ನನ್ನ ಅಮ್ಮಮ್ಮನ(ಅಜ್ಜಿ) ಮನೆ ಅಂದ್ರೆ ಅದೊಂದು ಥರ ಮಠವೇ . ಅಮ್ಮಮ್ಮನಿಗೆ ಮಡಿ
ಜಾಸ್ತಿ . ಸಾಕು ಪ್ರಾಣಿಗಳು ಅಂದ್ರೆ ಹಟ್ಟಿಯಲ್ಲಿ ದನ ಕರು ,ಮನೆ ಒಳಗೆ ಬೆಕ್ಕು ಇಷ್ಟೇ.
ಯಾಕೋ ಏನೋ ಗೊತ್ತಿಲ್ಲ . ನಾಯಿ ಕಂಡರೆ ಅವರಿಗೆ ಆಗದು. ಎಷ್ಟೋ ಸಲ ಅವರ ಮನ ಒಲಿಸಲು
ಪ್ರಯತ್ನಿಸಿ ನನ್ನ ಮಾವ ಕೈ ಚೆಲ್ಲಿ ಕೂತರು . ಹೀಗಾಗಿ ನಾವೆಲ್ಲಾ ನಮ್ಮ ಅಮ್ಮಮ್ಮ ನ ಮನೆ
ಅಂದ್ರೆ ಮಠ ಅಂತ ಸಿಕ್ಕಾಪಟ್ಟೆ ತಮಾಷೆ ಮಾಡ್ತಾ ಇದ್ದೆವು . ಇದೆಲ್ಲಾ ೧೯೯೨-೧೯೯೩ ರ
ಆಸು ಪಾಸು ! ಆದರೂ ಮನೆಗೊಂದು ನಾಯಿ ತಂದು ಸಾಕಬೇಕು ಅಂತ ಮಾವನಿಗೆ ಅದಮ್ಯ ಆಸೆ. ತಂದು
ಸಾಕೋದು ದೊಡ್ಡ ವಿಷಯ ಅಲ್ಲ. ಆದರೆ ನಾಯಿಗೆ ಯಾವರೀತಿಯಲ್ಲೂ ಹಿಂಸೆ ಆಗಬಾರದು ಅನ್ನೋ
ಕಾಳಜಿ.
ಅಂತೂ ಮೀನಾ ಮೇಷ ಲೆಕ್ಕಾಚಾರ ಮಾಡಿ ನಾಯಿಮರಿ ಮಠಕ್ಕೆ ಆಗಮಿಸಿತು. ಅಬ್ಬಾ
ಎಷ್ಟು ಮುದ್ದಾಗಿತ್ತು. ನಾನು ಸ್ವಾಗತ ಕೋರೋಕೆ ಸಂಜೆ ಶಾಲೆಯಿಂದ ನೇರ ಅಮ್ಮಮ್ಮನ
ಮನೆಗೆ. ಅವನು ಮನೆಗೆ ಆಗಮಿಸಿದಾಗ ಚಂದ್ರೋದಯ ಆಗಿತ್ತು . ಒಳ್ಳೆ ಪುಟು ಪುಟು ಇದ್ದ .
ಕರ್ರಗೆ ಡಾಂಬರು ಬಣ್ಣ, ಫಳ ಫಳ ಹೊಳೆಯುತ್ತಿದ್ದ. ಸಿಕ್ಕಾಪಟ್ಟೆ ಪೋಕ್ರಿ . ಕರೆಂಟು
ಬೇರೆ ಹೋಗಿ ರಾಮ ರಾಮ .. ಕತ್ತಲೆ, ಅವ ಬೇರೆ ಕಪ್ಪು ಕಾಳ!! ಅವನನ್ನು ಕಟ್ಟಿ ಹಾಕಬೇಕು
ಎಂದರೆ ನಮ್ಮಿಬ್ಬರಿಗೂ ಸಾಕೋ ಸಾಕು ಮಾಡಿ ಬಿಟ್ಟ. ಆಗಲೇ ಅವನಿಗೆ ನಾಮಕರಣ "ಕಾಳು".
ಆ ನಂತರ ನನ್ನ ಮಾವ ನಂಗೆ ಒಂದಿಷ್ಟು ಸಲಹೆ ಸೂಚನೆ ಕೊಟ್ಟರು. ಅವನು ಸಣ್ಣ ಮರಿ ಹಾಗೆ ಬಿಟ್ಟು ಬಿಟ್ಟರೆ ಬೇರೆ ನಾಯಿಗಳು ಏನಾದ್ರು ಬಂದು ಜಗಳಮಾಡಿ , ಗಾಯ ಮಾಡಿ ತೊಂದರೆ ಮಾಡೋದು ಬೇಡ ಸ್ವಲ್ಪ ದಿನ ಕಟ್ಟಿ ಹಾಕೋಣ. ಆದರೆ ಬೆಳಗ್ಗಿಂದ ಸಂಜೆವರೆಗೆ ಕಟ್ಟಿ ಹಾಕಿದರೆ ಅವನು ನೈಸರ್ಗಿಕ ಕರೆಗೆ ಏನು ಮಾಡೋದು ? ಹೀಗಾಗಿ ನೀನು ಶಾಲೆಯಿಂದ ಬಂದವಳು ಮನೆಗೆ ಹೋಗಿ ಬ್ಯಾಗು ಇಟ್ಟು ,ಬೇಗ ಶುಚಿಯಾಗಿ ಕಾಳುವನ್ನು ವಾಕಿಂಗ್ ಕರೆದು ಕೊಂಡು ಹೋಗು. ನಾನು ಬರುವಾಗ ತಡ ಆಗುತ್ತೆ . ಆಮೇಲೆ ನಾನು ಬಂದ ನಂತರ ಇನ್ನೊಮ್ಮೆ ಕರಕೊಂಡು ಹೋಗುವೆ . ಬೆಳಗ್ಗೆ ಅವನಿಗೆ ಹಾಲು ರಸ್ಕ್ ಹಾಕಿ ಹೋಗುತ್ತಿದ್ದರು . ಆದರೆ ಮಧ್ಯಾನ್ನದ ಊಟ ಯಾರು ಹಾಕೋದು? ಅಮ್ಮಮ್ಮನಿಗೆ ನಾಯಿ ಕಂಡರೆ ಆಗೋದಿಲ್ವೆ? ಆದರೂ ಸರಿ ನಿನ್ನ ನಾಯಿ ಉಪವಾಸ ಸಾಯೋದು ಬೇಡ ಮಧ್ಯಾಹ್ನ ಒಂದು ಊಟ ನಾನೇ ಹಾಕುವೆ ಬೇರೆ ಯಾವ ಸೇವೆಗೂ ನಾನು ಸಿದ್ದಳಿಲ್ಲ ಎಂದು ತಾರಮಯ್ಯ ಹೇಳಿದ್ರು.
ದಿನ ಸಂಜೆ ನಾನು ವಾಕಿಂಗ್ ಕರೆದು ಕೊಂಡು ಹೋಗುತ್ತಿದ್ದೆ. ಅವನಿಗೆ ಕುರುಕುರು ತಿಂಡಿ ಇಷ್ಟ , ಅವನಿಗಾಗಿ ನನ್ನ ಮನೆಯಿಂದ ಕದ್ದು ಪುಟ್ಟ ಕವರಿನಲ್ಲಿ ಹಾಕಿ ದಿನವೂ ಜೇಬು ಇದ್ದ ಅಂಗಿಯೇ ಹುಡುಕಿ ಹಾಕಿ ಅದ್ರಲ್ಲಿ ಸಾಗಿಸಿ ಬಿಡ್ತಾ ಇದ್ದೆ. ಅವನು ಒಂದೇ ವಾರಕ್ಕೆ ನನ್ನ ಬಾಲ ಹಿಡಿದೇ ಬಿಟ್ಟ ನನ್ನ ಹೆಜ್ಜೆ ಸಪ್ಪಳ ಕೇಳಿದ ಕೂಡಲೇ ಬಾಯಿ ಚಪ್ಪರಿಸೋಕೆ ಶುರು. ನಾನು ಕಾಳು ಜೊತೆ ಜೊತೆಯಲ್ಲಿ ವಾಕಿಂಗ್ . ಈ ನಡುವೆ ಮಾವಂಗೆ ೪ ದಿನ ಮೈಸೂರಿಗೆ ಏನೋ ಒಂದು ಕಾನ್ಫರೆನ್ಸ್ ಗೆ ಹೋಗುವ ಸಂದರ್ಭ ಬಂತು . ಈಗ ದೊಡ್ಡ ಸಮಸ್ಯೆ ಕಾಳುನನ್ನು ಏನು ಮಾಡೋದು ? ಅವನಿಗೆ ದಿನಾ ಸ್ನಾನ , ಬೆಳಗ್ಗಿನ ವಾಕಿಂಗ್ , ಬೆಳಗ್ಗೆ ಹಾಲು ರಸ್ಕ್ ಹಾಕೋದು ಏನು ಮಾಡೋದು ಇಷ್ಟು ಕೆಲಸ ... ನಾನು ಮಾಡುವೆ ಎಂದು ಉಸ್ತುವಾರಿ ವಹಿಸಿ ಕೊಂಡೆ. ಅಂತೂ ನಾನು ಕಾಳು ತುಂಬಾ ಕ್ಲೋಸ್ ಫ್ರೆಂಡ್ ಆದೆವು . ಯಾವ ಕಿರಿ ಕಿರಿ ರಗಳೆ ಮಾಡದೇ ಸ್ನಾನಕ್ಕೆ ವಾಕಿಂಗ್ ಗೆ ಬರುತ್ತಿದ್ದ.
ಒಂದು ದಿನ ಭಾನುವಾರ ಹೀಗಾಗಿ "ನಿದ್ದೆಯ ಮರ'' ಎಂದೇ ಹೆಸರುವಾಸಿಯಾದ ನಾನು ಬೆಳಗ್ಗೆ ೮ ಘಂಟೆಗೆ ಎದ್ದು ಮತ್ತು ನಾಲಕ್ಕು ಸಲ ಹೊರಳಿ ಎದ್ದು ಮಾಡಿ ಅವನ ಸೇವೆಗೆ ಹೋಗಿ ಸ್ನಾನ ಮಾಡಿಸಿ ಅವನನ್ನು ಒಂದು ಕಡೆ ಕಟ್ಟಿ ಹಾಕಿದ್ದೆ . ಸ್ವಲ್ಪ ಹೊತ್ತಿಗೆ ನನ್ನ ಅಮ್ಮಮ್ಮ ಅವರ ಒಂದು ರೇಷ್ಮೆ ಸೀರೆಯನ್ನು ಅಲ್ಲೇ ಬಿಸಿಲಿಗೆ ಸರಿಗೆಯಲ್ಲಿ ಹರವಿದರು. ನಾನು ಕಾಳು ಮೈ ಒಣಗಲಿ ಅಂತ ಕಾಯಿತ ಇದ್ದೆ. ಮನೆ ಒಳಗೆ ಬಂದು ತರಂಗ ಓದೋದ್ರಲ್ಲಿ ಬಿದ್ದು ಕೊಂಡೆ . ಸ್ವಲ್ಪ ಹೊತ್ತಿಗೆ ಹೊರಗೆ ಹೋಗಿ ನೋಡಿದರೆ ಏನು ಇದೆ ಅಲ್ಲಿ ?? ಅಮ್ಮಮ್ಮನ ಒಂದು ರೇಷ್ಮೆ ಸೀರೆ ೪ ಸೀರೆ ಮಾಡಿ ಬಿಟ್ಟಿದ್ದ ನಮ್ಮ ಸೂಪರ್ ಜಾದುಗಾರ್ ಮಿಸ್ಟರ್. ಕಾಳು!!! ಅದು ಅಜ್ಜ ಅಮ್ಮಮ್ಮನಿಗೆ ಕೊಡಿಸಿದ ಕೊನೆಯ ರೇಷ್ಮೆ ಸೀರೆ. ನಂಗೆ ಪರಿಣಾಮ ನೆನೆದು ಕೈ ಕಾಲು ನಡುಗೋಕೆ ಶುರು. ಈಗ ಬಯ್ಯೋದಾದರೂ ಯಾರಿಗೆ? ಕಾಳುಗಾ?? ಅಲ್ಲ ಅಮ್ಮಮ್ಮನಿಗಾ? ಅಮ್ಮಮ್ಮ ಹೊರಗೆ ಬಂದ್ರು ನೋಡೋಕೆ ಏನಿದೆ ಅಲ್ಲಿ .. ?? ಏ ಕಾಳು ಏನೋ ನೀನು ಮಾಡಿದ್ದೂ ? ಅಂತ ಗಟ್ಟಿ ದನಿಯಲ್ಲಿ ಕೇಳಿದ್ದೆ ತಡ ಪಾಪ, ತಲೆ ಅಡಿಗೆ ಹಾಕಿ ಬಾಲ ಮುದುರಿ ಕೂತು ಬಿಟ್ಟ ಚಂದಕ್ಕೆ, ಅಮ್ಮಮ್ಮ ಏನೂ ಹೇಳದೆ ... ೪ ತುಂಡು ಸೀರೆಯನ್ನು ಆರಿಸಿ ಕೊಂಡು ಒಳ ಹೋದರು.
ಈ ಆವಾಂತರ ಮಾಡಿಕೊಂಡ ಮೇಲೆ ಕಾಲು ನನ ಅಮ್ಮಮ್ಮನಿಗೆ ಸಿಕ್ಕಪಟ್ಟೆ ಹೆದರುತ್ತಿದ್ದ . "ಏನೋ... ಕಾಳು" ಅಂದ್ರು ಅವನ ಮುಖ ತುಂಬಾ ದೈನ್ಯವಾಗುತ್ತಿತ್ತು. ಕಾನ್ಫೆರೆನ್ಸ್ ಮುಗಿಸಿ ಬಂದ ಮಾವನನ್ನು ತರಾಟೆಗೆ ತೆಗೆದು ಕೊಂಡ ಅಮ್ಮಮ್ಮ "ನೋಡೋ ನಿನ್ನ ನಾಯಿಯನ್ನು ಒಳ್ಳೆ ಮಾತಿನಲ್ಲಿ ಯಾರಿಗಾದರು ಕೊಟ್ಟು ಬಿಡು ಅದು ಇಲ್ಲಿ ಇರೋದು ಬೇಡ "ಅಂತ ಹಠ ಹಿಡಿದರು. ಆದರೆ ಅದಾಗಲೇ ಮಾವನ ಹೃದಯ ಕದ್ದ ಕಾಳು ವನ್ನು ಬೇರೆ ಯಾರಿಗೂ ಕೊಡೋದು ದೂರದ ಮಾತು. ಅವನನ್ನು ಕಳುಹಿಸ ಬೇಕು ಎಂದು ಅಮ್ಮಮ್ಮನ ಹುನ್ನಾರ. ಕೊನೆಗೆ ಮಾವನೆ ಗೆದ್ದು , ಕಾಳು ಮನೆ ಸದಸ್ಯನಾಗಿ ಹೋದ .

ಇನ್ನೊಮ್ಮೆ ಮನೆಯೊಳಗೇ ನಾನು ಅಮ್ಮ ಕಾಳುಗೆ ಬೈದಿದ್ದು ಅದನ್ನು ಕೇಳಿ "ಕಾಳು" ಬಂದ ದಾರಿಯಲ್ಲೇ ವಾಪಸು ಹೋದ ಘಟನೆ!!!
3 comments:
ಎಂತಹ ಮಾನವೀಯ ಸಂಬಂಧಗಳು ಸಾಕು ಪ್ರಾಣಿಗಳು ಕೂಡ ನಮ್ಮದೇ ಬಂಧು ಅನ್ನೋ ಹಾಗೆ ಆಗಿ ಬಿಡುತ್ತವೆ :)
ತುಂಬಾ ಇಷ್ಟ ಆಯಿತು ಅಕ್ಕ .
ಪಾಪ ಕಾಳು.... ಹೇಗೋ ಮಾವ ಆತನನ್ನು ಮನೆಯಲ್ಲೇ ಇರುವಂತೆ ಮಾಡಿದರಲ್ಲಾ... ತುಂಬಾ ಚೆನ್ನಾಗಿದೆ ಬ್ಲಾಕ್ ಕಾಳು. ನನಗೆ ನಾಯಿಗಳು ತುಂಬಾ ಇಷ್ಟ. ಅಮ್ಮಮ್ಮನಿಗೆ ಅಜ್ಜ ಕೊಡಿಸಿದ ಸೀರೆ ಹೋಗಿದ್ದಕ್ಕೆ ಸಿಕ್ಕಾಪಟ್ಟೆ ಬೇಜಾರಾಗಿರಬೇಕು ಅಲ್ವಾ....:)
ಕಾಳು ಗೆ ಕುರುಕಲು ತಿಂಡಿ ಹಾಕಿ ಬುಟ್ಟಿಗೆ ಹಾಕಿಕೊಂಡು ನಿನಗೆ ಅಂಟಿ ಕೊಂಡಿರುವಂತೆ ಮಾಡಿದ ಉಪಾಯ ಚೆನ್ನಾಗಿದೆ.. ಏನಂದ್ರು ಈ ಮೂಕ ಪ್ರಾಣಿಗಳು ಒಮ್ಮೆ ಹೊಂದಿಕೊಂಡರೆ ಅವುಗಳ ಬಂಧನ ದಿಂದ ಬಿಡಿಸಿಕೊಳ್ಳೊದು ಕಷ್ಟ ..Aparna.
Post a Comment