Sunday, March 24, 2013

ಕೋಪ ನಿಯಂತ್ರಣಕ್ಕಾಗಿ ಸಂಗೀತ ಚಿಕಿತ್ಸೆ


ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದು.....

http://74.127.61.178/VijayNext/Details.aspx?edorsup=Main&queryed=9&querypage=15&boxid=165842511&id=1041&eddate=03/22/2013
 ಮೂಲ ಲೇಖನ ಇಲ್ಲಿದೆ
ಪೀಠಿಕೆ :- ಪ್ರಕೃತಿಯಿಂದಲೇ ಹುಟ್ಟಿ ಬಂದಿರುವಂತಹ ಅದ್ಬುತ ದೈವಭಾಷೆ ಸಂಗೀತ . ಹೀಗಾಗಿ ಈ ಪ್ರಕೃತಿಯನ್ನು ಅವಲಂಬಿಸಿರುವಂತಹ ಎಲ್ಲಾ ಜೀವ ಸಂಕುಲದ ಮೇಲೂ ಇದು ಗಾಢವಾದ ಪರಿಣಾಮವನ್ನು ಬೀರುತ್ತೆ.ಇದು ನಮ್ಮ ಋಷಿ ಮುನಿ ಗಳಿಗೆ ಬಹಳ ಹಿಂದೇನೆ ಗೊತ್ತಿತ್ತು. ಹೀಗಾಗಿ ಸಾಮಾಜಿಕವಾಗಿ,ವೈಜ್ಞಾನಿಕವಾಗಿ , ಭಕ್ತಿಯ ದ್ಯೋತಕವಾಗಿ ಸಂಗೀತವನ್ನು ಅಳವಡಿಸಿ ಕೊಂಡಿದ್ದರು. ಸಂಗೀತ ಎನ್ನುವುದು ಯಾರೊಬ್ಬರ ಸ್ವತ್ತು ಅಲ್ಲ. ಬಡವ, ಬಲ್ಲಿದ , ಅವಿದ್ಯಾವಂತ , ವಿದ್ಯಾವಂತ ಹೀಗೆ ಯಾರು ಬೇಕಾದ್ರೂ ಇದನ್ನ ಬಳಸಿಕೊಳ್ಳಬಹುದು . ಇದರಿಂದಾಗಿ ಒಳ್ಳೆಯ ಹಾಡು, ಸಂಗೀತ ಕೇಳಿದಾಗ ಸಂಗೀತದ ಜ್ಞಾನ ಇಲ್ಲದವರೂ ಕೂಡ ಸಂಗೀತಕ್ಕೆತಾಳವನ್ನು ಹಾಕೋದನ್ನು ನಾವು ಅನೇಕ ಸಂದರ್ಭಗಳಲ್ಲಿ ಕಂಡೇ ಇರ್ತೀವಿ. ಇಂತಹ ಸಂಗೀತಕ್ಕೆ ಅದೆಷ್ಟೋ ರೋಗಗಳನ್ನು ಗುಣ ಪಡಿಸೋ ಅದ್ಭುತವಾದ ಶಕ್ತಿ  ಕೂಡ ಇದೆ.ಹಾಗೇನೆ ಸಂಗೀತ ಕೇಳ್ತಾ ಇದ್ರೆ ಅದೆಂತಹ ಕೋಪ ಇದ್ರೂ ಕೂಡ ಕಡಿಮೆ ಆಗುತ್ತೆ ಅನ್ನೋವಿಷಯ ಹಲವಾರು ಅಧ್ಯಯನಗಳಿಂದ ಕೂಡ ದೃಢ ಪಟ್ಟಿದೆ. 
       ಈಗಿನ ಪರಂಪರೆ ಯಲ್ಲಿ ಯಾರಿಗೆ ಕೋಪ ಇಲ್ಲ ಹೇಳಿ , ಅತ್ಯಧಿಕ ಒತ್ತಡದ ಪರಿಣಾಮವಾಗಿ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೆ ಎಲ್ಲರಿಗೂ
ಕೂಡಾ ಮೂಗಿನ ಮೇಲೆ ಸಿಟ್ಟು ಇದ್ದೆ ಇರುತ್ತೆ. ಹೀಗೆ ಬಂದ ಸಿಟ್ಟು ಕೆಲವರಿಗೆ ತಕ್ಷಣ ಕಡಿಮೆ ಆಗಬಹುದು,ಇನ್ನು ಕೆಲವರಿಗೆ ದಿನಗಟ್ಟಲೆ ಉಳಿಯಬಹುದು, ಮತ್ತೂ ಕೆಲವರಿಗೆ ವಾರ ಗಟ್ಟಲೆ ಉಳಿಯಬಹುದು. ಇದು ವ್ಯಕ್ತಿಯ ಸ್ವಭಾವವನ್ನು ಅವಲಂಬಿಸಿ ಇರುತ್ತೆ. ಇಂತಹ ಸಿಟ್ಟನ್ನು ಸುಲಭವಾಗಿ ನಿಯಂತ್ರಣ ಮಾಡೋದು ಒಂದು ಸಾಧನದಿಂದ ಮಾತ್ರ ಸಾಧ್ಯ ಅದೇ ಸಂಗೀತ ಚಿಕಿತ್ಸೆ . ನಿರ್ದಿಷ್ಟವಾಗಿ ಕೆಲವು ರಾಗಗಳನ್ನು ಆಲಿಸುವುದರಿಂದ ಸಿಟ್ಟನ್ನು ನಿಯಂತ್ರಣ ಮಾಡಿಕೊಳ್ಳ ಬಹುದು,ಮನಸ್ಸನ್ನು ಶಾಂತ ಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು. 

ಸಾಮಾನ್ಯವಾಗಿ ಸಿಟ್ಟು ಬರಲು ಕಾರಣಗಳೇನು ?
1.ಸಿಟ್ಟು ಸರ್ವೇ ಸಾಮಾನ್ಯವಾಗಿ ಎಲ್ಲರಿಗೂ ಬರುತ್ತೆ. ವರ್ಷಕೆಲ್ಲೋ 2-3 ಬಾರಿ ಸಿಟ್ಟು ಬಂದ್ರೆ ಅದು ಸಹಜ .ಅದೇ ವಾರಕ್ಕೆ 2-3 ಸಲ ಬಂದ್ರೆ ಅದು ತುಂಬಾ ಅಸಹಜ ಹಾಗೂ ಅದರಿಂದ ಸಾಕಷ್ಟು ದುಷ್ಪರಿಣಾಮಗಳು ಆಗುತ್ತವೆ. ಓಶೋ ಪ್ರಕಾರ "ಸಿಟ್ಟು ಅನ್ನೋದು ತಾತ್ಕಾಲಿಕ ವಾದ ಒಂದು ಹುಚ್ಚು
"
ಸಾಮಾನ್ಯವಾಗಿ ಸಿಟ್ಟು ಯಾರು ಯಾರಿಗೆ ಬರುತ್ತೆ ? 
ಯಾರಿಗೆ ತುಂಬಾ superiority complex ಹಾಗೂ inferiority complex ಇವರಿಬ್ಬರಿಗೆ ಮಾತ್ರ ಸಿಟ್ಟು ಬರೋದು ಜಾಸ್ತಿ . ಇನ್ನು ಕೆಲವರು ತುಂಬಾ perfectionists ಜಗತ್ತು ತುಂಬಾ perfect ಆಗಿದೆ ಯಾರೋ ತಪ್ಪು ಮಾಡಿದ್ರು ಅವರು ಹಾಗೆ ಮಾಡಬಾರದಿತ್ತು ಇಂತಹ ವ್ಯಕ್ತಿಗಳಿಗೆ ಸಿಟ್ಟು ಬರುತ್ತೆ . ಇದು ತಪ್ಪು ಜಗತ್ತು ಯಾವತ್ತೂ perfect ಅಲ್ಲ . ಪ್ರಪಂಚ, ಬದುಕು ಹೇಗೆ ಬರುತ್ತೋ ಹಾಗೆ ನಡೆದು ಕೊಂಡು ಹೋಗಬೇಕು.

2.ಹೆದರಿಕೆ: ಮನಃ ಶಾಸ್ತ್ರಜ್ಞರ ಪ್ರಕಾರ " ಮುಖವಾದ ಹಾಕಿ ಕೊಂಡ ಹೆದರಿಕೆಯೇ ಸಿಟ್ಟು "
ಮುಖ್ಯವಾಗಿ ಅಹಂ ಅನ್ನು ಬಿಡಬೇಕು ಇದೇ ಸಿಟ್ಟು ಬರೋದಕ್ಕೆ ಪ್ರಬಲವಾದ ಕಾರಣ .ಅಹಂಗೆ ಧಕ್ಕೆಯಾದಾಗ ಸಿಟ್ಟು ಬರುತ್ತೆ .ಯಾವತ್ತು ಅಹಂನ್ನು ಬಿಡುತ್ತೀವೋ,ಅದರಿಂದ ದೂರ ಇರುತ್ತೀವೋ ಸಿಟ್ಟು ಬಹಳ ಕಮ್ಮಿ ಆಗುತ್ತೆ .

ಈ ಸಿಟ್ಟಿನಿಂದ ಏನು ದುಷ್ಪರಿಣಾಮಗಳು :
1.ದೈಹಿಕ ದುಷ್ಪರಿಣಾಮಗಳು
2.ಭಾವನಾತ್ಮಕ ದುಷ್ಪರಿಣಾಮಗಳು
ದೈಹಿಕ ದುಷ್ಪರಿಣಾಮಗಳು: ತುಂಬಾ ಸಿಟ್ಟು ಬಂದಾಗ, excite ಆದಾಗ ಕಾರ್ಟಿಸಾಲ್ ಪ್ರಮಾಣ ಜಾಸ್ತಿ ಆಗುತ್ತೆ. ಇದರಿಂದ ಬಿ.ಪಿ. ಜಾಸ್ತಿ ಆಗುತ್ತೆ ,ಹಾರ್ಟ್ ಬೀಟ್ ಜಾಸ್ತಿ ಆಗುತ್ತೆ,ಎಷ್ಟೋ ಸಲ ಹಾರ್ಟ್ ಅಟ್ಯಾಕ್ ಆಗೋ ಚಾನ್ಸ್ ಆಗುತ್ತೆ , ಶುಗರ್ ಬರುತ್ತೆ, ದಪ್ಪ ಆಗ್ತಾರೆ.ಈ ಸಿಟ್ಟು ದೈಹಿಕ ಅಷ್ಟೇ ಅಲ್ಲ ಮಾನಸಿಕವಾಗಿಯೂ ನಮ್ಮನ್ನು ಕುಬ್ಜರನ್ನಾಗಿಸುತ್ತೆ, ಕುಗ್ಗಿಸುತ್ತೆ, ಖಿನ್ನರನ್ನಾಗಿ ಮಾಡುತ್ತೆ, ಡಿಪ್ರೆಸ್ಸ್ ಮಾಡುತ್ತೆ.
ಭಾವನಾತ್ಮಕ ದುಷ್ಪರಿಣಾಮಗಳು: ಸಂಬಂಧಗಳು ಹಾಳಾಗುತ್ತವೆ.ಸಮಾಜದಲ್ಲಿ ನಮ್ಮ ಬಗ್ಗೆ ಕೆಟ್ಟ ಹೆಸರು ಇರುತ್ತೆ. ಮುಂಗೋಪಿ ,ಬಹಳ ಸಿಟ್ಟಿನ ಸ್ವಭಾವದವರು ಎಂದು ಎಲ್ಲರೂ ದೂರ ಇಡುವರು.
ಸಿಟ್ಟು ನಿಯಂತ್ರಣದಲ್ಲಿ ಇಲ್ಲದಾಗ ಸಾಕಷ್ಟು ಸಾವುಗಳು ಆಗಬಹುದು.
ನಮ್ಮ ಸಾವು ಸಂಭವಿಸಬಹುದು ಅಥವಾ ನಾವು ಯಾರನ್ನಾದ್ರೂ ಸಾಯಿಸಬಹುದು.
ಸಿಟ್ಟನ್ನು ಹೇಗೆ ನಿಯಂತ್ರಣ ಮಾಡಿಕೊಳ್ಳಬಹುದು ?(Anger management technquics )
ಒಬ್ಬ ಮನುಷ್ಯ ಕೋಪಿಷ್ಠ ಆದ ಅಂದರೆ ಅದು ಮೂಲತಃ geneticdisorder. ಆದ್ರೆ ಕೋಪ ನಿಗ್ರಹ ನಮ್ಮ ಕೈಯಲ್ಲೇ ಇದೆ. 

ಸಾಮಾನ್ಯವಾಗಿ ಕೋಪ ನಿಗ್ರಹದಲ್ಲಿ 3 ವಿಧಗಳಿವೆ .

1.Suppressing
2.Expressing
3.Combing Method

1. Suppressing :-

      ಈಗ ಉದಾಹರಣೆಗೆ 2 ವ್ಯಕ್ತಿಗಳು ಜಗಳವಾಡುತ್ತಿರುತ್ತಾರೆ ಅಂದುಕೊಳ್ಳಿ.(ನಾನು ಹಾಗೂ ಇನ್ನೊಬ್ಬರು ) ಇಲ್ಲಿ ನಂಗೆ ಸಿಟ್ಟು ಬಂದಿರುತ್ತೆ.ಆದ್ರೆ ನನ್ನ ಮನೆಯಲ್ಲಿ ನನ್ನನ್ನು ಕೋಪ ಮಾಡಿ ಕೊಳ್ಳೋದು ತಪ್ಪು , ಜಗಳಾಡಬೇಡ ಎಂಬ ಸಂಸ್ಕೃತಿಯಲ್ಲಿ ಬೆಳೆಸಿರುತ್ತಾರೆ. ಬಡವನ ಸಿಟ್ಟು ದವಡೆಗೆ ಮೂಲ ಎಂಬ ಸಂಸ್ಕಾರದಲ್ಲಿ ಬೆಳೆಸಿರುವುದರಿಂದ ನಾವು ಜಗಳಾಡಕ್ಕೆ ಹೋಗಲ್ಲ. ಜಗಳ, conflict avoid ಮಾಡಿ ಸುಮ್ಮನೆ ನಮ್ಮ ಪಾಡಿಗೆ ಮನೆಗೆ ಬಂದು ಬಿಡುತ್ತೇವೆ. ಆ ಕ್ಷಣಕ್ಕೆ ಆ ಸಮಸ್ಯೆ ಪರಿಹಾರ ಆದರು  ಕೂಡ ಅದು ಒಳ್ಳೇದಲ್ಲ.ಜಗಳವಾಗದೆ ಇರಬಹುದು ಆದ್ರೆ ಇದರಿಂದ ನಮ್ಮ ದೇಹಕ್ಕೆ ಸಾಕಷ್ಟು ದುಷ್ಪರಿಣಾಮ ಗಳಾಗುತ್ತವೆ. ಯಾಕಂದ್ರೆ ಮನಸ್ಸು ಆ ಅವಮಾನವನ್ನು ಸಹಿಸಿಕೊಳ್ಳಲ್ಲ .ಇದೂ ಒಳ್ಳೆಯದಲ್ಲ.
ಹಾಗೆ ನೋಡಿದ್ರೆ Sony company, ಜಪಾನ್ ನಲ್ಲಿ ಒಂದು ಫ್ಯಾಕ್ಟರಿ ಯಲ್ಲಿ ಕೆಲವು ಬೊಂಬೆಗಳನ್ನು ( ಬಾಸ್ ಗಳ ಪ್ರತಿರೂಪ) ಇಟ್ಟು ಬಿಟ್ಟಿದ್ದಾರೆ.ಕೋಪ ಬಂದರೆ ಆ ಬೊಂಬೆಗೆ ಹೊಡೆದು ಬಾಸ್ ಮೇಲೆ ಇರೋ ಕೋಪವನ್ನು ತೀರಿಸಿಕೊಳ್ಳಿ ಅಂತ. ಇದೂ ಕೂಡ ಒಳ್ಳೆಯದಲ್ಲ.
2.Expression :- ಅಂದ್ರೆ ಕೋಪ ನಿಗ್ರಹ ಮಾಡಿ ಕೊಳ್ಳಿ ಆದ್ರೆsuppress ಮಾಡಿಕೊಳ್ಳಬೇಡಿ . ಉದಾಹರಣೆಗೆ ಒಬ್ಬರ ಜೊತೆ ಜಗಳವಾಡುತ್ತೀರಿ . ಜಗಳ ಹೇಗೆ ಆಡಬೇಕು , ಇದಕ್ಕೆ ಒಂದು ತಂತ್ರ ಇದೆ. ಏನೋ ಟ್ರಾಫಿಕ್ ನಲ್ಲಿ ನಮ್ಮ ಹಾಗೂ ಇನ್ನೊಬ್ಬನ ಗಾಡಿಯ ಜೊತೆ ತಿಕ್ಕಾಟವಾಗುತ್ತೆ ಅಂತ ತಿಳಿದು ಕೊಳ್ಳೋಣ. ಈಗ ಹೇಗೆ ಜಗಳವಾಡಬೇಕು ? ಇದು ತುಂಬಾ ಸರಳ ಅವನು ಎಗರಾಡುತ್ತಿರುತ್ತಾನೆ . ನಿಮಗೂ ತುಂಬಾ ಸಿಟ್ಟು ಬಂದಿರುತ್ತೆ .ಆದ್ರೆ ಅವನ ಜೊತೆ ಜಗಳವಾಡುತ್ತಿರಬೇಕಾದರೆ ಸ್ವಲ್ಪ ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ಸಿಟ್ಟನ್ನು ನಿಯಂತ್ರಣ ಮಾಡಿ ಕೊಳ್ಳ ಬೇಕು. ಹೇಗೆ ಮಾಡಿ ಕೊಳ್ಳಬೇಕು ? 
       ಅವನು ಎಗರಾಡುತ್ತಿರಬೇಕಾದ್ರೆ , ಜಗಳವಾಡುತ್ತಿರಬೇಕಾದ್ರೆ, ಬಯ್ಯಿದಾಡುತ್ತಿರಬೇಕಾದ್ರೆ ಅವನ ಕಣ್ಣನ್ನೇ ನೋಡುತ್ತಿರಬೇಕು, ನಮ್ಮ ಮುಖದಲ್ಲಿ ಯಾವುದೇ ಭಾವನೆಯನ್ನು ಪ್ರಕಟಪಡಿಸಕೂಡದು, ಸಾಕಷ್ಟು ದೀರ್ಘ ಉಸಿರು ತೆಗೆದುಕೊಳ್ಳಬೇಕು. ಆಮೇಲೆ ಅವನ ದೃಷ್ಟಿಕೋನದಿಂದ ಯೋಚಿಸಬೇಕು. ಅವನು ಯಾಕೆ ಕೋಪಿಸಿ ಕೊಂಡಿದ್ದಾನೆ? ಇವೆಲ್ಲಾ ನಮ್ಮ ಕೋಪವನ್ನು ಕಮ್ಮಿ ಮಾಡುತ್ತವೆ. ಅವನ ಕೋಪ, ಎಗರಾಟ ಮುಗಿದ ಮೇಲೆ ನಾವು " ನೋಡಪ್ಪ ಈ ರೀತಿ ಘಟನೆ ನಡೆದದಕ್ಕಾಗಿ ನನಗೆ ಈ ರೀತಿ ಆಯಿತು" , ಅಂತ ಹೇಳಬೇಕೇ ಹೊರತು ನಿನ್ನಿಂದಾಗಿ ಹೀಗಾಯಿತು ಅಂತ ಹೇಳಬಾರದು . suppress ಮಾಡಿ ಕೊಳ್ಳಬೇಡಿ , ತೀರಾ ಸಿಟ್ಟು ಮಾಡಿಕೊಂಡು ಎಗರಾಡಬೇಡಿ 2 ಒಳ್ಳೆಯದಲ್ಲ. ಈ ಮಧ್ಯದ ದಾರಿ ಯಾವಾಗಲೂ ಉತ್ತಮ. express ಮಾಡಬೇಕು, ಈ ತರ technique ಅನುಸರಿಸುವುದರಿಂದ ಏನಾಗುತ್ತೆ ಅಂದ್ರೆ ಮುಖದಲ್ಲಿ expression ತೋರಿಸಬಾರದು ,ಅವನ ಮುಖ ನೋಡುತ್ತಿರಬೇಕು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು , ದೀರ್ಘವಾಗಿ ಉಸಿರಾಡಬೇಕು , ಆಮೇಲೆ ಸರಳ ವಾಗಿ ಹೇಳಬೇಕು , ಅವನ ಮೇಲೆ ತಪ್ಪು ಹಾಕದೆ . ಆಗ ನಮಗೂ ಕೋಪ ಕಮ್ಮಿ ಆಗುತ್ತೆ ಅವನಿಗೂ ಕಮ್ಮಿ ಆಗುತ್ತೆ.
Practical Points :-
         ನಮ್ಮ ದೇಹದಲ್ಲಿ ಮೂಲಾಧಾರ , ಸ್ವಾದಿಷ್ಟಾನ ,ಮಣಿಪುರ , ಅನಾಹತ , ಆಜ್ಞ ,ವಿಶುದ್ಧ ,ಸಹಸ್ರಾರ ಎನ್ನುವ 7  ಚಕ್ರಗಳಿವೆ. ಎಂದು ಹೇಳಲಾಗುವುದು . ದೇಹದಲ್ಲಿ  ಚಕ್ರಗಳೆಂದರೆ ಶಕ್ತಿ ಕೇಂದ್ರಗಳಿದ್ದಂತೆ. ಅವುಗಳ ಕೆಲಸಗಳಲ್ಲಿ ಏನಾದರೂ ವೈಪರಿತ್ಯ ಕಂಡು ಬಂದರೆ  ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎಂದು ನಮ್ಮ ಪ್ರಾಚೀನರು ನಂಬಿದ್ದರು . ಒಂದೊಂದು ಚಕ್ರಕ್ಕೂ ಒಂದೊಂದು ಅಂಗಾಂಗಗಳ ಆರೋಗ್ಯದ ಉಸ್ತುವಾರಿ ನೀಡಲಾಗಿದೆ .  ಚಕ್ರಗಳ ನಿಶ್ಚೇತನದಿಂದ  ಕೋಪ ಬರುವುದು . 
       ನಮ್ಮ ಭಾರತೀಯ ಸಂಗೀತ ಚಿಕಿತ್ಸಾ ಪದ್ದತಿಯಲ್ಲಿ ಕೋಪಕ್ಕೆ ಕಾರಣವಾದ, ಅಗತ್ಯಕ್ಕಿಂತ ಕಡಿಮೆ ಚಟುವಟಿಕೆ ಮಾಡುವ ಕೆಲವೊಂದು ಚಕ್ರಗಳ ಸರಿಯಾದ ನಿರ್ವಹಣೆ ಮಾಡುವ ಪದ್ಧತಿ ಇದೆ . ಈ ಕಡಿಮೆ ಕೆಲಸ ಮಾಡುವ ಚಕ್ರಗಳನ್ನು ಉದ್ದೀಪನ ಮಾಡಿದಾಗ ಕೋಪ ಕಮ್ಮಿಯಾಗುತ್ತೆ. ಅದನ್ನು ಪ್ರಚೋದಿಸಲು ರಾಗದ ಅಗತ್ಯ ಇದೆ. ಹೀಗಾಗಿ ಕೆಲವು ನಿರ್ದಿಷ್ಟ ರಾಗಗಳ ಹಾಡನ್ನು ಕೇಳುವುದರಿಂದ ಚಕ್ರಗಳು   ಸರಿಯಾಗಿ ಕೆಲಸ ಮಾಡುತ್ತವೆ . ಈ ಲೇಖನ ಕೋಪಕ್ಕೆ ಸಂಬಂಧಿಸಿರುವುದರಿಂದ ಚಕ್ರಗಳ ಸರಿಯಾದ ನಿರ್ವಹಣೆಗೆ ಪುನ್ನಗವರಾಳಿ ,ಕಾಪಿ ,ಸಹನಾ, ಲಲಿತ್, ಮಿಯಾಕ್ಹಿ ಮಲ್ಹಾರ್ ರಾಗಗಳು  ಸಹಕಾರಿ .  ಆಧುನಿಕ ವೈದ್ಯ ಶಾಸ್ತ್ರ ಹೇಳುವುದು ಬಿನಾವುರಲ್ (bin aural ) ಬೀಟ್ಸ್ ಬಗ್ಗೆ ಹೀಗಾಗಿ  ಇವೆರಡನ್ನು ಸಂಯೋಜನೆ ಮಾಡಿದಾಗ ಪರಿಣಾಮ ಶತಸಿದ್ಧ . 
       ಮನುಷ್ಯನ ಮೆದುಳು ಯಾವಾಗ ತೂರ್ಯಾವಸ್ಥೆ ಮುಟ್ಟುತ್ತೋ ಆ ಹಂತದಲ್ಲಿ ಮೆದುಳು ತನ್ನ ಪಾಡಿಗೆ ತಾನೇ ಎಲ್ಲಾ ಕಾಯಿಲೆಗಳನ್ನು , ಕೋಪವನ್ನು ಶಮನ ಮಾಡುತ್ತೆ. ಅನ್ನೋದೇ ಸಂಗೀತ ಚಿಕಿತ್ಸೆಯ ಮೂಲ ಸಿದ್ದಾಂತ. ಇದಕ್ಕೆ ಅತ್ಯಂತ ಸರಳವಾದ ತಂತ್ರ  ಇದೆ. ಇದಕ್ಕಾಗಿ ನಾವು ಜರ್ಮನಿಯ ಬಹುಮುಖ್ಯ ವಿಜ್ಞಾನಿ H.W.Dove( ಹೆಚ್ .ಡಬ್ಲ್ಯೂ .ಡವ್ ) ಈತನ ಕೊಡುಗೆಗೆ ತಲೆಬಾಗಲೇಬೇಕು. ಆತ ಏನು ಕಂಡು ಹಿಡಿದ ಅಂದ್ರೆ binaural beat frequency .ಇದು ತುಂಬಾ ಸರಳ. ಈ bin aural beat frequency ಇದನ್ನು ಬಳಸಿ ಇತ್ತೀಚೆಗೆ ಡಾ. ಜೆಫ್ರಿ ತೋಮ್ಪ್ಸೋನ್ (Dr. Jeffrey Thompson) ಅನ್ನುವವರು ಬಹಳ ಅಪೂರ್ವವಾದ ಸಾಧನೆ ಮಾಡಿದ್ದಾರೆ. ಅದು ತುಂಬಾ ಸರಳ ತಂತ್ರ  . ಶಬ್ಧ ತರಂಗಗಳ ತರಂಗ ಉದ್ದವನ್ನು ಸೈಕಲ್/ ಸೆಕೆಂಡ್ ಅಥವಾ ಹರ್ಟ್ಜ್ ನಲ್ಲಿ ಮಾಪನ ಮಾಡುತ್ತಾರೆ.  
       ಈ  ತಂತ್ರ ಏನಂದರೆ ಯಾವುದೇ ಒಂದು ಹಾಡನ್ನು ಈ ತಂತ್ರ  ಅಥವಾ ಸಾಫ್ಟ್ ವೇರ್ ನಿಂದ ಹೆಡ್ ಫೋನ್ ಹಾಕಿ ಕೇಳಿದಾಗ ಬಲಗಡೆ ಅದೇ ಹಾಡು ಬರ್ತಾ ಇರುತ್ತೆ.ಅದೇ ಹಾಡನ್ನು   ಬಿನೌರಲ್ ಬೀಟ್ಸ್ (bin aural beats) ನ ತಂತ್ರದೊಂದಿಗೆ  ಹೆಡ್ ಫೋನ್ ಮುಖಾಂತರ ಹಾಡನ್ನು ಕೇಳಿದಾಗ - ಅದೇ ಹಾಡು ಎಡ ಮತ್ತು ಬಲ ಭಾಗಗಳಲ್ಲಿ ಸ್ವಲ್ಪ ತರಂಗಗಳ ವ್ಯತ್ಯಾಸ ಗಳೊಂದಿಗೆ ಕೇಳುವೆವು .ಹಾಡನ್ನು ಸ್ಟೀರಿಯೋ ಫಾರ್ಮ್ನಲ್ಲಿ ಮುದ್ರಿಸಿ ಹೆಡ್ ಫೋನ್ ಮೂಲಕ ಕೇಳಿಸಿ ಕೊಂಡಾಗ ಎಡ ಮತ್ತು ಬಲ ಕಿವಿಗಳಿಗೆ ಹೋಗುವ ಶಬ್ದ ತರಂಗಗಳಲ್ಲಿ 3 - 4 ಹರ್ಟ್ಜ್ ವ್ಯತ್ಯಾಸ ವಿರುತ್ತದೆ.ಕಿವಿಗೆ ಕೇಳಲು ಅಷ್ಟು ಹಿತವಾಗಿರುವುದಿಲ್ಲ .
 ಉದಾಹರಣೆಗೆ  ಒಂದು ಹಾಡಿನ ಆವರ್ತನ (Frequency ) 
100  hz ಎಂದು ಭಾವಿಸೋಣ. ಈಗ ಈ ತಂತ್ರದ ಮೂಲಕ ಈ ಹಾಡನ್ನು ಹೆಡ್ ಫೋನ್ ನಲ್ಲಿ ಕೇಳಿಸಿ ಕೊಂಡಾಗ ಬಲಗಡೆ ಕಿವಿಗೆ 100  hz & ಎಡಗಡೆಗೆ ಕಿವಿಗೆ 103 - 104  hz ನ ಹಾಡು ಕೇಳುವುದು . ಇದರಿಂದ ಮೆದುಳಿಗೆ ಗೊಂದಲ ಆಗುವುದು .  ಆ 100-103 hz ನಡುವಿನ ಗೊಂದಲ ಪರಿಹಾರ  ಆಗಿ ಕೊನೆಗೆ ಉಳಿದ ೩ hz ಅದೇ ಮಾತ್ರ ಉಳಿದು ಕೊಂಡು ಮೆದುಳು ತನ್ನ ಪಾಡಿಗೆ ತಾನೇ ಶಾಂತ ಸ್ಥಿತಿಗೆ ಹೋಗಿ ಬಿಡುತ್ತೆ .ಇದನ್ನು  brain wave technology ಅಂತ ಕರೆಯುತ್ತಾರೆ. ಈ ತರಹದ ಸಂಗೀತವನ್ನು  ದಿನಕ್ಕೆ ಅರ್ಧ ಗಂಟೆ ಅಥವಾ ೧ ಗಂಟೆ ಆ ತರ ವಿಶಿಷ್ಟ ತಂತ್ರಜ್ಞಾನ ಅಳವಡಿಸಿ ಕೊಂಡು ಮಾಡಿದ  c.d.ಗಳನ್ನ ಕೇಳಿದರೆ 1  ಗಂಟೆಯಲ್ಲಿ ನಾವು ಆ ಶಾಂತ  ಸ್ಥಿತಿಗೆ  ಹೊರಟು ಹೋಗುತ್ತೇವೆ.  
      ಈ ಮುಂಗೋಪಿ , ಶೀಘ್ರ ಕೋಪಿಗಳ ಗಮನಕ್ಕೆ ತರೋ ವಿಷಯ ಅಂದ್ರೆ ಪುನ್ನಗವರಾಳಿ ,ಕಾಪಿ ,ಸಹನಾ, ಲಲಿತ್, ಮಿಯಾಕ್ಹಿ ಮಲ್ಹಾರ್ಈ ರಾಗದಲ್ಲಿ ಇರುವ ಆಯ್ದ ಕೆಲವು ಹಾಡುಗಳನ್ನ ಯಾವಾಗೆಲ್ಲಾ ಸಮಯ ಸಿಗುತ್ತೋ ಆವಾಗ ಎಲ್ಲಾ stretch ಮಾಡಿ ಮಲಗಿ ಈ ಹಾಡುಗಳನ್ನ ಕೇಳಿ.
ಜೊತೆಗೆ ಹಾಗೆಯೇ ಹಾಡನ್ನು ಕೇಳುವುದಕ್ಕಿಂತ , ಹಾಡಿನ ಜೊತೆಗೆ ತಾವೇ ಸ್ವತಃ ಹಾಡಿಕೊಂಡರೆ ಇನ್ನು ಹೆಚ್ಚು ಪರಿಣಾಮಕಾರಿ. 

1. ಈ ಕೋಪ ಶಮನಕ್ಕಾಗಿ ಅನಾಹತ ಚಕ್ರ ಹಾಗೂ ವಿಶುದ್ದ ಚಕ್ರಗಳನ್ನು ಉದ್ದೀಪನಗೊಳಿಸಬೇಕಾಗುತ್ತೆ. ಇವೆರಡು ಚಕ್ರಗಳು ಕೋಪಿಗಳ ದೇಹದಲ್ಲಿ ಸ್ವಲ್ಪ ಜಾಸ್ತಿ ನಿಶ್ಚೇತನ ಆಗಿರುತ್ತವೆ .ಈ ಚಕ್ರಗಳ ಉದ್ದೀಪನಕ್ಕೆ  ಪುನ್ನಗವರಾಳಿ ,ಕಾಪಿ ,ಸಹನಾ, ಲಲಿತ್,ಮಿಯಾಕ್ಹಿ ಮಲ್ಹಾರ್  ರಾಗಗಳು ಸಹಕಾರಿ 
2. ಸಮಯ ಸಿಕ್ಕಾಗ ನಿಮಗೆ ಯಾವ ಕಾರಣದಿಂದ ಕೋಪ ಬರುತ್ತೆ ಅಂತ ಪಟ್ಟಿ ಮಾಡಿಕೊಳ್ಳಿ
3 . ಕೆಲವರನ್ನು ನೋಡಿದರೆ ಕೋಪ ಬರುತ್ತೆ ಅಂತ ಅನ್ನಿಸಿದರೆ ಸಾಧ್ಯವಾದಷ್ಟು ಅಂತಹ ವ್ಯಕ್ತಿಗಳಿಂದ ದೂರ ಇರಿ.
ಸಿಟ್ಟು ಬಂದಾಗ ಆ ಪ್ರಸಂಗದಲ್ಲಿ ನಿಮ್ಮನ್ನು ನೀವು ಆ ಪ್ರಸಂಗದಿಂದ ಮಾನಸಿಕವಾಗಿ ಹೊರಗಿಟ್ಟು ನೋಡಿ. ಯಾರೋ ಜಗಳ ಆಡುತ್ತಿದ್ದಾರೆ , ನಾನು ಆ ಪರಿಸರದಲ್ಲಿ ಇಲ್ಲ ಅಂದುಕೊಳ್ಳಿ.ಸಮಯ ಸಿಕ್ಕಾಗೆಲ್ಲ ಜಗಳದ ಕಡೆಗೆ ಗಮನ ಕೊಡದೆ ನಮಗೆ ಖುಷಿ ಕೊಡುವ ಸಂಗತಿಗಳನ್ನು ನೆನಪಿಸಿಕೊಳ್ಳಬೇಕು .ಖುಷಿ ಆಗಿ ಮಕ್ಕಳ ಜೊತೆ ಆಡಿದ್ದು ಸಿನಿಮಾ ನೋಡಿದ್ದು ಪಾರ್ಕ್ ಗೆ ಹೋಗಿದ್ದು ಇತ್ಯಾದಿ .

ಇನ್ನು ಕೆಲವು ತಂತ್ರಗಳು :
1. 1-10 ರ ತನಕ ಎಣಿಸು :ಸಿಟ್ಟು ಬಂದಾಗ action ತೊಗೊಳ್ಳೋ ಮೊದಲು 1-10 ರ ತನಕ ಎಣಿಸತಕ್ಕದ್ದು. 10 ಎಣಿಸುವುದರ ಒಳಗೆ ನಮ್ಮ ಕೋಪ ಕಮ್ಮಿ ಆಗಿರುತ್ತೆ.
2.Stop technique: ನಮಗೆ ನಾವೇ ಹೇಳಿ ಕೊಳ್ಳುವುದು.ಇದು ಮನಃ ಶಾಸ್ತ್ರಜ್ಞರು ಬಹಳ ವರ್ಷಗಳ ಕಾಲ ಪ್ರಯೋಗಮಾಡಿ ಕಂಡುಕೊಂಡ ಅಂಶಗಳು.ಸಿಟ್ಟು ಬಂದಿರುವಾಗ ನಾವು ನಮಗೆ stop , cool down , ಏನೂ ಆಗಲ್ಲ ಅಂತ ಜೋರಾಗಿ/ ಮನಸ್ಸಲ್ಲಿಯೇ ಹೇಳಿಕೊಳ್ಳುವುದು .ಇದರಿಂದ ಕೋಪ ತಾನಾಗಿಯೇ ಕಮ್ಮಿ ಆಗುತ್ತೆ ಅಂತ ಹೇಳ್ತಾರೆ .
3.Breathing technique :ಸಿಟ್ಟು ಬರುತ್ತಿರುವಾಗ shallow breathing ಮಾಡಬಾರದು.ಬದಲಿಗೆ ದೀರ್ಘ ಉಸಿರು ತೆಗೆದುಕೊಂಡು ಉಸಿರುಹೊರಗೆ ಬಿಡುವಾಗ ದೀರ್ಘವಾಗಿ ರಭಸವಾಗಿ ಹೊರಗೆ ಬಿಡುವುದು.
ಈ ರಾಗಗಳ ಆಲಿಸುವಿಕೆಯಿಂದ ಈ ಚಕ್ರಗಳು ಉದ್ದೀಪನಗೊಂಡು ಕೋಪ ಶಮನವಾಗುತ್ತದೆ .ಶಾಂತ ರೀತಿಯಲ್ಲಿ ಈ ರಾಗಗಳ ಹಾಡುಗಳನ್ನು ಕೇಳಿ,ಧ್ಯಾನ ಮಾಡಿದಷ್ಟು ಒಳ್ಳೆಯದೇ.ಈ ಎಲ್ಲ ತಂತ್ರಗಳು ಕೋಪ ಶಮನಕ್ಕೆ ಪರಿಣಾಮಕಾರಿ .

ಹಾಡುಗಳು :
ಪುನ್ನಗವರಾಳಿ ರಾಗ ಆಧಾರಿತ ಒಂದು ಭಾವಗೀತೆ -ಮುಂಗಾರಿನ ಅಭಿಷೇಕಕೆ (ಗಾಯಕಿ :ಬಿ. ಆರ್.ಛಾಯಾ )
ಕಾಪಿ ರಾಗ ಆಧಾರಿತ ಗೀತೆಗಳು - ದೇವರೇ ನೀನು ನಿಜವಪ್ಪ(ಗಾಯಕಿ :ಬಿ. ಆರ್ . ಛಾಯಾ ), 

ಜಗದೊದ್ದಾರನ ಆಡಿಸಿದಳೆಶೋಧೆ .

shambhO gangAdhara 
Kadhal Rojave (Tamil)
Film: Roja 
Language: Tamil (initial humming in Desh Raga)

Kase kahu manki bata
Ishq ki gharmi jajabta kise pesh karun
Khaali godhi diwar khadi    (Chasme Buddor)
Bhiraj me holi kheltha nanda lal (Godan)
Gairope pe karam apnope sitam (Ankhen)
Tum nahi garam nahin sharab nahin (Jaijith singh - Ghazal)
ಮಿಯಾಕ್ಹಿ ಮಲ್ಹಾರ್ - ಬೋಲಿರೆ ಪಪಿ ಹರಾ (ಹಿಂದಿ ಚಲನ ಚಿತ್ರ :ಗುಡ್ಡಿ ಗಾಯಕಿ -ಲತಾ ಮಂಗೇಶ್ಕರ್ )

No comments: