ಮನೆಯೇ ಮೊದಲ ಪಾಠ ಶಾಲೆ ಜನನಿ ತಾನೇ ಮೊದಲ ಗುರು ! ಅಂದ ಹಾಗೆ ಇಲ್ಲಿ ನಾ ಹೇಳೋಕೆ ಹೊರಟಿದ್ದು ನನ್ನ ಅಮ್ಮನ ಬಗ್ಗೆಯಲ್ಲ ಬದಲಿಗೆ ಅಮ್ಮಮ್ಮನ(ಅಜ್ಜಿ) ಬಗ್ಗೆ ! ನನ್ನ ಅಜ್ಜಿ ಸಿಕ್ಕಾ ಪಟ್ಟೆ ಓದ್ತಾ ಇದ್ರು, ಇದೆಲ್ಲಾ 1988 ರ ಆಸು ಪಾಸು . ಆ ಸಮಯದಲ್ಲಿ ಮನೆಗೆ ತರಂಗ, ಸುಧಾ , ಇನ್ನು ಏನೇನೋ ಪತ್ರಿಕೆಗಳು ಬರುತ್ತಿದ್ದವು . ಆದರೂ ಈ ಅಮ್ಮಮ್ಮ ಒಂದು ಚೂರು ದಿನಸಿ ಕಟ್ಟಿ ಬಂದ ಪೇಪರ್ ಬಿಡುತ್ತಿರಲಿಲ್ಲ . ಅದು ಕನ್ನಡದಲ್ಲಿ ಇದ್ದರೆ ಅದನ್ನು ಮೆತ್ತಗೆ ಮಡಿಸಿಟ್ಟು ಅವರ ವಿರಾಮದ ಕಾಲದಲ್ಲಿ ಓದುತ್ತಾ ಇದ್ದಿದ್ದು ನಂಗೆ ಮಬ್ಬು ಮಬ್ಬು ನೆನಪು.
ಅವರ ಓದುವ ಗೀಳು ಎಷ್ಟು ಇತ್ತೆಂದರೆ , ನಂಗೆ ಆಗ ೩ ವರ್ಷ ಅಷ್ಟೇ ಮಳೆಗಾಲದಲ್ಲಿ ಅಮ್ಮಮ್ಮನ ಮನೆಗೆ ಬಂದಾಗ ಮನೆಯ ಪಕ್ಕ ಒಂದು ದೊಡ್ಡ ತೋಡು, ಮಳೆ ಬಂತೆಂದರೆ ಗುಡ್ಡೆಯ ನೀರೆಲ್ಲವೂ ಈ ತೋಡಿನ ಮೂಲಕ ಹರಿದು ದೊಡ್ಡ ತೊರೆ ಸೇರುತ್ತಿತ್ತು. ನಂಗೆ ಆಗ ಮಳೆ ನೀರಿನಲ್ಲಿ ಆಡುವುದೆಂದರೆ ಪಂಚ ಪ್ರಾಣ , ಈಗಲೂ ಅಷ್ಟೇ. ಪೇಪರ್ ನಲ್ಲಿ ದೋಣಿ ಮಾಡಿ ನೀರಿನಲ್ಲಿ ಬಿಟ್ಟು ಅದು ನೀರಿ ನಲ್ಲಿ ಹೋಗ್ತಾ ಇದ್ದಂತೆ ನಾನು ಮನೆಯ ಆವರಣದಲ್ಲಿ ಹಿಂಬಾಲಿಸ್ತಾ ಮತ್ತೆ ಮಳೆಯಲ್ಲಿ ನೆನೆದು ಕೊಂಡು ಮನೆಯ ಹಿಂಭಾಗದ ತೋಟಕ್ಕೆ ಓಡಿ ಅಲ್ಲಿಂದ ದೋಣಿ ಮರೆಯಾಗುವವರೆಗೆ ಆ ದೋಣಿಯ ಬೆನ್ನು ಹತ್ತುತ್ತಿದ್ದೆ . ಬೇರೆ ಪುಸ್ತಕ ಹರಿದು ಗೊತ್ತೇ ಇಲ್ಲದ ನಾನು ಒಂದು ದಿನ ಅಡುಗೆ ಮನೆಯಲ್ಲಿ ಇದ್ದ ಒಂದು ಗೂಡಿನಲ್ಲಿ ಅಮ್ಮಮ್ಮ ಮಡಿಸಿ ಇಟ್ಟ ಒಂದಿಷ್ಟು ಪೇಪರ್ ಎತ್ತಿ ಕೊಂಡು ಬಂದು ಅಜ್ಜನ ಹತ್ರ ಕೊಟ್ಟು ಒಂದಷ್ಟು ದೋಣಿ ಮಾಡಿಸಿ ಕೊಂಡು ನೀರಿನಲ್ಲಿ ದೋಣಿ ಆಟ ಆಡಿದ್ದೇ ಆಡಿದ್ದು ! ನನ್ನ ಪುಣ್ಯಕ್ಕೆ ಅದೇ ದಿನ ಮಧ್ಯಾಹ್ನ ಅಜ್ಜಿಗೆ ಸ್ವಲ್ಪ ಬಿಡುವು ದೊರೆತು ಅಜ್ಜಿ ಆ ಗೂಡಿನಲ್ಲಿ ಕೈ ಹಾಕಿದಾಗ ಅವರಿಗೆ ಅಲ್ಲಿ ಸಿಕ್ಕಿದು ಬರೀ ಪ್ಲಾಸ್ಟಿಕ್ ಕವರ್ ಗಳು ! ಇದ್ದ ಎಲ್ಲ ಪೇಪರ್ ಗಳು ನನ್ನ ದೆಸೆಯಿಂದ ದೋಣಿಯಾಗಿ ರೂಪಾಂತರ ಹೊಂದಿ ನೀರು ಪಾಲಾಗಿ ಮುಕ್ತಿಹೊಂದಿದ್ದವು. ಅಜ್ಜಿ ಮೆಲ್ಲ ಕೇಳಿದ್ರು ... "ಏನೇ ಮಿಟ್ಟು ಇಲ್ಲಿ ಮಡಿಸಿಟ್ಟ ಪೇಪರ್ ಎಲ್ಲಾ ಎಲ್ಲಿ ಎತ್ತಿ ಇಟ್ಟಿದ್ದೀಯಾ ? " 'ನಾನು ದೋಣಿ ಆಟ ಆಡಿದೆ ಅಮ್ಮಮ್ಮ.... ' "ಸರಿ ಎಲ್ಲ ದೋಣಿ ನಂಗೆ ತಂದು ಕೊಡು ನಾನು ಆ ಪೇಪರ್ ಓದಬೇಕು" ಅಂದಾಗ ನಂಗೆ ಕೈ ಕಾಲು ಎಲ್ಲ ಥರ ಥರ !
"ಏನೇ ಏನು ಮಾಡಿದೆ ಎಲ್ಲ??" ತೋಡಿನ ನೀರಿನಲ್ಲಿ ದೋಣಿ ಬಿಟ್ಟೆ ಉಗುಳು ನುಂಗಿ ಕೊಂಡು ಹೇಳಿದಾಗ ಅವರ ಮುಖದ ಭಾವ ಇನ್ನೂ ನನ್ನ ಕಣ್ಣ ಮುಂದೆ ಬರುತ್ತೆ. 'ಎಲಾ ತುಂಟಿ ದೋಣಿ ಮಾಡೋ ಮೊದಲು ಕೇಳಬಾರದಿತ್ತಾ ನನ್ನ' ಅಂದರು. ನಾನು ಆಗಲೇ ಚರ್ಚೆಗೆ ಇಳಿದೆ. ನೀವು ಪೇಪರ್ ನಲ್ಲಿ ಯಾರಿಗೂ ಏನೂ ಕಟ್ಟಿ ಕೊಟ್ಟಿದ್ದು ಈ ವರೆಗೆ ನಾನು ನೋಡೇ ಇಲ್ಲ, ಏನಿದ್ದರೂ ನೀವು ಬಾಳೆ ಎಳೆಯಲ್ಲಿ ತಾನೇ ಕೊಡುವುದು. ಹಿಂದೆ ಒಮ್ಮೆ ನೀವೇ ಅಲ್ವಾ ಆ ಗೂಡಿನಲ್ಲಿ ಇದ್ದ ಹಳೆ ಪೇಪರ್ ನಲ್ಲಿ ದೋಣಿ ಮಾಡಿ ಕೊಟ್ಟು ಅಂಗಳದ ನೀರಿನಲ್ಲಿ ಬಿಡು ಅಂದಿದ್ದು ಅದಿಕ್ಕೆ ನಾನು ಈ ಬಾರಿ ಗೂಡಿನಿಂದ ಪೇಪರ್ ತೆಗೆದೆ ಅಂದೆ. ಏನೂ ಮಾಡಲು ಆಗದ ಅಸಹಾಯಕ ಸ್ಥಿತಿ ಅವರದು. ಇಷ್ಟಾದಾಗ ಮಾವ ವಾರದ ತರಂಗ ಹಿಡಿದುಕೊಂಡು 'ಏನು ನಿಮ್ಮ ಅಜ್ಜಿ ಪುಳ್ಳಿ ರಾಮಾಯಣ?' ಅಂತ ತರಂಗ ಕೊಟ್ಟು ಹೇಗೂ ನನ್ನ ಅಮ್ಮಮ್ಮನನ್ನು ಸಮಾಧಾನಿಸಿದರು.
ಅದು ಸ್ವಾತಂತ್ರ್ಯದ ಪೂರ್ವಕಾಲ , ಅಮ್ಮಮ್ಮನಿಗೆ ಬಾಲ್ಯ ವಿವಾಹ ಆದರೂ ೫ ತರಗತಿ ವರೆಗೆ ಓದಿದ್ದರು. ಮದುವೆ ಆದಮೇಲೆ ಅತ್ತೆ ಸಿಕ್ಕಾಪಟ್ಟೆ ಘಾಟಿ ಅಂತೆ. ಏನು ಓದೋಕೂ ಬಿಡ್ತಾ ಇರಲಿಲ್ಲ ಅಂತೆ. ಆದರೂ ನನ್ನ ಅಮ್ಮಮ್ಮ ಪಕ್ಕದ ಮನೆಯಲ್ಲಿ ಇರುವ ಪುಸ್ತಕಗಳನ್ನು ತಂದು ಕದ್ದು ಮುಚ್ಚಿ ಗುಟ್ಟಾಗಿ ಓದಿಕೊಳ್ಳುತ್ತಾ ಇದ್ದರ೦ತೆ ಇದೆಲ್ಲ ನನ್ನ ಅಮ್ಮಮ್ಮನೆ ಹೇಳಿದ್ದು. ಅವರ ಓದಿಗೆ ಸರಿ ಸಹ ಕಾರ ದೊರೆತದ್ದೇ ನನ್ನ ಮಾವ ೬ ನೇ ತರಗತಿ ಸೇರಿದ ಮೇಲೆ ! ಆ ಶಾಲೆಯಲ್ಲಿ ದೊಡ್ಡ ಗ್ರಂಥಾಲಯ ಇತ್ತು. ಮಕ್ಕಳಿಗೆ ನೀತಿ ಕತೆ, ಚಂದಮಾಮ ಓದಲು ಮನೆಗೆ ಕೊಡುತ್ತಿದ್ದರು ಅದನ್ನೆಲ್ಲಾ ಅಜ್ಜಿ ಓದಿಕೊಳ್ತಾ ಇದ್ರು. ಇದೆ ಓದುವ ಗೀಳು ಮಾವನಿಗೂ ಸಾಂಕ್ರಾಮಿಕವಾಗಿ ಹಬ್ಬಿ ಪಠ್ಯ ಪುಸ್ತಕದ ಒಳಗೆ ಈ ಚಂದಮಾಮ ಸೇರಿಕೊಂಡು ಆಮ್ಮನ ಕೈಯಿಂದ ಹೊಡೆತ ತಿನ್ನಿಸಿದ್ದು ಈ ಚಂದಮಾಮ ಅದೆಷ್ಟೋ ಬಾರಿ ಅಂತೆ . ಆಮೇಲೆ ಆ ಶಾಲೆಯಲ್ಲಿ ಇದ್ದ ಎಲ್ಲ ಪುಸ್ತಕ ಅಮ್ಮಮ್ಮನ ತಲೆ ಒಳಗೆ ಇಳಿಸಿ ಕೊಳ್ಳಲು ನನ್ನ ಚಿಕ್ಕಮ್ಮಂದಿರು , ಮಾವಂದಿರ ಕೊಡುಗೆ ಇದೆ.
"ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ " ಮುಂದೆ ಇದೇ ಪುಸ್ತಕ ಓದುವ ಗೀಳು ಎಲ್ಲರಿಗೂ ಹಚ್ಚಿದ್ದು ನನ್ನ ಅಮ್ಮಮ್ಮನೇ ಅದರಲ್ಲಿ ಎಳ್ಳಷ್ಟೂ ಸಂಶಯವೇ ಇಲ್ಲ.ನನ್ನ ಅಮ್ಮನಿಗೂ ಪುಸ್ತಕ ಓದುವ ಹುಚ್ಚು ತುಂಬಾ ಇತ್ತು. ಮದುವೆ ಆಗುವವರೆಗೂ ಓದಿಗೆ ತೊಂದರೆ ಇರಲಿಲ್ಲ . ಮದುವೆ ಆಗುತ್ತಿದ್ದಂತೆ ಕನ್ನಡ ಪುಸ್ತಕ ಸಿಗದ ಓದಿಗೆ ಹೋಗಿ ಬಿದ್ದಿದ್ದು ವಿಪರ್ಯಾಸವೇ ಸರಿ. ಆದರೂ ಊರಿಗೆ ಬಂದಾಗೆಲ್ಲಾ ಅಮ್ಮ ಹಳೆ ಪುಸ್ತಕಗಳನ್ನು ಹೊತ್ತು ಒಯ್ಯುತ್ತಿದ್ದರು ಅಂತೆ. ಇನ್ನು ಅಕ್ಕನಿಗೆ ಓದಲು ಸಿಗಲಿ ಅಂತ ತಮ್ಮಂದಿರು ನಿಯತಕಾಲಿಕೆಗಳಲ್ಲಿ ಬರುವ ಒಳ್ಳೆ ಧಾರಾವಾಹಿ, ಪುರಾಣ ಕತೆಗಳನ್ನು ಸಂಗ್ರಹಿಸಿ ಹೊಲಿದು ಹೊತ್ತಗೆ ಮಾಡಿ ಇಡುತ್ತಿದ್ದರು.
ನನ್ನ ಅಜ್ಜಿಯ ನೆಚ್ಚಿನ ಲೇಖಕರು ಶಿವರಾಮ ಕಾರಂತರು , ಟಿ. ಕೆ. ರಾಮ ರಾವ್ , ಕುವೆಂಪು , ಭೈರಪ್ಪ ಹೀಗೆ ಪಟ್ಟಿ ಮುಂದೆ ಹೋಗುತ್ತೆ. ಮುಂದೊಮ್ಮೆ ನಾನು ಅದೇ ಶಾಲೆ ಮೆಟ್ಟಿಲು ತುಳಿದಾಗ ನೋಡು ನಿನ್ನ ಶಾಲೆ ಗ್ರಂಥಾಲಯ ತುಂಬ ಚೆನ್ನಾಗಿದೆ. ತುಂಬಾ ಒಳ್ಳೆ ಒಳ್ಳೆಯ ಪುಸ್ತಕ ಇದೆ , ನೀನು ತುಂಬ ಓದಿ ಜಾಣೆಯಾಗಬೇಕು. ಎಂದು ಬೆನ್ನು ತಟ್ಟಿದ್ದರು .
ಅಮ್ಮಮ್ಮನ ಸಲಹೆ ಯಾವ ಪುಸ್ತಕ ನೀನು ಓದಬೇಕು & ನಾನು ಏನೆಲ್ಲಾ ಓದಿದೆ ಅವರ ಸಲಹೆ ಮೇರೆಗೆ ಇದೆಲ್ಲ ನಾಳೆ ಗೆ ಇರಲಿ ಅಲ್ವಾ ?

No comments:
Post a Comment