why not ? ಅಂತ ಅನುಮತಿ ಕೊಟ್ಟಿದ್ದೂ ಆಯಿತು . ಇನ್ನೂ ಸ್ವಲ್ಪ ಈಚೆಮಗ್ಗುಲಿಗೆ ಬಂದೆ ಏನಿದೆ ಅಂತ ನೋಡೋಣ ಎಂದು.ಒಂದು ಮರದ ಸೊಪ್ಪು ಕಣ್ಣಿಗೆ ಕಂಡಿತು .ಈ ಸೊಪ್ಪು ,ಈ ಮರ ಎಲ್ಲೋ ನೋಡಿದ ಹಾಗಿದೆಯಲ್ಲಾ ಅ೦ತ ಅನ್ನಿಸ್ತು ಆದರೆ ಪಕ್ಕನೆ ಯಾವ ಮರ ಅಂತ ಮನಸ್ಸಿಗೆ ಬರಲಿಲ್ಲ! ಆದರೂ ಅಷ್ಟಕ್ಕೇ ಬಿಡುವ ಅಭ್ಯಾಸ ರೂಡಿಯೇ ಇಲ್ಲ ನಂಗೆ !!! ೩-೪ ಸಲ ದಿಟ್ಟಿಸಿದೆ ಹೂ ಕಂಡಿತು ! ಆ ಕೂಡ್ಲೇ ಹೊಳೆಯಿತು ಅದು ನುಗ್ಗೆ ಕಾಯಿ ಮರ !!! ಭಾರತದಲ್ಲಿ ನಮ್ಮನೆರೆಮನೆಯಲ್ಲಿ ನಾನು ಸಣ್ಣವಳಿದ್ದಾಗ ಒಂದು ದೊಡ್ಡ ನುಗ್ಗೆ ಮರ ಇತ್ತು .ಮರ ತುಂಬ ನುಗ್ಗೆ ಕೋಡು ತೂಗಾಡ್ತಾ ಇತ್ತು. ಒಂದು ದಿನ ಆ ಮರದ ಗೆಲ್ಲು ಕಾಯಿಯ ಭಾರ ತಾಳಲಾಗದೆ ಮುರಿದು ಬಿತ್ತು. ಮುಂದಿನ ಮಳೆಗಾಲಕ್ಕೆ ಗಾಳಿ ಮಳೆಗೆ ಸಿಕ್ಕು ಬುಡಸಮೇತ ಭೂಮಿಗೆ ಉರುಳಿತ್ತು . ಆಮೇಲೆ ಎಲ್ಲೂ ನುಗ್ಗೆ ಮರ ನೋಡಿದ ನೆನಪು ಇಲ್ಲ .ಆದರೂ ಮರ ನೋಡಿದಾಗ ಗುರುತಿಸಿದ ಹೆಮ್ಮೆ ನನ್ನದಾಗಿತ್ತು .
ನಾನೇ ನನ್ನಷ್ಟಕ್ಕೆ ಒಂದು ಅಭಿಪ್ರಾಯಕ್ಕೆ ಬರೋ ಜಾಯಮಾನದವಳು ಅಲ್ವೇ ಅಲ್ಲ ! ಕಣ್ಣಲ್ಲಿ ಕಂಡರೂ ಪರಾಂಬರಿಸಿ ನೋಡೋ ತರ ....! ಇನ್ನೂ ಆತ ಅಲ್ಲೇ ಇದ್ದ ಕೇಳೋದು ತಡ ಮಾಡಲಿಲ್ಲ ಕೇಳಿಯೇ ಬಿಟ್ಟೆ Is that drumstick tree ? (ಅದು ನುಗ್ಗೆ ಕಾಯಿ ಮರವೇ ?)ಹೌದು ಅಂದ,"೧೦ ವರ್ಷ ಆಯಿತು ಮರಕ್ಕೆ ,ವರ್ಷಕ್ಕೆ ೨ ಬಾರಿ ಕಾಯಿ ಆಗುತ್ತೆ ,ಈಗಲೂ ಹೂ ಬಿಟ್ಟಿದೆ -ಇನ್ನು ೧ ತಿಂಗಳಿಗೆ ಕಾಯಿಗಳು ಕೊಯ್ಲಿಗೆ ಬರುತ್ತವೆ " ಅಂದು ನಾನು ಮುಂದೆ ಯಾವ ಪ್ರಶ್ನೆ ಕೇಳದಂತೆ ಬಾಯಿಗೆ ಬೀಗ ಜಡಿದೂ ಬಿಟ್ಟ !
ಇಷ್ಟಾದಾಗ ನನ್ನ ಪತಿರಾಯ 'ಸಾಕು ಇನ್ನು ಮುಂದೆ ಹೋಗೋಣ 'ಎಂಬಂತೆ ಸೂಚನೆ ನೀಡಿಯಾಗಿತ್ತು .ತೆಪ್ಪಗೆ ಬಾಲ ಮುದುರಿ ಅವನನ್ನು ಹಿಂಬಾಲಿಸಿದೆ .ಹಾಗೇ ಸಾಗ್ತಾ ಸಾಗ್ತಾ ಒಂದಿಷ್ಟು ಹೋಗಲು ಕಂಡವು ನನ್ನ ಕಾಲುಗಳು ವೇಗವಾಗಿ ಆ ಕಡೆ ಧಾವಿಸಿದವು . 'ಹೌದು' ಅವು ಸ್ವಾಭಾವಿಕ ಹೂ ಗಳೇ ಆಗಿದ್ದವು. ಸ್ಥಳದ ಅಭಾವ ಇರುವಾಗ ಹೀಗೂ ತೂಗು ಹೂದೋಟ ಮಾಡಬಹುದು ಎಂದು ಅನ್ನಿಸಿದ್ದು ಆಗಲೇ ! ಕಂಡ ಮೇಲೆ ಹಾಗೇ ಬಿಡೋದು ಉಂಟಾ ನಾನು ? ಇನ್ನು ಹತ್ತಿರ ಹೋದೆ.ಫೋಟೋ ಕ್ಲಿಕ್ ಮಾಡಿ -ಒಂದು ಕಿರು ಲೇಖನದ ರೂಪು ರೇಷೆಯ ಗುಂಗಿನಲ್ಲಿ ತಣ್ಣಗೆ ಮನೆ ಕಡೆಗೆ ಹೆಜ್ಜೆ ಹಾಕಿದೆ .
ಒಟ್ಟಾರೆ ನಂಗೆ ಅನ್ನಿಸಿದ್ದು ಇಷ್ಟು ಮರುಭೂಮಿಯೇ ಆಗಲಿ ,ಬಂಜರು ಭೂಮಿಯೇ ಆಗಲಿ -"ಮನಸ್ಸಿದರೆ ಮಾರ್ಗ ಇದ್ದೇ ಇದೆ" ಇನ್ನೊಮ್ಮೆ ಇನ್ನೊಂದಿಷ್ಟು ......

No comments:
Post a Comment