ತಾಳಿದವನು ಬಾಳಿಯಾನು ! ಬಗ್ಗಿದವನಿಗೆ ಒಂದು ಗುದ್ದು ಹೆಚ್ಚು ! ಇವೆರಡನ್ನೂ ಕಂಡಾಗ ಏನು ಅನ್ನಿಸುತ್ತೆ ? ೨ ಗಾದೆ ಮಾತುಗಳು ಆದರೆ ಒಂದಕ್ಕೊಂದು ವಿರುದ್ಧ ದಿಕ್ಕಿಗೆ ಮುಖ ಮಾಡಿ ಕೊಳ್ಳುವಂತಹವು . ತಾಳಿ ತಾಳಿ ಸಾಕಾಯಿತು , ಹೀಗೆ ಕೂತರೆ ಇನ್ನು ಆಗದು. ಹೀಗಾಗಿ ನಾನು ಪ್ರತಿದಿನ ಆಫೀಸ್ ಕೊಲೀಗ್ ಗಳ ಬಗ್ಗೆ ಕೇಳೋಕೆ ಶುರು ಮಾಡಿದೆ.
ಹಳೆ ಕೊಲೀಗ್ಸ್ , ಹೊಸ ಕೊಲೀಗ್ಸ್ ಅದ್ರಲ್ಲಿ ಸಿಕ್ಕಾ ಪಟ್ಟೆ ಗಮನ ಸೆಳೆದವನು ಎನ್. ಇಂದ್ರಜಿತ್ . ಇಲ್ಲಿ ಅವನ ರಾಷ್ಟ್ರೀಯತೆ ಮುಖ್ಯ ಅನ್ನಿಸಲಿಲ್ಲ ನಂಗೆ ಬರೀ ಅವನ ವಿಚಾರ ಧಾರೆಗಳು ಹಿಡಿಸಿದುವು. ಒಬ್ಬ ತನ್ನ ಕೈ ಕೆಳಗೆ ಕೆಲಸ ಮಾಡೋಕೆ ಬರ್ತಾನೆ ಅಂದ್ರೆ ,ಅವನ ವೀಸಾ ಸ್ಟೇಟಸ್ ಇಂದ ಹಿಡಿದು ಎಲ್ಲ ಜಾಲಾಡಿ ಬಿಟ್ಟಿದ್ದ. ಅವನ ಪ್ರಶ್ನಾವಳಿ ಈ ಪರಿ ಇತ್ತು ಅಂತೆ . ನೀನು ಸೆಕ್ಯೂರಿಟಿಯಲ್ಲಿ ಕೆಲಸ ಮಾಡಿದ್ದಾ ? ಇಲ್ಲಿ ನೋಡಿದ್ರೆ ಅಕೌಂಟ್ಸ್ & ವ್ಯಾಲಿಡೆಶನ್ ಪೊಸ್ಸಿಶನ್. ನನ್ನ ಪತಿರಾಯನ ಉತ್ತರ ಹೀಗಿತ್ತು . ಇಲ್ಲ ನಾನು ವೇರ್ ಹೌಸ್ ಇನ್ಚಾರ್ಜ್ ಆಗಿ ಕೆಲಸ ಮಾಡಿದ್ದು . ಸೆಕ್ಯೂರಿಟಿ ಯಲ್ಲಿ ಕೆಲಸ ಮಾಡಲಿಲ್ಲ . ಯಾಕೆ ಅಂತ ಅನುಮಾನ ವ್ಯಕ್ತಪಡಿಸಿದಾಗ ,ಇಲ್ಲ ನಿನ್ನ ವೀಸಾ ಸ್ಟಾಂಪ್ ಆಗಿದ್ದು ಸೆಕ್ಯೂರಿಟಿ ಗಾರ್ಡ್ ಆಗಿ ಅಂದು ಇಂದ್ರ ಜಿತ್ ಸುಮ್ಮನಾದ ! ಎಲ್ಲ ಹೊಸದು ನನ್ನ ಪತಿ ರಾಯನಿಗೆ.
ಇಂದ್ರಜಿತ್ ಇಷ್ಟಕ್ಕೆ ಸುಮ್ಮನಾಗದೆ ನೋಡು , ಮುಂದೆ ಮದುವೆ ಆಗಿ ಹೆಂಡತಿಯನ್ನು ಕರೆದು ತರುವಾಗ ರಗಳೆ ಆಗುತ್ತೆ. ಅದಕ್ಕಾಗಿ ಇಲ್ಲಿ ಸರಿ ಪಡಿಸುವೆ , ಆದರೆ ಎಮಿಗ್ರೆಶನ್ ನಲ್ಲಿ ಸರಿ ಪಡಿಸಿ ಕೊಳ್ಳು ಎಂದು ಹೇಳಿ ತನ್ನ ಕರ್ತವ್ಯ ಮುಗಿಸಿದ. ನನ್ನ ಪತಿಗೆ ತಲೆ ಬುಡ ಅರ್ಥ ಆಗಲಿಲ್ಲ , ಸರಿ ಅಂದು ಕೆಲಸದಲ್ಲೇ ಮುಳುಗಿ ಹೋದ. ಮುಂದೆ ಇಂದ್ರಜಿತ್ & ನನ್ನ ಪತಿ ಒಳ್ಳೇ ಸಹುದ್ಯೋಗಿಗಳಿಗಿಂ ತ ಹೆಚ್ಚಾಗಿ ಆತ್ಮೀಯ ಗೆಳೆಯರಾದರು. ಆದರೆ ವರ್ಷದೊಳಗೆ ಇಂದ್ರಜಿತ್ ಒಳ್ಳೆ ಕಂಪನಿ ಯಲ್ಲಿ ಆಫೆರ್ ಸಿಕ್ಕಿ ಹಾರಿ ಹೋಗಿದ್ದ .ಹೋಗೋ ಮೊದಲು ಏನೋ ಒಂದಿಷ್ಟು ಇನ್ಕ್ರಿಮೆಂಟ್ ಮಾಡಿಯೇ ಹೋಗಿದ್ದ .ಇದೆಲ್ಲ ನನ್ನ ಪೂರ್ವ ಜನ್ಮದ ಪುಣ್ ಯ ಇರ್ಬೇಕು ಅಷ್ಟೇ . ಇದೆಲ್ಲ ಆಗಿದ್ದು ೨೦೦೬ ರಲ್ಲಿ . 2008 ನಾನು ಮದುವೆ ಆಗಿ ಬಂದಾಗ ಯಾವ ಗೆಳಯರೂ ಇರಲಿಲ್ಲ. ಆಫೀಸ್ ಎಂಬ ಹೊಲದಲ್ಲಿ ಎಲ್ಲ ಉಪದ್ರವಕಾರಿ ಕೀಟಗಳೇ ತು೦ಬಿದ್ದುವು.
ಅಂದು ಮದುವೆಯಾದ ಬಳಿಕ ಮೊದಲ ದೀಪಾವಳಿ,ತವರಿಗೆ ಬರಬೇಕಿತ್ತು.ಇರಲಿ ನನ್ನ ಸೌಭಾಗ್ಯಕ್ಕೆ ಗಂಡನ ಜೊತೆಗೆ ದೀಪ ಹಚ್ಚಿ ಪೂಜೆ ಮಾಡುವ ಯೋಗವೂ ಇರಲಿಲ್ಲ. ದೀಪಾವಳಿ ಎಂದು ಗೊತ್ತಿದ್ದರೂ ,ಅದು ವಾರದ ರಜೆ ಆದರೂ ಬೇಕೆಂದೇ ಆಫೀಸ್ ಗೆ ಬರೋಕೆ ಹೇಳಿ ರಾತ್ರಿ ೩ ಘಂಟೆ ವರೆಗೆ ಕೂರಿಸಿಕೊಂಡ ಮೇಲಧಿಕಾರಿಯನ್ನು ಕರೆಯಲು ನನ್ನಲ್ಲಿ ಯಾವ ಪದಗಳೂ ಉಳಿದಿಲ್ಲ. ಮಿಗಿಲಾಗಿ ನಾನು ಏನು ಮಾಡುವ ಹಂತ ತಲುಪಿರಲಿಲ್ಲ. ಪರದೇಶಿ ಆಗಿ ಕೇವಲ ೩ ತಿಂಗಳು !! ಎಲ್ಲ ಮೌನವಾಗಿ ಸಹಿಸಿ ಕೊಂಡೆ. ಮದುವೆ ಆಗುವ ಮೊದಲು ಹೇಗೆ ಹೇಗೋ ಇದ್ದ ಹೆಬ್ಬುಲಿಗಳು ಮದ್ವೆ ಆಗಿ ಸ್ವಲ್ಪ ದಿನಕ್ಕೆ ಎಲ್ಲಾ ಇಲಿಗಳು ಆದುವು ಅಂದ ಹಾಗೆ ಆಗಿತ್ತು ನನ್ನ ಪರಿಸ್ಥಿತಿ.
ಇಷ್ಟಾದಾಗ ಬೋನಸ್ ಬರುವ ಸುದ್ದಿ! ಸಂಭ್ರಮ. ಇದು ಸುದ್ದಿಯಾಗಿಯೇ ಉಳಿಯಿತು. ಇದೆಲ್ಲಾ ನನ್ನ ರಾಣಿ ಯೋಗವೇ ಸೈ!! ಅದು ಒಂದಲ್ಲ ೩ ಬಾರಿ ... ಬಾಸ್ ಗೆ ಇನ್ಕ್ರಿಮೆಂಟ್ ಆದರೆ ಅದು ಅವನ ದಕ್ಷತೆಗೆ ಸಿಗಬೇಕಾದ ಗೌರವ. ಅದೇ ಒಬ್ಬ ದಕ್ಷ ನೌಕರನಿಗೆ ಇನ್ಕ್ರಿಮೆಂಟ್ ಮಾಡಬೇಕಾದರೆ ಕಂಪನಿ ಪರಿಸ್ಥಿತಿ ಚೆನ್ನಾಗಿಲ್ಲ, ಹೇಗಿದೆ ನ್ಯಾಯ? ! ಇದೆಲ್ಲ ಆ ಶ್ರೀಲಂಕನ್ ಬಾಸ್ ನಡೆಸುತ್ತಿದ್ದ ದಕ್ಷ ಕೆಲಸಗಳು . ಹೀಗಾಗಿ 3 ವರ್ಷ ೧ ಪೈಸೆ ಇನ್ಕ್ರಿಮೆಂಟ್ ಇಲ್ಲದೆ ಉಳಿಯಬೇಕಾಯಿತು. ಆಗ ನಿರ್ಧರಿಸಿಬಿಟ್ಟೆ! ಇನ್ನು ಸುಮ್ಮನೆ ಕೂತರೆ ಆಗಲ್ಲ ಏನಾದರೂ ಮಾಡಿ ಒಮ್ಮೆ ಆ "ವಜ್ರ" ಕೋಟೆಯನ್ನು ಭೇದಿಸಿ ಹೊರಬರುವಂತೆ ಪ್ರೇರೇಪಣೆ ಮಾಡ್ಬೇಕು .
ದಿನ ಬೆಳಗ್ಗಿಂದ ರಾತ್ರಿವರೆಗೆ ಹೇಗೆ ಯಾರನ್ನು ಸಂಪರ್ಕಿಸಿದರೆ ಒಳ್ಳೆ ನೆಲೆ ಸಿಗಬಹುದು ಒಂದು ಒಳ್ಳೆ ಕೆಲಸ ಸಿಗಬಹುದು? ಎಲ್ಲ ಗೆಳೆಯರ ಪಟ್ಟಿ ತಯಾರಿಸಿದೆ. ಯಾರು ಯಾವ ಕಂಪನಿಯಲ್ಲಿ ಕೆಲಸ ಮಾಡ್ತಾರೆ ? ಯಾವ ಹುದ್ದೆಯಲ್ಲಿ ಇತ್ಯಾದಿ. ಆದರೆ ಮೊದಲು ನೆನಪಿಗೆ ಬಂದವನೇ ಆ ಇಂದ್ರಜಿತ್ ನೋಡೋಣ ಎಲ್ಲಿ ಇದ್ದಾನೆ ಹೇಗಿದ್ದಾನೆ ಹೇಗೆ ತಿಳಿದು ಕೊಳ್ಳೋದು ? ಕೂಡಲೇ ತಲೆಗೆ ಹೊಳೆದಿದ್ದು ನಮ್ಮ ಫೇಸ್ ಬುಕ್ ! ಬಂದು ಜಾಲಾಡಿ ನೋಡಿದೆ. ಹೆಚ್ಚಿನ ಮಾಹಿತಿ ಏನು ಇರಲಿಲ್ಲ ಒಂದು ಇಮೇಲ್ ಇತ್ತು , ಪ್ರಸ್ತುತ ಎಲ್ಲಿ ಕೆಲಸ ಮಾಡುತ್ತಿದ್ದಾನೆ ಅಂತ ಇತ್ತು. ಅದನ್ನು ಗೂಗಲ್ ನಲ್ಲಿ ಸರ್ಚ್ ಮಾಡಿ ನೋಡಿದಾಗ ಸ್ವಲ್ಪ ಮಾಹಿತಿ ಸಿಕ್ಕಿತು. ಅಂತೂ ಒಂದಷ್ಟು ಯೋಚಿಸಿ , ರಾತ್ರಿ ಊಟ ಮಾಡುವಾಗ ಜಗಳ ಮಾಡೋದು ಅಂತ ನಿರ್ಧರಿಸಿಯೇ ಬಿಟ್ಟೆ ! ನಂಗೆ ಬೇರೆ ಯಾವ ಸಮಯವೂ ಸಿಗೊದಿಲ್ವಾ ಅಂತ ಅನುಮಾನ ಬರುತ್ತೆ . ಬೆಳಗ್ಗೆ ೮ ಘ೦ಟೆಗೆ ಹೋದ್ರೆ ರಾತ್ರಿ ೧೧- ೧೧. ೩೦ ಸಮಯಕ್ಕೆ ಬಂದ್ರೆ ನಾನು ಎಷ್ಟು ಹೊತ್ತಿಗೆ ಮಾತನಾಡಿ ಮನವರಿಕೆ ಮಾಡೋದು ? ಜಗಳ ಮಾಡೋದು ?
"ಓ ಪುಣ್ಯಾತ್ಮ ಇನ್ನು ನೀನು ಬೇರೆ ಕೆಲಸ ನೋಡದ ಹೊರತು ನಂಗೆ ಉಳಿಗಾಲ ಇಲ್ಲ, ದಯಮಾಡಿ ನಿನ್ನ ಇದ್ದ ಎಲ್ಲಾ ಗೆಳೆಯರಿಗೆ ಸ್ವಲ್ಪ ಫೋನ್ ಮಾಡು ಏನಾದ್ರು ಮಾಡಿ ಕೆಲಸ ಬದಲಿ ಮಾಡು." ಅಂದೆ ! 'ನೀನು ಯೋಚಿಸಿದಷ್ಟು ಸುಲಭ ಇಲ್ಲ ಕೆಲಸ ಬದಲಾಯಿಸೋದು , ಸ್ವಲ್ಪ ಸುಮ್ಮನೆ ಇರು' ಅಂತ ನನ್ನ ಪತಿಯ ಭರತ ವಾಕ್ಯ ! ಅಲ್ಲಿಗೆ ಬೂದಿ ಮುಚ್ಚಿದಂತೆ ಇದ್ದ ನನ್ನ ಕೋಪ ಕೊಳ್ಳಿಯಂತೆ ಪ್ರಖರವಾಯಿತು. ನೇರ ತರಾಟೆಗೆ ತೆಗೆದು ಕೊಂಡೆ. " ಅಲ್ಲ ಕೆಲವರು ವರ್ಷಕ್ಕೆ ಒಂದು ಕಂಪನಿ ಎಂಬಂತೆ ಬದಲಾಯಿಸುತ್ತ ಇರುತ್ತಾರಲ್ಲ ? ಅವರಿಗೇನು ಹುಚ್ಚೇ ? ಸುಮ್ಮ ಸುಮ್ಮನೆ ಕಷ್ಟ ಪಡೋದು ಏನು ಅವರ ಹವ್ಯಾಸವೇ? ಅಷ್ಟು ಕಷ್ಟ ಇದ್ದರೆ ಯಾರೂ ಈ ಪರಿ ಕೆಲಸ ಬದಲಾಯಿಸುತ್ತಿರಲಿಲ್ಲ . ಏನಾದರೂ ಲಾಭವಿಲ್ಲದೆ ಕೋಳಿ ತನ್ನ ಕಾಲ ಬುಡ ಕುಕ್ಕೊದಿಲ್ಲ . ನಿಂಗೊತ್ತಾ ನಿನ್ನ ಹಳೆ ಕೊಲೀಗ್ ಇಂದ್ರಜಿತ್ ಮತ್ತೆ ಕೆಲಸ ಬದಲಾಯಿಸಿದ ಈಗ ಅವನು ಪ್ರಾಪರ್ಟಿ ಗ್ರೂಪ್ ನಲ್ಲಿ ಇಲ್ಲ. ಮತ್ತೇ ನನ್ನ ಪ್ರಶ್ನೆಗಳ ಸರದಿ ! 'ಮತ್ತೆ ಎಲ್ಲೋ ಹಾರಿದ್ದಾನೆ. ಮೊನ್ನೆ ಫೋನ್ ಮಾಡಿ ಮಾತನಾಡಿದ್ದ ಅಂತ ಹೇಳಿದ್ದೆ ಅಲ್ವಾ ? ಏನಾದ್ರು ಹೇಳಿದ್ನಾ ಈ ಬಗ್ಗೆ ?' ಇಲ್ವಲ್ಲಾ ಏನು ಹೇಳಲಿಲ್ಲ ಅನ್ನೋದೇ ? ಹೂ ಅವನೆಲ್ಲಿ ಹೇಳ್ತಾನೆ ? ಇರಲಿ ಬಿಡು ಎಂದು ಹೇಳಿ ಸುಮ್ಮನಾದೆ ..
ಹಳೆ ಕೊಲೀಗ್ಸ್ , ಹೊಸ ಕೊಲೀಗ್ಸ್ ಅದ್ರಲ್ಲಿ ಸಿಕ್ಕಾ ಪಟ್ಟೆ ಗಮನ ಸೆಳೆದವನು ಎನ್. ಇಂದ್ರಜಿತ್ . ಇಲ್ಲಿ ಅವನ ರಾಷ್ಟ್ರೀಯತೆ ಮುಖ್ಯ ಅನ್ನಿಸಲಿಲ್ಲ ನಂಗೆ ಬರೀ ಅವನ ವಿಚಾರ ಧಾರೆಗಳು ಹಿಡಿಸಿದುವು.
ಇಂದ್ರಜಿತ್ ಇಷ್ಟಕ್ಕೆ ಸುಮ್ಮನಾಗದೆ

2 comments:
ಮುಂದುವರಿಯೋಲ್ವಾ...?
ಆಫೀಸ್ ಎಂಬ ಹೊಲದಲ್ಲಿ ಎಲ್ಲ ಉಪದ್ರವಕಾರಿ ಕೀಟಗಳೇ ತು೦ಬಿದ್ದುವು-enthaha upame! nimma ee articles dubai swargada innondu mukha-marubhoomiyannu kanneduru thandu nillisutthide,madam.keep writing
Post a Comment