Monday, June 17, 2013

ನಾನು ಭೇಟಿಯಾದ ನಮ್ಮೂರ ಅಮೋಘ ಪ್ರತಿಭೆ


         ಸುಮಾರು ಒಂದು       ವರ್ಷದ ಹಿಂದೆ ನಾನು ಫೇಸ್ ಬುಕ್ ನಲ್ಲಿ  ಬೆಳ ಬೆಳಗ್ಗೆ ಹುಟ್ಟು ಹಬ್ಬದ ಶುಭಾಶಯ ಕೋರಲು     ಬಂದಾಗ ಒಂದು ಕಾರ್ಟೂನ್ ಮನಸೆಳೆಯಿತು . ಇದು ಯಾರು ಕಾರ್ಟೂನ್ ಕಲಾವಿದ ? ಪ್ರೊಫೈಲ್ ಹೊಕ್ಕು ನೋಡಿದರೆ ಫ್ರಮ್ ಕುಂದಾಪುರ !! ಓದಿದ್ದೆಲ್ಲಾ ಸೈಂಟ್  ಮೇರಿಸ್ , ಭಂಡಾರ್ಕಾರ್ಸ್ ಕಾಲೇಜು . ಮುಂದೆ ಶೋಧನೆಗೆ ಸಮಯ ಇರಲಿಲ್ಲ. ಹಾಗೆ ಶುಭಾಶಯ ಹೇಳಿ ಹೊರಗೆ ಬಂದೆ. ಮೊದಲಿಂದ ಬೆಳೆದು ಬಂದ ಪದ್ಧತಿ , ದಿನಾ ಸಂಜೆ ನನ್ನ ವರದಿ ವಾಚನ ಕಾರ್ಯಕ್ರಮ ನನ್ನ ಮನೆದೇವರ ಮುಂದೆ . ಆಮೇಲೆ ಮನೆ ದೇವರ ವಾಚನಕ್ಕೂ ಕಿವಿಯಾಗುವೆ ಅನ್ನಿ . ಸ್ವಾರಸ್ಯ ಇರೋದು ಯಾವಾಗಲೂ ನನ್ನಲ್ಲೇ . ನನ್ನ ಪತಿದೇವರ ವರದಿ ವಾಚನ ಅಷ್ಟೇನೂ ರುಚಿ ಇರೋಲ್ಲ . ಆರು -ಮೂರು ತಿಂಗಳಿಗೊಮ್ಮೆ ಕುತೂಹಲ ಕೆರಳಿಸುವಂತದ್ದು. ಉಳಿದಂತೆ ನಾನು ಹೂ , ಹೂ ಅಂದರೆ  ಮುಂದೆ ಸಾಗುವಂತದ್ದು. 
       ಎಂದಿನಂತೆ ಶುರು ಮಾಡಿದೆ. ಇವತ್ತು ನಾನೊಂದು ಕಾರ್ಟೂನ್ ನೋಡಿದೆ. ಆರ್ಟಿಸ್ಟ್ ನೋಡಿದರೆ ನಿಮ್ ಊರಿನೋರು , ನಿಮಗೆ ಗೊತ್ತಾ ? ನನ್ನ ಮನೆ ದೇವರು ಒಂದೇ ಉಸಿರಿಗೆ ಅದು "ಸತೀಶ್ ಆಚಾರ್ಯ" ಅನ್ನೋದಾ? ನಂಗೆ ಸಂಭ್ರಮ , ಅಚ್ಚರಿ ಎರಡೂ ಒಟ್ಟೊಟ್ಟಿಗೆ. ಸರಿ ಅಂದು ಫೇಸ್ಬುಕ್ ತಡಕಿ ಆ ಕಾರ್ಟೂನ್ ತೋರಿಸಿದರೆ , ವಾಹ್ ಇದು ಅವನೇ !!! ಅಲ್ಲಿಂದ ಹೊರಗೆ ಬಂದು ನನ್ನ ಪತಿರಾಯನ ಫೇಸ್ ಬುಕ್ ಹೊಕ್ಕು ನೋಡಿದರೆ ಅವರು ಗೆಳೆತನದ  ಮನವಿ ಸಲ್ಲಿಸಿ ಎಷ್ಟೋ ಕಾಲ ಆಗಿ ಹೋಗಿತ್ತು. ನನ್ನ ಪತಿರಾಯ  ತಿಂಗಳಿಗೆ ಒಮ್ಮೆ ಯೂ ಫೇಸ್ಬುಕ್ ಕಡೆ ತಲೆಯೂ ಹಾಕಿ ನೋಡದ ಬಲು ಅಪರೂಪದ ಮಾನವ . ಯಾರದ್ರೂ ಫೋನ್ ಮಾಡಿ ನೋಡು ಫೇಸ್ಬುಕ್ ನಲ್ಲಿ ಫೋಟೋ ಇದೆ ಅಂದ್ರೆ ಬಂದು ನೋಡಿ ಹೋಗೋದು ಬಿಟ್ರೆ ಬೇರೆ ಏನೂ ಇಲ್ಲ.  ಹಾಗಿರುವಾಗ ಯಾರು ಮನವಿ ಮಾಡಿದರೂ ಅವು  ಮನೆದೇವರ ಸ್ವೀಕೃತಿಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿರುತ್ತವೆ. ಮೊದಲು ಸ್ವೀಕರಿಸಿದ್ದೇನೋ ಆಯಿತು. ಬಹಳ ಹಿಂದೆ ಅದರ ಜೊತೆ ಬರೆದ ಒಂದು ಸಂದೇಶವೂ ಇತ್ತು. ಬಹಳ  ಆತ್ಮೀಯವಾಗಿ ಬರೆದ ೪ ಸಾಲು. ಅದಿಕ್ಕೆ ಉತ್ತರ ಬರೆದು ಕ್ಷೇಮ ವಿಚಾರಿಸಿ ನನ್ನ ಪತಿರಾಯ ಹೊರ ಬಂದ ಮೇಲೆ,  ನನ್ನ ಸಾವಿರ ಪ್ರಶ್ನೆಗಳ ಸುರಿಮಳೆಗೆ ಉತ್ತರ ಕೊಡಲು ಸಜ್ಜಾಗಬೇಕಿತ್ತು. ಕುಂದಾಪುರದಲ್ಲಿ ಎಲ್ಲಿ ಈ ಪ್ರತಿಭಾವಂತರ ಮನೆ ? ನಿಂಗೆ ಗೊತ್ತ??  ಒಮ್ಮೆ ನಂಗೆ ಭೇಟಿ ಮಾಡಬೇಕು. ಛಾಯಾ ಅಕ್ಕನನ್ನು ಭೇಟಿ ಮಾಡಿಸುವೆ ಎಂದು ೨ ಸಲ ಆಸೆ ತೋರಿಸಿದ್ದೆ ಬಂತು . ಕೊನೆಪಕ್ಷ ಇವರನ್ನು ಅದ್ರು ಭೇಟಿ ಮಾಡಿಸೋ ಪುಣ್ಯಾತ್ಮ ಅಂತ ಬೇಡಿದ್ದು  ಆಯಿತು. ಸರಿ ಊರಿಗೆ ಹೋಗೋವಾಗ ಮಾಡಿಸುವೆ ಅಂದೂ ಆಯಿತು. ನನ್ನ ಮನೆ ದೇವರ ಒಂದು ಒಳ್ಳೆ ಗುಣ "ನಾನು ಏನೇ ಕೇಳಲಿ ಇಲ್ಲ ಅನ್ನದ ಮಹಾನು ಭಾವ, ಹಾಗಂತ ನನ್ನ ಪುಟ್ಟ ಆಸೆಯೂ ಈಡೇರಿಸದ  ಅವತಾರಪುರುಷ. "
      

ಸ್ವಲ್ಪ ಸಮಯದ ಬಳಿಕ ನಾವು  ೧೦ ದಿನದ ಮಟ್ಟಿಗೆ ಊರಿಗೆ ಬರುವುದು ಎಂದು ನಿರ್ಧಾರ ಆದ ಬಳಿಕ  ದುಂಬಾಲು ಬಿದ್ದು  ಮತ್ತೆ ಫೇಸ್ಬುಕ್ ಹೊಕ್ಕಿಸಿ ಅವರ ಸಂಪರ್ಕ ಸಂಖ್ಯೆ ಕೇಳಿ ಒಂದು ಮೆಸೇಜ್ ಮಾಡೋ ಅಂದು ಮಾಡಿಸಿ ಅದನ್ನು ಪಡೆದುಕೊಂಡೆ. ಊರಿಗೆ ಬಂದು ಅಯ್ಯಬ್ಬ...  ಕೆಲಸದ ಒತ್ತಡದ ನಡುವೆ ಒಮ್ಮೆ ಮರೆತು ಹೋಗಿತ್ತು . ಮತ್ತೆ ನೆನಪಾದಾಗ ಫೋನ್ ಮಾಡಿ ಮಾತನಾಡಿಸಿ ೧ ನಿಮಿಷ ನಂಗೂ ನಮ್ಮೂರ  ಪ್ರತಿಭೆ  ಜೊತೆ ಮಾತನಾಡೂ  ಅವಕಾಶ  ಕೊಟ್ಟ ನನ್ನ ಪತಿದೇವರಿಗೆ ಮೊದಲ ಬಾರಿ ನನ್ನ ವಂದನಾರ್ಪಣೆ. "ತುಂಬಾ  ವರ್ಷಗಳೇ ಆದುವು ಪುಟ್ಟನನ್ನು ನೋಡಿ ಒಮ್ಮೆ ಒಟ್ಟಿಗೆ ಬನ್ನಿ ಭೇಟಿ ಮಾಡೋಣ" ಅಂದರು ಸರಿ ಅಂದು ನಾನು ನನ್ನ ಪತಿ ದೇವರ ಬಳಿ ಫೋನ್  ಎತ್ತಿ  ಕೊಟ್ಟೇ ಬಿಟ್ಟೆ. ಸುಮಾರು ಹೊತ್ತು ಹರಟಿದ್ರಪ್ಪ.... ಬರೀ ಕ್ರಿಕೆಟ್ ಬಿಟ್ಟು ಆಚೆ ಹೋಗಲೇ ಇಲ್ಲ. 
        ಅಂದು ನಾವು ನನ್ನ ಅಮ್ಮನ ಮನೆಗೆ ಹೋಗ್ತಿದ್ದೆವು. ಹಿಂದೆ ಕುಂದಾಪುರಕ್ಕೆ ಬರುವಾಗ ಅಲ್ಲೇ ಮೇನ್ ರೋಡ್ನಲ್ಲಿಯೇ ಮನೆ ಹೋಗೋಣ ಅಂದ ಪತಿರಾಯ ಒಮ್ಮೆಗೆ ಸಮಾಧಾನ ಮಾಡಿ ನನ್ನ ತೆಪ್ಪಗೆ ಕೂರಿಸುವುದರಲ್ಲಿ ಯಶಸ್ವೀ. ಸುಮಾರು ಕೆಲಸ ಮುಗಿಸಿ  ಹಿಂದೆ ಬರುವಾಗ ರಾತ್ರಿ ತಡವಾಗಿತ್ತು. ಏನು ಹೇಳೋದು ಸಾಧ್ಯ ಇಲ್ಲದೆ ಸುಮ್ಮನಾದೆ. ಆಮೇಲೆ ನಮ್ಮ ಮನೆಯಲ್ಲಿ ಪೂಜೆ ಇತ್ತು ಅದಕ್ಕೆ ಬರೋಕೆ ಹೇಳಿ ಅಂದೆ.  ಹಿಂದಿನ ದಿನ ನನಗೂ ನೆನಪಿಗೆ ಬರಲಿಲ್ಲ ಮತ್ತೊಮ್ಮೆ ಎಚ್ಚರಿಸ ಬೇಕು ಎಂದು. ನಾನು ಊಟದ ಸಮಯ ಆದಾಗ ಕೇಳ್ತೀನಿ. ಏನು ಬರಲಿಲ್ಲ ? ಆಗ ಹೇಳಿದ್ದೇ ಗೊತ್ತು.  ಮರೆಗುಳಿ ಮ೦ಕಣ್ಣ ಹೇಳಿದ್ದೆ ಅಲ್ಲ. ಹೇಳೇ ಇಲ್ಲ ಸಾರೀ ಕಣೆ.!!! ಏನು ಹೇಳೋದು ಇದಿಕ್ಕೆ ? ಕೋಪ ಬಂದರೂ ತೋರಿಸಿ ಕೊಳ್ಳದೆ "ತಾನು ಮಾಡಿದರೆ ಉತ್ತಮ ... ... "ಯಾವಾಗಲೂ ನಮ್ಮ ಕೆಲಸ ನಾವೇ ಮಾಡಿ ಕೊಳ್ಳೋದು ಉತ್ತಮ  ಅಂತ ಸುಮ್ಮನಾದೆ. ಆಮೇಲೆ ಎರಡು ದಿನ ಸಿಕ್ಕ ಪಟ್ಟೆ  ಕೆಲಸ, ಓಡಾಟ . ಮೂರನೇ ದಿನ ಮಧಾಹ್ನ ಮೇನ್ ರೋಡಿಗೆ ಬಂದಾಗ ನೆನಪಿಸಿದೆ. ಓ ಪುಟ್ಟ ... ಎಲ್ಲಿ ನಮ್ ಕಾರ್ಟೂನ್ ಆರ್ಟಿಸ್ಟ್ ಮನೆ ? ಅಯ್ಯೋ ನಂಗೆ ಮರೆತೇ ಹೋಗಿತ್ತು .. ಇಲ್ಲೇ ಬಾ ಹೋಗೋಣ ಅಂತ ಹೋದೆವು . ಆದರೆ ಅವರು ಇರಲಿಲ್ಲ. ಅವರ ಸಹೋದರ ಇದ್ರು . ಅಯ್ಯ ಈಗ ಒಂದು ಅರ್ಧ ಘ೦ಟೆ ಮೊದಲು ಇದ್ರು . ಈಗ ಸಮಾರಂಭಕ್ಕೆ ಹೊರಟು  ಹೋದರು ಅಂದ್ರು ನಂಗೆ ಸಿಕ್ಕ ಪಟ್ಟೆ  ಬೇಜಾರು .. "ಬೆಳಗ್ಗಿನಿಂದ ಯಾರು ಯಾರೋ ಮನೆಗೆ ಬಂದ್ರು ಹರಟೆ ಹೊಡೆದು ಸಮಯ ಹಾಳು ಮಾಡಿ ಬಿಟ್ಟರು . ನೋಡು.... ಈಗ ನಾವು ಬಂದಾಗ ಇಲ್ಲಿ ಇವರು ಇಲ್ಲ. ಸಂಜೆ ಮತ್ತೆ ಅಲ್ಲಿ ಇಲ್ಲಿ ಹೋಗೋದು ಇದೆ.  ನಾಳೆ ಹೊರಡೋದೇ ಆಗುತ್ತೆ" ಅಂದು ಅಲ್ಲೇ ನನ್ನ 'ವಿಶ್ವ ರೂಪ ಪ್ರದರ್ಶನ' ಮಾಡಿಯೇ ಬಿಟ್ಟೆ. ಏನು ಮಾಡಿದರೂ ನಿನ್ನ ಪ್ರತಿಭೆಯನ್ನು ಭೇಟಿ ಮಾಡಿಸೋಕೆ ನಿನ್ ಕೈಯಲ್ಲಿ ಆಗೋಲ್ಲ ಥೂ ಅಂದು ಅಲ್ಲಿಂದ ಹೊರ ಬಿದ್ದೆ.
        ಪಾಪ ಅವರು ರಾತ್ರಿ ಫೋನ್ ಮಾಡಿದ್ರು . ನಾವು  ಅಷ್ಟು ಹೊತ್ತಿಗೆ ತುಂಬ ದೂರ ಇದ್ದೆವು .ಅವರು  "ಅಲ್ವೋ ಪುಟ್ಟ ಬರೋ ಸ್ವಲ್ಪ ಹೊತ್ತು ಮೊದಲು ಒಂದು ಫೋನ್ ಮಾಡೋದು ಅಲ್ವಾ?? ಛೆ ! ನೀನು ಬಂದಿದೆ ಅಂತ ನಂಗೆ ಹೇಳಿದ್ರು " ಅಂದಾಗ ನಂಗೆ ಇನ್ನಷ್ಟು ಬೇಸರ . ಇನ್ನೊಂದಷ್ಟು ಸಹಸ್ರ ನಾಮ ಅರ್ಚನೆ ಮಾಡಿ ಸುಮ್ಮನಾದೆ. ಆದಿನ ಮತ್ತೆ ಕುಂದಾಪುರಕ್ಕೆ ಬರೋ ಯೋಚನೆ ಇರಲಿಲ್ಲ. ಮಾರನೆ ದಿನ ಎದ್ದು ನಮ್ಮ ಹತ್ತು ದಿನದ ಭಾರತ ಪ್ರವಾಸಕ್ಕೆ ಜನಗಣ ಮನ ಹಾಡಿದೆ. ದಾರಿ ಉದ್ದಕ್ಕೂ ನೆನಸಿ ನೆನಸಿ ಒಂದಾದರೂ ಆಸೆ ನೆರವೆರಿಸೋಕೆ ಆಯ್ತಾ? ನಿಂಗೆ ಇಲ್ಲೇ ಇಷ್ಟು ಹತ್ತಿರ ಇದ್ದ ಇವರನ್ನು ಭೇಟಿ ಮಾಡಿಸಲು ನಿಂಗೆ ಆಗಿಲ್ಲ ಇನ್ನು ನಾನು ಆಸೆ ಪಡೋದೇ ಸುಮ್ಮನೆ .. ಎಲ್ಲವೂ  ನಂಗೆ  ಕೈಗೆ ನಿಲುಕದ ನಕ್ಷತ್ರಗಳೇ ಎಂದು ನಿಟ್ಟುಸಿರು ಬಿಟ್ಟೆ.
        ಸ್ವಲ್ಪದಿನ ಕಳೆದು  ಮತ್ತೆ ಭಾರತಕ್ಕೆ ಬರುವುದು ಇದೆ ಅಂದುಕೊಂಡು ಸ್ವಲ್ಪ ನನಗೆ ನಾನೆ ಸಮಾಧಾನ ಮಾಡಿಕೊಂಡೆ.  ಆಮೇಲೆ ಒಂದು ದಿನ ಫೇಸ್ಬುಕ್ ನಲ್ಲಿ ನನ್ನ ಮನೆದೇವರು ಸತೀಶ್ ಜೊತೆ ಸುಮಾರು ಹರಟಿದರು.. ಅಲ್ಲೋ ಅದೇಯಾ ಬರಿ ಕ್ರಿಕೆಟ್ .. ರಾಮ ರಾಮ !!! ಮೊನ್ನೆ ಏಪ್ರಿಲ್ ನಲ್ಲಿ ಹೋಗೋವಾಗ ನಿರ್ಧರಿಸಿಯೆ  ಹೋಗಿದ್ದೆ ಈ ಸಲ ಭೇಟಿ ಮಾಡಿಯೇ  ಸಿದ್ದ ಅಂತ. ಅಂತು ಒಂದು ಸಂಜೆ ದು೦ಬಾಲು  ಬಿದ್ದು ನಾನೇ ಫೋನ್ ಮಾಡಿ ಮನೆಯಲ್ಲಿ ಇದ್ದರೋ  ಅಂತ ಖಾತರಿ ಮಾಡಿಕೊಂಡೆ. ನನ್ನ ಮನೆ ದೇವರ ಜೊತೆ ಹೋದೆ. ಸರಳ ವಿರಳ ವ್ಯಕ್ತಿ , ಅಪರೂಪ . ಏನೋ ೪  ಗೆರೆ ಎಳೆದ ಕೂಡಲೇ ಮೆರೆದಾಡುವ ಜನ ಹೆಜ್ಜೆಗೆ ೪ ಸಿಗೋವಾಗ .... ಇದಕ್ಕೆ ಇವರು ಅಪವಾದ. ತುಂಬಾ ಸರಳ ವ್ಯಕ್ತಿ. ಮನೆ ಹೊಕ್ಕಕೂಡಲೇ  ನಂಗೆ ದಿಟ್ಟ ಚಿತ್ರಣ , ನಾನು .. ಶಿವ ಪೂಜೆಯಲ್ಲಿ  ಕರಡಿ !! ಅ೦ದು ಯಾವುದೊ ಕ್ರಿಕೆಟ್ ಮ್ಯಾಚ್ ಇತ್ತು. ಹೀಗಾಗಿ ನನ್ನ ಮನೆದೇವರು ನನ್ನ ಮಾತ್ನಡೋಕೆ ಬಿಡೋದಿಲ್ಲ ಅಂತ ಅರಿವಾಗಿ ಹತಾಶಳಾದೆ. ವಾಸ್ತವ ಅದೇ ಆಯಿತು. ನನ್ನ ಮನೆದೇವರು ಅದೇ ಮಾಡಿದ್ದೂ ನಂಗೆ ಮಾತ್ನಡೋಕೆ ಅವಕಾಶ ಕೊಡಲೇ ಇಲ್ಲ .ಬರೀ ಕ್ರಿಕೆಟ್ ನಲ್ಲೆ ಅದ್ದಿ ತೆಗೆದರು. ಆದರೂ ನಡುವೆ ಸ್ವಲ್ಪ ಬಾಯಿ ಹಾಕಿ ಕಾರ್ಟೂನ್ ಬಗ್ಗೆ  ಮೆಚ್ಚುಗೆ ವ್ಯಕ್ತ ಪಡಿಸಿದೆ. ಆಗ ಅವರ ಸರಳತೆ ಇನ್ನು ಹೆಚ್ಚು ಸ್ಪಷ್ಟ ವಾಯಿತು . ಕಳೆದ ಬಾರಿ  ನಾವು ಅವರನ್ನು ಭೇಟಿ ಮಾಡಲು ಹೋಗಿ, ಸಿಗದೇ ಹೋದ ಮೇಲೆ ನಮ್ಮನು ಅರಸಿ ಅವರು ಮನೆಗೆ ಬಂದಿದ್ದರು ಅಂತೆ. ನೀವು ವಾಪಾಸು ಹೋಗಿದ್ದೆ ಗೊತ್ತಾಗ್ಲಿಲ್ಲ. ಅಂದಾಗ ಏನು ಹೇಳುವುದು ತಿಳಿಯದಾದೆ.   ಏನೆಲ್ಲಾ ಯೋಚಿಸಿ ಹೋಗಿದ್ದೆ . ಎಲ್ಲ ಎಳ್ಳುನೀರು ಬಿಟ್ಟು ಬರೋಹಾಗೆ ಆಯಿತು.  ನಡು ನಡು ಸ್ವಲ್ಪ ಸ್ವಲ್ಪ ಮಾತುಕತೆ ಆಯಿತು. ಸತೀಶ್ ಶೃಂಗೇರಿ ಅವರ ನೆನಪುಗಳು, ಹೀಗೆ  ಅಲ್ಲೊಂದು ಚೂರು ಇಲ್ಲೊಂದು ಚೂರು !.. ನಡುವೇ ೨ ಫೋಟೋ ಬೇಕೆಂದು ಪಟ್ಟು ಹಿಡಿದೆ.  ಹೀಗಾಗಿ ಸಿಕ್ಕಿತು ಇಲ್ಲಾಂದ್ರೆ ಇದು ಇಲ್ಲ ನನ್ನ ಪಾಲಿಗೆ. ಮಾತನಾಡಿದು ಬರಿ ನನ್ನ ಮನೆದೇವರು ಅಷ್ಟೇ .. ನನಗೆ ಅವಕಾಶ ಸಿಗಲೇ ಇಲ್ಲ. ನಾನು ಮಾತಿಗೆ ಇಳಿವೆ ಅಂತ ಸೂಚನೆ ಸಿಕ್ಕಿತೋ ...  ಇಷ್ಟಾದಾಗ ನನ್ನ ಮನೆದೇವರ ಆರ್ಡರ್ ಸಾಕು ಇನ್ನು ಮನೆಗೆ ಹೋಗೋಣ ..... ಇಷ್ಟಾದ ಮೇಲೆ ಅಲ್ಲಿ ನಾನು ನಿಲ್ಲುವುದು ತರವೇ??? ಹೊರಟು ನಿಂತೆ. "ಒಂದು ಭಾನುವಾರ ಜೊತೆಗೆ ಊಟಕ್ಕೆ ಬನ್ನಿ" ಅ೦ದು ನೀಡಿದ ಆಮಂತ್ರಣ ಇನ್ನು ಹಾಗೆಯೇ ಇದೆ. ೨ ಭಾನುವಾರವೂ ಏನೇನೋ ಮಾಡಿ ಮುಗಿಯದ ಆದಿ ಅಂತ್ಯ ಇಲ್ಲದ ಕೆಲಸಗಳು.  
      ಉಪಾಯ ಇಲ್ಲದೆ ಮತ್ತೆ ಭಾರತದ ನೆನಪುಗಳಿಗೆ  ಸ್ವಲ್ಪ ದಿನದ  ಅಲ್ಪ ವಿರಾಮ ಕೊಟ್ಟು ಬಂದೆ!!

1 comment:

Srinidhi Rao said...

Padmapani Jodidar: ನಿಮಗೆ ಸಿದ್ಧಿಸಿದ ಈ ಸರಳ,ಮನಮುಟ್ಟುವ ಬರವಣಿಗೆಯ ಅಭಿಮಾನಿ ನಾನು. ಮೊದಲನೆಯ ವಾಕ್ಯದಿಂದಲೇ ನಮ್ಮನ್ನು ನೀವು ಬರೆಯಲಿರುವ ವಿಷಯದ ಒಳಗಡೆ ಎಳೆದುಕೊಳ್ಳುವಿರಿ(Y)