Monday, February 4, 2013

Duranta



ಯಾಕೋ ಬೇಡ ಬೇಡಾ ಅಂದರೂ ಮತ್ತೆ ಮತ್ತೆ ಈ ಘಟನೆ ನೆನಪಾಗುತ್ತಿದೆ. ಯಾಕೆ ಇವಳು ಬರೀ ಶಿಕ್ಷಕ ವರ್ಗದವರನ್ನು ದೂಷಿಸುತ್ತಾಳೆ ಅದೂ ಶಿಕ್ಷಣ ತರಬೇತಿಯನ್ನೇ ಪಡೆದು ....
     ನನ್ನ ಪದವಿ ಶಿಕ್ಷಣ ದ ಸಮಯ ನಮಗೆ ಅರ್ಥ ಶಾಸ್ತ್ರಕ್ಕೆ ನಮಗಿಂತ ೨ ವರ್ಷ ಮಾತ್ರವೇ ವಯಸ್ಸಿನಲ್ಲಿ ಹಿರಿಯರಾದ ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿನಿ ಬಂದಾಗ , ನಮಗೆಲ್ಲ ಸಂಭ್ರಮ . ಅವರಿಗೆ ತಮ್ಮ ಪ್ರೊಫೆಸರ್ ಗಳೇ ಸಹುದ್ಯೋಗಿ ಗಳಾದಾಗ ಏನೋ ಒ೦ಥರಾ ಹಿಂಜರಿಕೆ . ಈ ಹುಡುಗರು ಅಬ್ಬಾ ಅವರ ಬೆವರು ಇಳಿಸಿ ಬಿಡುತ್ತ ಇದ್ರು. ಥೂ ನಂಗೆ ಈ ಹುಡುಗರನ್ನು ಅಲ್ಲೇ ಕತ್ತು ಹಿಸುಕಿ ಬಿಡೋ ಹಾಗೆ ಆಗ್ತಾ ಇತ್ತು. ಹೀಗಾಗಿ ನಾನು ಅವರ ಜೊತೆ ಸೇರಿ ಈ ಪುಂಡು ಹುಡುಗರಿಗೆ ಬುದ್ಧಿ ಕಲಿಸೋಕೆ ಹೊರಟೆ.ಹೀಗಾಗಿ ನಾನು ಅವ್ರಿಗೆ ತುಂಬಾ ಆಪ್ತ ಆದೆ. ನಮ್ಮ ಹೊಸ ಹೊಸ ಪ್ರಯೋಗಗಳು ಪುಂಡು ಹುಡುಗರನ್ನು ಕ್ಲಾಸ್ ನಲ್ಲಿ ಸುಮ್ಮನೆ ಕೂರಿಸುವಲ್ಲಿ ಯಶಸ್ವಿ ಆಯಿತು. ಹೀಗಾಗಿ ಸಮಯ ಸಿಕ್ಕಾಗ ಅವರ ಸ್ನಾತಕೋತ್ತರ ಪದವಿ ಅನುಭವಗಳು ಹೇಳ್ತಾ ಇದ್ರು. ಕೆಲವು ತುಂಬಾ ತಮಾಷೆಯಾಗಿದ್ದರೆ ಇನ್ನು ಕೆಲವು ಕಲ್ಪನೆಗೂ ನಿಲುಕದ ಘೋರ ಸತ್ಯಗಳಾಗಿರುತ್ತಿದ್ದವು.
      ಒಂದು ದಿನ ಅವರ ದೂರದ ಸಂಬಂಧಿಗೆ ಆದ ಘೋರ ಅನ್ಯಾಯ ಹೇಳೋಕೆ ಶುರು ಮಾಡಿದ್ರು. ಆತ ಅಸಾಮಾನ್ಯ ಬುದ್ದಿವಂತ, ಪೋಕರಿ ಕ್ಲಾಸ್ ಗೆ ಹಾಜರಾದೆ ಇದ್ದರೂ ೯೫ ಕ್ಕಿಂತ ಹೆಚ್ಚು ಅಂಕ ಪಡೆದು ಕೊಳ್ಳುವ ಅಸಾಮಾನ್ಯ ಬುದ್ದಿಮತ್ತೆ ! ಎಲ್ಲ ವಿದ್ಯಾರ್ಥಿ ಸಂಘಟನೆ , ಚಳುವಳಿಗಳಲ್ಲಿ ,ಸ್ಪರ್ಧೆಗಳಲ್ಲಿ ಸದಾ ಮುಂದು. ಇಷ್ಟಾದರೂ ವಿಜ್ಞಾನ ಪದವಿ ಪರೀಕ್ಷೆಗಳಲ್ಲಿ ರಾಂಕ್ & ಭೌತ ಶಾಸ್ತ್ರ ವಿಷಯ ಕ್ಕೆ ಬಂಗಾರದ ಪದಕ ನೊಂದಿಗೆ ಉತ್ತೀರ್ಣ ನಾಗಿ ಹೊರ ಬಂದ. ನಂಗೆ ಏನು ವಿಷಯ ಹೇಳಿದ್ರು ನಾನು ಸುಮ್ಮನೆ ಕೇಳೋ ಜಾಯಮಾನದವಳು ಅಲ್ಲ. ಕೇಳೇ ಬಿಟ್ಟೆ "ಮೇಡಂ ಅಷ್ಟು ಬುದ್ದಿವಂತ ಹುಡುಗ ಮೆಡಿಕಲ್ ಅಥವಾ ಇಂಜಿನೀಯರ್ ಯಾಕೆ ಆಯ್ಕೆ ಮಾಡಿ ಕೊಳ್ಳದೇ ಬಿ.ಎಸ್ಸಿ ಗೆ ಸೇರಿ ಕೊಂಡ ?" ಆಗ ಆಕೆ ಇದು ಇನ್ನು ಕುತೂಹಲ ಕೆರಳಿಸೋ ವಿಷಯ ಅವನಿಗೆ ಭೌತ ಶಾಸ್ತ್ರದಲ್ಲಿ (Physics ) ಸಂಶೋಧನೆ ಮಾಡಿ ಪಿ.ಹೆಚ್ ಡಿ . ಪಡೆದು ಕೊಳ್ಳುವ ಹಂಬಲವಿತ್ತು ಎಂದು ಹೇಳಿದರು.
          ರಾಂಕ್ ವಿಜೇತ ಅಂದ ಮೇಲೆ ಕೇಳಬೇಕಾ ಸಲೀಸಾಗಿ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಭೌತ ಶಾಸ್ತ್ರ ವಿಬಾಗಕ್ಕೆ ಸೇರಿ ಕೊಂಡ, ಮೊದಲೇ ಪದವಿ ಕಾಲೇಜಿನ ಪ್ರಾಂಶುಪಾಲರು 'ಇನ್ನು ಯೂನಿವರ್ಸಿಟಿ ಯಲ್ಲಿ ನಿನ್ನ ಪು೦ಡಾಟ ಮಾಡಬೇಡ ಕಣೋ .... ಬರಿ ಓದಿನ ಕಡೆ ಮಾತ್ರ ಇರಲಿ ನಿನ್ನ ಗಮನ' ಅಂತ ಹೇಳಿ ಕಳುಹಿಸಿದ್ದರ ಪರಿಣಾಮ ಸುಮ್ಮನೆ ಇದ್ದ . ಆದರೂ ಒಂದು ದಿನ ತರಗತಿಯಲ್ಲಿ ಏನೋ ಒಂದು ಸಮೀಕರಣ ಬಿಡಿಸಲು ಭೌತ ಶಾಸ್ತ್ರದ ಪ್ರಾಧ್ಯಾಪಕರು ಒದ್ದಾಡುತ್ತಿದ್ದಾಗ ಇವನು ಮುಂದೆ ಹೋಗಿ ಸಮೀಕರಣ ಸಲೀಸಾಗಿ ಪರಿ ಹರಿಸಿ ಕೊಟ್ಟು ಬಂದ. ಈ ಹುಡುಗನೂ ಸುಮ್ಮನೆ ಇರ ಬಹುದಿತ್ತು ಹಾಳು ಹುಡುಗು ಬುದ್ದಿ ಬಾಯಿ ಬಿಟ್ಟು ಹೇಳಿಯೇ ಬಿಟ್ಟ "ಸರ್ ನಿಮಗೆ ಅಷ್ಟು ಗೊತ್ತಾಗ್ಲಿಲ್ವಾ ಎಷ್ಟು ಸರಳ ಆ ಸಮೀಕರಣ " ಒಂದರ್ಥದಲ್ಲಿ ಸರಿಯೇ ಅವನು ಹೇಳಿದ್ದು ದಶಕಗಳ ಕಾಲ ಆ ಭೌತ ಶಾಸ್ತ್ರದ ವಿಭಾಗಕ್ಕೆ ಹಿರಿಯ ಪ್ರಾಧ್ಯಾಪಕರಾಗಿದ್ದ ಅವರು ಸಮೀಕರಣ ವಿಷಯಕ್ಕೆ ಬಂದಾಗ ಅವರ ಜ್ಞಾನ ಕಮ್ಮಿ ಆಯಿತು.
        ಅಲ್ಲಿಂದ ಅವನಿಗೆ ಕಿರಿ ಕಿರಿ ಶುರುವಾಯಿತು. ತೀರ ಕಷ್ಟದ ವಿಷಯಗಳೇ ಮೇಲೆ ಪ್ರಾಜೆಕ್ಟ್ ಕೊಡುವುದು , ಅಂಕಗಳ ಕಡಿತ ಇತ್ಯಾದಿ. ಇವನ ಅಸಾಮಾನ್ಯ ಬುದ್ದಿಗೆ ಅವರ ಯಾವ ಕಷ್ಟದ ವಿಷಯವೂ ಕಬ್ಬಿಣದ ಕಡಲೆ ಆಗಲೇ ಇಲ್ಲ ಆ ಹುಡುಗನಿಗೆ! ಎಲ್ಲಾ ಲೀಲಾ ಜಾಲವಾಗಿಯೇ ಕ್ಲಪ್ತ ಸಮಯದಲ್ಲಿ ಮುಗಿಸಿ ಅವರೆದುರು ಇಟ್ಟು ಸುಮ್ಮನಾಗುತ್ತಿದ್ದ. ವರ್ಷ ಕಳೆದು ಫಲಿತಾಂಶ ಬಂದಾಗ ಅದೇ ಬಂಗಾರದ ಪದಕ ದೊಂದಿಗೆ ಪ್ರಥಮ ಸ್ಥಾನ ಪಡೆದು ವಿಶ್ವ ವಿದ್ಯಾನಿಲಯ ದಿಂದ ಹೊರ ಬಂದ. ಇಲ್ಲಿಗೆ ಅವನ ಕನಸು ಮುಗಿಯಲಿಲ್ಲವಲ್ಲಾ .. ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿಯೇ ಭೌತ ಶಾಸ್ತ್ರ ದಲ್ಲಿ ಪಿ.ಹೆಚ್ ಡಿ ಮಾಡುವ ಕನಸು. ಅರ್ಜಿ ಹಾಕಿದ ಪ್ರವೇಶ ಸಿಗಲಿಲ್ಲ.ಹೂ೦ ಈಬಾರಿ ಆಗಲಿಲ್ಲ. ಹೆಚ್ಚಿನಂಶ ನನಗಿ೦ತ ಅಧಿಕ ಅಂಕ ಪಡೆದವರು ಇದ್ದರೇನೋ ? ಅನುಭವ ಜಾಸ್ತಿ ಇದ್ದವರೂ ಇದ್ದೀರ ಬೇಕು ಎಂದು ಸುಮ್ಮನಾಗಿ ಒಂದು ಕಾಲೇಜ್ ಗೆ ಸೇರಿ ತನ್ನ ಉಪನ್ಯಾಸ ವೃತ್ತಿ ಪ್ರಾರಂಭಿಸಿದ. ವರುಷ ಒಂದು ಉರುಳಿತು , ಮತ್ತದೇ ಕನಸನ್ನು ಹೊತ್ತು ವಿಶ್ವ ವಿದ್ಯಾನಿಲಯಕ್ಕೆ ಅರ್ಜಿ ಹಾಕಿದ , ಈ ಭಾರಿಯೂ ಅದೇ ಪುನರಾವರ್ತನೆ !! ಈ ಬಾರಿ ಯಾಕೆ ಹೇಗಾಯಿತು ಅಂತ ಮೂಲ ಹಿಡಿದು ಹೊರಟ . ಆಗ ಅವನಿಗೆ ಸಿಕ್ಕ ಮಾಹಿತಿ ಅವನ ಬದುಕೇ ಬದಲಾಗುವಂತೆ ಮಾಡಿತು. ಅವನು ಅವನ ಇಷ್ಟದ ಭೌತ ಶಾಸ್ತ್ರದಲ್ಲಿ ಸಂಶೋಧನೆ ಮಾಡುವುದು ಸಾಧ್ಯ ವಿರಲಿಲ್ಲ ಅದೂ ಎಲ್ಲೀ ವರೆಗೆ ಅಂದ್ರೆ ಆ ಸಮೀಕರಣ ಬಿಡಿಸಲು ಬಾರದ ಪ್ರಾಧ್ಯಾಪಕರು ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಇರುವವರೆಗೆ ! ಅವರೇ ಸಂಶೋಧನೆ ಮಾಡುವವರಿಗೆ ಗೈಡ್!!!!
        ಅವರ ಲೆಕ್ಕಾಚಾರ ಹೀಗಿತ್ತು ಇವನನ್ನು ಸಂಶೋದನೆ ಮಾಡಲು ಬಿಟ್ಟರೆ ಇವನು ನನ್ನ ಹುದ್ದೆಗೆ ಸಂಚಕಾರ ತರುತ್ತಾನೆ.ಹೀಗಾಗಿ ತನ್ನ ಹುದ್ದೆ ಉಳಿಯಬೇಕೆಂದರೆ ಇವನು ಇಲ್ಲಿ ಸಂಶೋಧನೆ ಮಾಡ ಬಾರದು ಅಂದರೆ ಅವನಿಗೆ ಇಲ್ಲಿ ಪ್ರವೇಶ ಕೊಡ ಕೂಡದು.ಈ ವಿಷಯ ತಿಳಿಯುತ್ತಿದ್ದಂತೆ ಆ ಹುಡುಗನಿಗೆ ಮಾನಸಿಕವಾಗಿ ಆಘಾತವಾಯಿತು. ಮಾನಸಿಕ ರೋಗಿಯಾದ. ಯಾರು ಏನು ಸಲಹೆ ನೀಡಿದರೂ ಪ್ರಯೋಜನ ವಿಲ್ಲವಾಯಿತು , ಹಾಗಂತ ಅವನಿಗೆ ಬೇರೆ ಎಲ್ಲೇ ಆದರೂ ಸಂಶೋಧನೆ ಮಾಡಬಹುದಿತ್ತು. ಅವನದ್ದು ಒಂದೇ ಆಸೆ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿಯೇ ಭೌತ ಶಾಸ್ತ್ರ ದಲ್ಲಿ ಪಿ.ಹೆಚ್ ಡಿ ಮಾಡುವ ಕನಸು. ಈ ವಿಷಯ ಆ ಪ್ರಾಧ್ಯಾಪಕರಿಗೂ ತಿಳಿಯಿತು. ಇದನ್ನು ಕೇಳಿಯೂ ಅವರ ಮನ ಕರಗದೆ ಹೋಯಿತು ಅನ್ನುವುದು ಖೇದಕರ ಸಂಗತಿ. ಇಂದಿಗೂ ಆತ " ಸ್ನಾತಕ ಪದವಿ ಅದೂ ಗೋಲ್ಡ್ ಮೆಡಲ್ ಪಡೆದ ಮಾನಸಿಕ ರೋಗಿ "
ನಂಗೆ ಅವರು ಇಷ್ಟು ಹೇಳಿದ್ದು ಕೇಳಿದ ಮೇಲೆ ಏನೂ ಹೇಳೋಕೆ ಆಗದೆ ಬರೀ ಕಣ್ಣೀರು :'( :'(
      ತುಂಬ ಸಲ ಈ ಮನಸ್ಸಿಗೆ ವಿಷಯ ಬಂದಾಗ ನಾನು ಯೋಚಿದ್ದು ಒಂದೇ ಅವನು ಅವರ ಹುದ್ದೆಗೆ ಸಂಚಕಾರ ತರ ಬಾರದು ಎಂದರೆ ಬೇರೆ ಯಾವ ಅನ್ಯ ಮಾರ್ಗ ಇರಲಿಲ್ವೆ? ತಣ್ಣಗೆ ಪಿ. ಹೆಚ್ ಡಿ . ಮುಗಿಸುತ್ತಿದ್ದಂತೆ ವಿದೇಶೀ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡುವುದು. ಅವನು ಜ್ಞಾನ ದಾಹಿ ಹೇಗೂ ವಿದೇಶಿ ವ್ಯಾಸಂಗಕ್ಕೆ ಹೋಗ್ತಾ ಇದ್ದ !!
          ಆದರೆ ನಂಗೆ ಕೊನೆಗೆ ಅನ್ನಿಸಿದು ಇಷ್ಟೇ ಆ ಪ್ರೊಫೆಸರ್ ಗೆ ಅವನ ಬುದ್ದಿಮತ್ತೆ ಮೇಲೆ ಅಪಾರ ಗೌರವ, ಪ್ರೀತಿಯ ಬದಲು ಮತ್ಸರ ಇತ್ತು. :(

No comments: