ಎಲಾ ರತ್ನ , ಸುಲೋಚನ ಏನು ಅಂತ ತಬ್ಬಿಬ್ಬಾಗಬೇಡಿ, ನನ್ನ ಸ್ನೇಹಿತೆಯರಲ್ಲ ಇವರು ಆದರೆ ನಿಮ್ಮ ನಮ್ಮೆಲ್ಲರ ಪಾಲಿಗೆ ರತ್ನವೇ ಈ ಸುಲೋಚನ. ಮನುಷ್ಯನಾದಮೇಲೆ ಒಂದಲ್ಲ ಒಂದು ಹಂತದಲ್ಲಿ ಸುಲೋಚನ ನಿಮ್ಮನ್ನು ಹುಡುಕಿಕೊಂಡು ಬಂದು ನಿಮ್ಮ ಮುಖಾರವಿಂದದಲ್ಲಿ ವಿರಾಜಮಾನವಾಗಿ ಕೂತು ನಮಗೊಂದು ಹೊಸ ಕಳೆ ಕೊಡುವವಳೇ ಈ ಸುಲೋಚನ.
ನನ್ನ ಹೈ ಸ್ಕೂಲ್ ದಿನಗಳಲ್ಲಿ ಅದೊಂದು ದಿನ ಕನ್ನಡ ಕ್ಲಾಸ್ ನಲ್ಲಿ ನನ್ನ ಕನ್ನಡದ ಟೀಚರ್ ಏನೋ ನೋಟೀಸ್ ಸ್ಟಾಫ್ ರೂಂ ನಲ್ಲಿ ಬಿಟ್ಟು ಬಂದೆ. ಹೋಗಿ ಹಿಡ ಕೊಂಡು ಬಾ ಅಂತ ಕಳಿಸಿದರು. ಹೋಗಿ ನೋಡಿದೆ ಸ್ಟಾಫ್ ರೂಂ ನಲ್ಲಿ ಇಲ್ಲ , ಸೀದಾ ವಾಪಸು ಬಂದೆ , ಟೀಚರ್ ನಿಮ್ ಸ್ಟಾಫ್ ರೂಂ ನಲ್ಲಿ ಇಲ್ಲ, ನಂಗೆ ಸಿಗ್ಲಿಲ್ಲ ಅಂದೆ. ಅಯ್ಯೋ ನಂಗೆ ಮರೆತು ಹೋಗಿತ್ತು ಊಟ ಆದಮೇಲೆ ಮಧ್ಯಾನ್ನದ ಸಿಗ್ನೇಚರ್ ಹಾಕೋಕೆ ಹೋದಾಗ ಕನ್ನಡಕ ಮತ್ತು ನೋಟೀಸ್ ಅಲ್ಲೇ ಬಿಟ್ಟು ನೇರ ತರಗತಿಗೆ ಬಂದೆ. ಅದು ಪ್ರಿನ್ಸಿಪಾಲ್ ಚೇಂಬರ್ ನಲ್ಲಿ ಮೂಲೆಯಲ್ಲಿ ಸ್ಟಾಫ್ ಅಟೆಂಡ್ಎನ್ಸ್ ರಿಜಿಸ್ಟರ್ ಹತ್ರ ಇದೆ ಎಂದು ನನ್ನ ಮತ್ತೆ ಅಟ್ಟುವ ಯತ್ನ . ಅಯ್ಯಬ್ಬಾ ನಂಗೆ ಪ್ರಿನ್ಸಿ ಚೇಂಬರ್ ಅಂದ್ರೆ ಒಂತರಾ ಭಯ ! ನಾನು ಹೋಗಲ್ಲ ಅಂದೆ. "ಸರಿ ಯಾರು ರೆಡಿ" ಅಂತ ಕೇಳಿದ್ರ ಎಲ್ಲಾ ಅದುವರೆಗೂ ಪರ ಪರ ಸದ್ದು ಮಾಡ್ತಾ ಇದ್ದ ಎಲ್ಲ ಸದ್ದು ನಿಶಬ್ಧ. ನಮ್ಮ ಮಮತಾ ಟೀಚರ್ ಸಿಕ್ಕಾ ಪಟ್ಟೆ ಜೋರು. ಬೇರೆ ಯಾವ ಕ್ಲಾಸ್ ನಲ್ಲಿಯೂ ಯಾರೂ ತುಟಿ ಪಿಟಿಕ್ ಹೇಳ್ತಾ ಇರಲಿಲ್ಲ ಆದ್ರೆ ನಮ್ 8 ಸಿ ಅಂದ್ರೆ ಅವ್ರಿಗೆ ಸಿಕ್ಕ ಪಟ್ಟೆ ಇಷ್ಟ . ಹೀಗಾಗಿ ನಾವೆಲ್ಲಾ ಕ್ಲಾಸ್ನಲ್ಲಿ ವಟ ವಟ , ಪರ ಪರ ಮಾಡ್ತಾನೆ ಇದ್ದೆವು. ಇವತ್ತು ಸವಾಲ್ ಯಾರು ಈಗ ಹೋಗಿ ಆ ನೋಟೀಸ್ ತರೋದು ? ಯಾವ ಹುಡುಗರೂ ಏಳೋ ಲಕ್ಷಣ ಕಾಣದೆ ಇದ್ದಾಗ ಕತ್ತೆ, ಕೋತಿಗಳಾ ಎಂದು ಟೀಚರ್ ಬೈದು ಹುರಿತುಂಬಿಸಿದ್ದೂ ಆಯಿತು . ಉಹು ಯಾರೂ ಮೇಲೆ ಏಳಲೇ ಇಲ್ಲ .
ಕೊನೆಗೆ ನೀನೆ ಹೋಗು ಅಲ್ಲಿ ಹುಲಿ ಸಿಂಹ ಇಲ್ಲ ಅಂದ್ರು. ದೇವಾ ಅಲ್ಲಿ ಹುಲಿ ಸಿಂಹ ಇಲ್ಲ, ಆದರೆ ಉಗ್ರ ನರಸಿಂಹದ ಅಪರಾವತಾರವೇ ಇದೆ ಹೇಳೋಕೆ ಧೈರ್ಯ ಸಾಲದೆ ತೆಪ್ಪಗೆ ಹೊರಟೆ . ಅಲ್ಲಿ ಹೋದಾಗ ಕೈತಲ್ಲಿ ಒಂದು ನೋಟೀಸ್ ಹಿಡ್ಕೊಂಡು ನಮ್ ಪ್ರಿನ್ಸಿ ಕಾಲು ಸುಟ್ಟ ಬೆಕ್ಕಿನ ಹಾಗೆ ಆಚೆ ಈಚೆ ಹೋಗ್ತಾ ಇದ್ರು. ನಂಗೆ ಜಂಘಾ ಬಲವೇ ಉಡುಗಿ ಹೋಯಿತು. ಮೆಲ್ಲ ಸರ್, ನಾನು ಒಳಗೆ ಬರಬಹುದೇ ಅಂದು, ನಮ್ಮ ಟೀಚರ್ ಕನ್ನಡಕ ಬಿಟ್ಟು ಹೋಗಿದ್ದಾರೆ ಅಂತೆ ಹುಡುಕಿ ಕೊಂಡು ಹೋಗೋಕೆ ಬಂದಿದ್ದೇನೆ ಅಂತ ಹೇಳಿದೆ. ಅಯ್ಯಬ್ಬಾ ಯಾವಾಗಲೂ ಬುಸು ಬುಸು ಎಂದು ಇದ್ದ ಪ್ರಿನ್ಸಿ ಅಂದದ ಒಂದು ಮಂದಹಾಸ ಬೀರಿ, ಹೂಂ ಕೊಂಡು ಹೋಗು ಅಂದಾಗ , ಒಮ್ಮೆಗೆ ಬದುಕಿದೆಯಾ ಬಡ ಜೀವವೇ ಅಂತ ಅನ್ನಿಸಿತು. ಅಂತೂ ಮೂಲೆಗೆ ಹೋಗಿ ಕನ್ನಡಕ, ನೋಟೀಸ್ ಹಿಡ್ಕೊಂಡು ಬಂದಾಗ, ಇಲ್ಲಿ ಬಾ ಅಂದ್ರಾ ನನ್ನ ಜೀವ ಬಾಯಿಗೆ ಬಂತು. ದೇವರೇ ಈವತ್ತು ಯಾರ ಮುಖ ನೋಡಿ ಎದ್ದಿದ್ದು ನಾನು ? ಈ ನೋಟೀಸ್ ನಲ್ಲಿ ಏನು ಇದೆ ಓದು ನೋಡೋಣ ಎಂದು ಅವರ ಕೈಯಲ್ಲಿ ಇದ್ದ ಪೇಪರ್ ಕೊಟ್ಟರು . ಓದಿ ಹೇಳಿದೆ . ಜಾಣೆ, ನೀನು ಇನ್ನು ಹೋಗಿ ಕ್ಲಾಸ್ನಲ್ಲಿ ಈ ನೋಟೀಸ್ ಓದಿದ್ದು ಹೇಳಬೇಡ ಎಂದು ಒಂದು ಒಳ್ಳೆ ಪೆನ್ ಅವರ ಡ್ರಾವೆರ್ ನ ಬಾಕ್ಸ್ ನಿಂದ ತೆಗೆದು ಕೊಟ್ಟರು.
ನಾನು ಸಿಕ್ಕ ಪಟ್ಟೆ ಪೋಕರಿ ಅಲ್ಲದೆ ಇದ್ರೂ ನಂಗೆ ಹೀಗೆ ಯಾಕೆ ಆಯಿತು ಅಂತ ಯೋಚನೆ ಶುರು! ಕನ್ನಡಕ ಅವರ ಮುಖದಲ್ಲಿ ಇಲ್ಲ ಎಂದು ಅರಿವಾದರೂ ಅದನ್ನು ತರಿಸಿ ಕೊಳ್ಳಬಹುದು ಅಲ್ವಾ ? ಪ್ರಿನ್ಸಿ ಮನೆ ಶಾಲೆಗೆ ಹತ್ತಿರವೇ ಇತ್ತು , ಆದರೂ ಯಾಕೆ ನನ್ನ ಹತ್ರ ನೋಟೀಸ್ ಓದಿಸಿದ್ರು ? ಹೇಳ ಬೇಡ ಅಂದ ವಿಷಯವನ್ನು ಹೇಳೋ ಜಾಯಮಾನದಲ್ಲಿ ಇಲ್ಲ ಹೀಗಾಗಿ ಸುಮ್ಮನಾದೆ. ಆದರೆ ಆ ವಿಷಯ ನಂಗೆ ಸಿಕ್ಕಾಪಟ್ಟೆ ಕುತೂಹಲ ಕೆರಳಿಸ್ತಾ ಇತ್ತು . ಮಾರನೇ ದಿನ ಬೆಳಗ್ಗೆ ಶಾಲೆಗೆ ನಡೆದು ಕೊಂಡು ಬರುವಾಗ ಎಂದಿನಂತೆ ನಮ್ಮ ಶಾಲೆಯ ಬೋಧಕೇತರ ವರ್ಗದ "ಕೂಸು " ಎಂಬಾಕೆ ದಾರಿ ನಡುವೆ ಸಿಕ್ಕರು. ನಾನು ಅವರು ಯಾವಾಗಲೂ ಜೊತೆಗೆ ನಡೆದು ಕೊಂಡು ಬರ್ತಾ ಇದ್ದೆವು . ಹೀಗಾಗಿ ಅವರ ಜೊತೆ ನಂಗೆ ಸಲುಗೆ ಇತ್ತು . ಮೆಲ್ಲ ಕೇಳಿದೆ. ಕೂಸಕ್ಕಾ "ನಿನ್ನೆ ನಮ್ಮ ಪ್ರಿನ್ಸಿ ಕನ್ನಡಕ ಬಿಟ್ಟು ಬಂದಿದ್ರಾ ?"ಅಂತ .
ಇಷ್ಟು ಕೇಳಿದ್ದೆ ತಡ ಹೇಳೋಕೆ ಶುರು ಮಾಡಿದರು ಆ ಮಾತಿನೊಳಗೆ ೧ ಘಂಟೆ ಕಾಲು ದಾರಿ ಸಾಗಿ ಶಾಲೆ ತಲುಪಿದ್ದೇ ಗೊತ್ತಿಲ್ಲ. ಆ ಪ್ರಿನ್ಸಿ ನಾ ನಿನ್ನೆ ಏನು ಅದು ಯಾವಾಗಲೂ ಇದ್ದಿದ್ದೇ ಅವರಿಗೆ ಸಿಕ್ಕಾಪಟ್ಟೆ ಮರೆವು . 4 - 5 ಜೊತೆ ಕನ್ನಡಕ ಇದ್ದರೂ ಅವರ ಮರೆವಿಂದಾಗಿ ನಾನು ತಿಂದ ಬೈಗುಳ ಎಷ್ಟು ? ಬಿಸಿಲಿನಲ್ಲಿ ಅವರ ಮನೆಗೆ ಓಡಿದ್ದು ಎಷ್ಟೋ ಬಾರಿ ... ಅಷ್ಟೆಲ್ಲಾ ಮಾಡಿ ಅವರ ಕನ್ನಡಕ ತಂದು ಕೈಯಲ್ಲಿ ಕೊಡುವಾಗ ಇಲ್ಲಿ ಶಾಲೆಯ ಡ್ರಾವೆರ್ ನಲ್ಲಿ ಅವರ ಪತ್ತೆಯಾಗಿ ಅವರ ಮುಖದಲ್ಲಿ ಸುಖಾಸೀನ ಈ ಸುಲೋಚನ !
ಮನೆಯಲ್ಲಿ ಅವರ ಅಮ್ಮ ಹಿರಿಯರು ಒಬ್ಬರೇ ಇರುತ್ತಿದ್ದರಂತೆ. ಕೆಲವೊಮ್ಮೆ ಮಗ ಎಲ್ಲೋ ಇಟ್ಟ ಕನ್ನಡಕ ಸಿಕ್ಕಿದಾಗ ಜೋಪಾನ ಮಾಡಿ ಶಾಲೆ ಯಿಂದ ಯಾರು ಬರುವರು ಒಯ್ಯಲು ಎಂದು ಕಾಯುತ್ತ ಇದ್ದರು ಎಂದು ಕೂಸಕ್ಕ ಹೇಳಿದ ನೆನಪು.ಪಾಪ ಆ ಹಿರಿಯ ಜೀವ ಕೆಲವೊಮ್ಮೆ ಹುಡುಕಿ ಹುಡುಕಿ ೩-೪ ಜೊತೆ ತೆಗೆದು ಇರಿಸುತ್ತಿದ್ದರಂತೆ. ನೋಡು ಕೂಸು ಒಂದು ಕನ್ನಡಕ ನಿನ್ನ ಬಳಿಯೇ ಇಟ್ಟು ಕೊಂಡಿರು. ಬಿಸಿಲಿನಲ್ಲಿ ಓಡಿ ಬರುವುದಕ್ಕೆ ಆಗುತ್ತೆ . ಒಂದು ಅವನ ಟೇಬಲ್ ನಲ್ಲಿ ಇದು ಇನ್ನೊ೦ದು ಕೈಯಲ್ಲಿ ಕೊಡು ಹೀಗೆಲ್ಲ ಹೇಳಿ ಕೊಡ್ತಾ ಇದ್ದರಂತೆ .
ಇಷ್ಟೇ ಆದರೆ ಪರವಾಗಿಲ್ಲ ಕೊನೆಗೆ ಒಂದು ದಿನ ಒಬ್ಬ ಕ್ಲರ್ಕ್ ಹಾಗೂ ನಮ್ಮ ಪ್ರಿನ್ಸಿ ಕನ್ನಡಕ ಸಮಾನ ಶಕ್ತಿ ಶಾಲಿ ಅಂತ ಪ್ರಿನ್ಸಿಗೆ ತಿಳಿತೋ ಅಲ್ಲಿಗೆ ಆ ಕ್ಲರ್ಕ್ ಕನ್ನಡಕಕ್ಕೂ ಕಾಟ ಶುರು. ನನ್ನ ಕನ್ನಡಕ ಕಳೆದು ಕೊಂಡೆ, ಈಗ ಕೆಲ ಲೆಟರ್ ಇದೆ ನನ್ನ ಟೇಬಲ್ ಮೇಲೆ ಅದು ಓದಿ ಕೊಡುವೆ ಅಲ್ಲಿ ವರೆಗೆ ನಿನ್ನ ಕನ್ನಡ ನಂಗೆ ಕೊಡು ಅಂತ. ಮೇಲಧಿಕಾರಿ ಏನೂ ಅನ್ನೋ ಹಾಗಿಲ್ಲ, ತೆಪ್ಪಗೆ ಕೊಟ್ಟರು . ಅಷ್ಟರಲ್ಲಿ ಪಾಪದ ಕೂಸಕ್ಕನನ್ನು ಮನೆಗೆ ಅಟ್ಟಿ ಅವರ ಕನ್ನಡಕ ತರಿಸಿ ಕೊಳ್ಳುತ್ತಿದ್ದರು. ಅದೊಂದು ದಿನ ಅವರು ಮನೆಯಲ್ಲಿ ಒಂದು ಜೊತೆ ಕನ್ನಡಕ ಕಳೆದು ಕೊಂಡಾಗಿತ್ತು . ಇರಲಿ ! ಶಾಲೆ ಕನ್ನಡಕ ಶಾಲೆಯಲ್ಲಿಯೇ ಇದೆ. ಎಂದು ಶಾಲೆಗೆ ಬಂದಿದ್ದರು . ಎಂದಿನಂತೆ ತನ್ನ ಚೇಂಬರ್ ಹೊಕ್ಕು ಕನ್ನಡಕ ತಡಿಕಿದಾಗ ಸುಲೋಚನ್ ನಾಪತ್ತೆ . ಹೇಗೂ ಇದ್ದಳಲ್ಲ ಕೂಸು ... ಎಂದು ಕರೆದಾಗ ಕೂಸಕ್ಕ ಇನ್ನು ಶಾಲೆಗೆ ತಲುಪಿರಲಿಲ್ಲ ಅಂತೆ . ಸರಿ ಆ ಕ್ಲರ್ಕ್ ಕನ್ನಡಕ ಹೇಗೋ ಅರ್ಜೆಂಟ್ ಗೆ ಆಗುತ್ತೆ. ಅವರು ಬಂದ್ರ ಎಂದು ಕೇಳಿದಾಗ , ಇಲ್ಲ ಅವರು ಈವತ್ತು ಬರೋಲ್ಲ ಲೀವ್ ಲೆಟರ್ ಕೊಟ್ಟು ಹೋಗಿದ್ದಾರೆ ಅಂತ ಹೇಳಿದ್ದು ಕೇಳಿಸಿತು ಅಂತೆ . ಅಯ್ಯೋ ನನ್ನ ಕನ್ನಡಕ ಕಳೆದು ಹೋಗಿದೆ ಮನೆಯಲ್ಲಿ ಇಲ್ಲ ಶಾಲೆಯಲ್ಲಿ ಇಲ್ಲ ಸಾಲದಕ್ಕೆ ಬೆಳಬೆಳಗ್ಗೆ ೨ ಪಿ ಯು ತರಗತಿಗಳಿಗೆ ಪಾಠ ಮಾಡೋಕೆ ಇದೆ. ಏನು ಮಾಡೋದು ಅಂತ ಆಫೀಸ್ ಪೂರ ಗದ್ದಲ ಮಾಡಿದರಂತೆ ಯಾರದ್ರು ನನ್ನ ಕನ್ನಡಕ ನೋಡಿದ್ರಾ ಅಂತ ... ಎಷ್ಟು ಹುಡುಕಿದರೂ ಅವರ ಕನ್ನಡಕ ಪತ್ತೆ ಇಲ್ಲ ಕೊನೆಗೆ ಆ ಕ್ಲರ್ಕ್ ಜೊತೆಗೆ ಕೆಲಸ ಮಾಡುವವರು ಅವರ ಕನ್ನಡಕ ಶಾಲೆಯಲ್ಲೇ ಅವ್ರು ಬಿಟ್ಟು ಹೋಗುತ್ತಾರೆ. ನಿನ್ನೆ ಎಲ್ಲಾದರೂ ಬಿಟ್ಟು ಹೋಗಿದ್ದರೆ ನೋಡೋಣ ತಂದು ಕೊಡೋಣ ಎಂದು ಸಮಾಧಾನಿಸಿದರಂತೆ. ಅಂತೂ ಕೊನೆಗೆ ಆ ಕ್ಲರ್ಕ್ ನ ಕನ್ನಡಕ ಸಿಕ್ಕಿ ಬೆಳಗ್ಗಿನ ಪಿ. ಯು ಸುಸೂತ್ರವಾಗಿ ತರಗತಿಗಳು ಮುಗಿದವು. ಆರೋಗ್ಯ ಸರಿ ಇಲ್ಲದ ಕಾರಣ ಕೂಸಕ್ಕ ಆದಿನ ಶಾಲೆಗೇ ಬರಲಿಲ್ಲ. ನಾನು ಬರದೆ ಇದ್ರೆ ಭಯಂಕರ ಕಷ್ಟ ಅವರಿಗೆ ಕನ್ನಡ ಎಲ್ಲಾದರು ಆ ದಿನ ಕಳೆದು ಹೋದರೆ ಮುಗಿದೇ ಹೋಯಿತು.
ಹಿಂದೊಮ್ಮೆ ಹೀಗೆಲ್ಲ ಆಗಿತ್ತು . ನಿನ್ನೆಯೂ ಹೀಗೆ ಆಗಿರಬೇಕು. ಮನೆ ಶಾಲೆಗೆ ಪಕ್ಕವೇ ಇದ್ದ ಕಾರಣ ಪ್ರಿನ್ಸಿ ಮನೆಗೆ ಊಟಕ್ಕೆ ಹೋಗುತ್ತಿದ್ದರು. ಈ ದಿನವೂ ಮನೆಗೆ ಹೋದರು . ಹೇಗೂ ಅಂದು ಸುಲೋಚನದ ನಿಜವಾದ ವಾರಸುದಾರರು ಇರದ ಕಾರಣ ಹಿಂತಿರುಗಿಸುವ ಪ್ರಮೇಯ ಇರಲಿಲ್ಲ. ಊಟ ಮಾಡಿಕೊಂಡು ಬರುವಷ್ಟರಲ್ಲಿ ಕ್ಲರ್ಕ್ ನ ಸುಲೋಚನವೂ ಕಾಣೆಯಾದವರ ಪಟ್ಟಿ ಸೇರಿಯಾಗಿತ್ತು . ಬೆಳಗ್ಗೆ ಕಾಣೆಯಾದವರ ಪತ್ತೆ ಇಲ್ಲ , ಪ್ರಿನ್ಸಿ ಕಂಗಾಲಾಗಿ ನೇರ ಶಾಲೆಗೆ ಬಂದಿದ್ದರು. ಅದೇ ದಿನ ಮಧ್ಯಾಹ್ನ ಅಂಚೆಯಲ್ಲಿ ಬಂದ ನೋಟೀಸ್ ಓದಲು ಕನ್ನಡಕ ಇಲ್ಲದೆ ಚಡಪಡಿಸುತ್ತಿದ್ದಾಗ ನಾನು ಅವರ ಚೇಂಬರ್ ಹೊಕ್ಕೆ , ಅವರ ಸುಲೋಚನವಾದೆ :)
ಮತ್ತೊಂದು ಬಾರಿ ಕೂಸಕ್ಕ ರಜೆ ತೆಗೆದು ಕೊಂಡಿದ್ದರು . ನಾನು ಬೆಳಗ್ಗಿನ ಮೊದಲ ಪಿರಿಯಡ್ ಆಟ ಇದ್ದ ಕಾರಣ ಗೇಮ್ಸ್ ರೂಮ್ ಗೆ ಪ್ರಿನ್ಸಿ ಚೇಂಬರ್ ಮೂಲಕವೇ ಹಾದು ಹೋದೆ. ಎದುರು ಸಿಕ್ಕರಲ್ಲಾ ನಮಸ್ತೆ ಸರ್! ಎಂದು ಹೇಳಿದ ಕೂಡಲೇ ಯಾವ ಪಿರಿಯಡ್ ಅಂದ್ರು 'ಗೇಮ್ಸ್ ' ಅಂದಾಗ , ಸರಿ ಬೆಳಗ್ಗೆ ವ್ಯಾಯಾಮ ತರಗತಿ ಇದೆಯಾ ಅಂದಾಗ 'ನಾನು ಇಲ್ಲ' ಎಂದ ಕೂಡಲೇ ಹಾಗಿದ್ರೆ ಬೇಗ ಓಡಿ ಹೋಗಿ ನನ್ನ ಮನೆಗೆ ಹೋಗಿ ಕನ್ನಡಕ ತಂದು ಕೊಡುವೆಯಾ ? ರಸ್ತೆ ಬದಿಯಲ್ಲಿ ಹೋಗು ಅಂದ್ರು . ನಿಂಗೆ ನಮ್ಮ ಮನೆ ಗೊತ್ತು ಅಲ್ವಾ ನಿಮ್ಮ ಗಣಪತಿ ಸರ್ ಮನೆಯ ಪಕ್ಕವೇ ಇದೆ. ಅಲ್ಲಿಗೆಲ್ಲಾ ಅವರಿಗೆ ಹುಷಾರಿಲ್ಲದೆ ಇರೋವಾಗ ನೀವು ಬರೋದು ಹೋಗೋದು ಮಾಡ್ತಾ ಇದ್ರಿ ಅಂದ್ರು . ಸರಿ ಮನೆಯಲ್ಲಿ ನಾಯಿ ಇದೆಯಾ? ನನ್ನ ಮೊದಲ ಪ್ರಶ್ನೆ ! ಯಾಕೆ ನಿಂಗೆ ನಾಯಿ ಕಂಡರೆ ಭಯವೇ ? 'ಹೂಂ' "ಸರಿ ಹಾಗಾದ್ರೆ ನಾನು ನನ್ನ ಅಮ್ಮನಿಗೆ ಗೇಟ್ ನಲ್ಲಿ ಬಂದು ಇರಲು ಫೋನ್ ಮೂಲಕ ಹೇಳುವೆ ನೀನು ಹೊರಡುವಾಗ ಮನೆ ಮುಟ್ಟುವಾಗ ನಾನಾ ಅಮ್ಮ ಗೇಟ್ ನಲ್ಲಿ ಇರುತ್ತಾರೆ ನಿಂಗೆ ನಾಯಿ ಏನು ಮಾಡೋಲ್ಲ" ಅಂತ ಹೇಳಿ ನನ್ನನ್ನು ಅಟ್ಟಿದರು.
ಮನೆಗೆ ಹೋದಾಗ ಅವರ ಅಮ್ಮ ಬೆನ್ನು ಬಗ್ಗಿಸಿ ಕೊಂಡು ನನ್ನ ದಾರಿ ನೋಡ್ತಾ ಇದ್ರೂ . 'ಪಾಪ ನೀನು ನಿನ್ನ ಅಟ್ಟಿದನಾ ? ಅವನಿಗೊಂದು ಹಾಳು ಮರೆವು. ಕೂಸು ಇಲ್ವಾ ಈವತ್ತು ?' ಅಂತ ಕೇಳಿದರು ''ಇಲ್ಲ ದೊಡ್ಡಮ್ಮ ಅವರು ಶಾಲೆಗೆ ಬಂದಿಲ್ಲ" ಎಂದೆ. 'ಸರಿ ಒಳಗೆ ಬಾ ಬಿಸಿಲು ಅಲ್ವಾ ಪಾನಕ ಕೊಡ್ತೀನಿ ಅಂತ ಪಾನಕ ಕೊಟ್ಟು ಜೊತೆಗೆ ೨ ಜೊತೆ ಕನ್ನಡಕ ಕೊಟ್ಟು ಇದು ನನ್ನ ಮಗನಿಗೆ ಕೊಡು' ಅಂದ್ರು. ಸರಿ ಅಂದು ಸುಲೋಚನಳನ್ನು ನನ್ನ ಪ್ರಿನ್ಸಿ ಕೈಗೆ ಒಪ್ಪಿಸಿ ಮೆಲ್ಲನೆ ಕ್ಲಾಸ್ ಗೆ ನಡೆದೆ.
ನಮ್ ಪ್ರಿನ್ಸಿ ಜೋರು ಆದರೂ ತುಂಬಾ ಒಳ್ಳೆ ಮನುಷ್ಯ ನಮಗೆ ಅನ್ನಿಸಿರುತ್ತೆ ಯಾಕೆ ಅವ್ರಿಗೆ ಹೋಗೋಕೆ ಆಗಲ್ವಾ ಮನೆಗೆ ಅಂತ ಅವರು ಅಸ್ತಮಾ, ಬಿಪಿ , ಸಕ್ಕರೆ ಕಾಯಿಲೆ ಇತ್ಯಾದಿ ಇತ್ಯಾದಿ ಕಾಯಿಲೆಯಿಂದ ಸಿಕ್ಕ ಪಟ್ಟೆ ಜರ್ಜರಿತ ಆಗಿ ಬಳಲುತ್ತಾ ಇದ್ರು. ಅವರು ಏನು ಹೇಳಿದರೂ ನಮ್ಮ ಒಳ್ಳೇದಕ್ಕೆ ಹೇಳಿರ್ತಾರೆ . ಅವರು ನಮಗೆ ಜ್ಞಾನ ಕೊಟ್ಟ ಗುರು , ಗುರು ಸೇವೆ ಮಾಡೋದು ಒಂದು ಪುಣ್ಯ ಅಲ್ವಾ ಹೀಗಂತ ನಂಬಿದವಳು ನಾನು :)
ಅವರು ಎಷ್ಟು ಒಳ್ಳೆಯವರು ಅಂತ ಇನ್ನೊಮ್ಮೆ ಬರೆವೆ :)

3 comments:
guru galannu gowravisutthale,geli maadiddu thumba sahajavaagi,apyaayamaanavaagi moodi bandide,nimma ee article nalli.nimmalliya shaarade ge ondu sharanu
ಶರಣು ... ಶರಣೆನುವೆ ನಿಮ್ಮ ಮಾತಿಗೆ ನಾನು !
ಗುರುವಿನ ಗುಲಾಮನಾಗುವ ತನಕ ದೊರುಕದಯ್ಯ ಮುಕುತಿ ! ಅನ್ನೋ ಮಾತು ನೆನಪಾಯಿತು !
ನಿಮ್ಮ ಲೇಖನ ಎಂದಿನಂತೆ ಸಹಜ ಹಾಗೂ ಮನಸಿಗೆ ಹತ್ತಿರವಾಗುವ ಹಾಗೆ ಮೂಡಿ ಬಂದಿದೆ!
Post a Comment