ಬೇಸಿಗೆ ಸಮಯ , ನಂಗೆ ನೀಲಂ ಮಾವಿನ ಹಣ್ಣು ತುಂಬ ಇಷ್ಟ. ಅಮ್ಮಮ್ಮ ಒಂದಷ್ಟು ತಂದು ಕೊಟ್ಟಿದ್ರು . ಅದ್ರಲ್ಲಿ ಒಂದು ಎತ್ತಿಕೊಂಡು ಬಂದು ಕಲ್ಲಿನ ಮೇಲೆ ಕೂತು ಕಾಡು ಕಪಿ ಹಾಗೆ ತಿಂದೆ. ನಾರು ಹಲ್ಲಿನ ನಡುವೆ ಸಿಕ್ಕಿಹಾಕಿ ಕೊಂಡಿತು. ಬ್ರಶ್ ಮಾಡಿದ್ದೂ ಆಯಿತು. ಅದು ಹೋಗಲಿಲ್ಲ. ಕೊನೆಗೆ ಉಳಿದ ದಾರಿ ಅಂದ್ರೆ ಒಂದು ಸಣ್ಣ ಚಿಮ್ಮಟ ಹಿಡಿದು ಆ ನಾರನ್ನು ಹಿಡಿದು ಎಳೆದು ಹೊರ ತೆಗೆಯೋದು. ಸರಿ ಅಂದು ಚಿಮ್ಮಟ ಹಿಡಿದು ಕನ್ನಡಿ ಮುಂದೆ ನಿಂತು ಬಾಯಿ ತೆರೆದು ಶೋಧಿಸಿ ತೆಗೆದೂ ಬಿಟ್ಟೆ .
ಅದಾಗಲೇ ಎಂದೋ ಓದಿದ ಹಲ್ಲಿನ ಪಾಠ ನೆನಪಾಗಿ , ಆರೋಗ್ಯವಂತ ಮನುಷ್ಯನಿಗೆ 28 ಹಾಗೂ 4 ಬುದ್ದಿವಂತಿಕೆ ಹಲ್ಲು ವಯಸ್ಕರಾದಾಗ ಬಂದು 32 ಹಲ್ಲು ಇರುವುದು ಎಂದು ನೆನಪಾಯಿತು. ಚಿನ್ನು ಅಲ್ಲೇ ಇದ್ದ . ನನ್ನ ಚಿನ್ನುಗೆ ಎಷ್ಟು ಹಲ್ಲು ಇರಬಹುದು. ಹೇಗೆ ನೋಡೋದು ? ಬಾಯಿ ತೆರೆದು ಲೆಕ್ಕ ಹಾಕೋದು ಒಂದೇ ದಾರಿ. ಸರಿ ಅವನ್ನು ಎತ್ತಿಕೊಂಡು ಬಂದು ಕೂತು ಬಾಯಿ ತೆರೆದು ಲೆಕ್ಕ ಹಾಕಿದೆ. ಸಾಸಿವೆ ಕಾಳಿನಂತಹ 12 ಬಾಚಿ ಹಲ್ಲು , ಸೂಜಿ ಮೊನೆಯಂತಾ 4 ಕೋರೆ ದಾಡೆ, 10
ಓರೆಕೋರೆ ದವಡೆ ಹಲ್ಲುಗಳು. ಈ ಹಲ್ಲು ಕಂಡ ಕೂಡಲೇ ನಾನಂತೂ ಬಾಚಿ ಹಲ್ಲಿನ ಮೋಡಿಗೆ
ಒಳಗಾದೆ ಅವು ಸಿಕ್ಕಾಪಟ್ಟೆ ಮುದ್ದಾಗಿದ್ದವು. ನಾನು ಅವನ ಬಾಯಿ ತೆರೆದು ಆಗಾಗ ನೋಡೋದು
ನಂಗೆ ಅಭ್ಯಾಸವೇ ಆಗಿ ಹೋಗಿತ್ತು. ಚಿನ್ನು ಏನು ಅದಕ್ಕೆ ಅಡ್ಡಿ ಮಾಡಲಿಲ್ಲ. ಕಚ್ಚೋದು ಪರಚೋದು ಏನು ಮಾಡ್ತಾ ಇರಲಿಲ್ಲ. ಕೆಲ ತಿಂಗಳ ನಂತರ ಚಿನ್ನುನ ಆಹಾರ ಪದ್ಧತಿ ಬದಲಾಗತೊಡಗಿತು. ಅವನ ಇಷ್ಟದ ಕುರು ಕುರು ತಿಂಡಿ ತಿನ್ನುತ್ತಾ ಇರಲಿಲ್ಲ. ಅವನಿಗೆ ರಸ್ಕ್ ಅಂದ್ರೆ ಪ್ರಾಣ. ಹಾಕಿದ್ರೆ ಹತ್ರ ಬಂದು ಪರಿಮಳ ನೋಡಿ ಕಡಿಯೋಕೆ ಪ್ರಯತ್ನ ಪಟ್ಟು ಅಲ್ಲೇ ಕೂತು ಮಿಯಾವ್ ಮಿಯಾವ್ ಎಂದು ಹಠ ಮಾಡುತ್ತಿದ್ದ. ಮೊದಲೆಲ್ಲಾ ತಿಂಗಳಿಗೆ ನಾನು ಅವನು ಸೇರಿ 1 ಕೆ ಜಿ . ಖಾಲಿ ಮಾಡ್ತಾ ಇದ್ದೆವು. ಈಗ ಅವ ತಿನ್ನೋದೇ ಇಲ್ಲ ರಸ್ಕ್ ಸದ್ದು ಕೇಳಿದರೆ ಓಡಿ ಬರುತ್ತಿದ್ದ. ನಂಗೆ ಇದೊಳ್ಳೆ ತಲೆ ತಿನ್ನೋಕೆ ಶುರುವಾಯಿತು. ಚಿನ್ನು ಹೀಗೇಕೆ ..... ???
ಒಂದು ದಿನ ರಸ್ಕ್ ಹಾಕಿ ಹಾಲು ಹಾಕಿದೆ. ಅದು ಮೆತ್ತಗಾದ ಮೇಲೆ ಅವನನ್ನು ತಂದು ತಿನ್ನು ಅಂತ ಬಿಟ್ಟೆ. ಚಂದಕ್ಕೆ ತಿಂದು ಮುಗಿಸಿದ. ಆಹಾ!!! ಅವನ ಮುಖ ದಲ್ಲಿ ಏನು ಸಂತೃಪ್ತಿ ಕಳೆ ! ಅಂದು 2 ದೊಡ್ದ ರಸ್ಕ್ ಹಾಲಿನೊಡನೆ ತಿಂದು ತೇಗಿದ. ತಿಂದ ಬಳಿಕ ಒಂದು ತೀರ್ಮಾನಕ್ಕೆ ಬಂದೆ . ಒಹೋ ಇವನಿಗೆ ಗಟ್ಟಿ ವಸ್ತು ತಿನ್ನೋಕೆ ಆಗ್ತಾ ಇಲ್ಲ .. ಏನಾಗಿದೆ ಬಾಯಲ್ಲಿ ? ತಂದು ಮಡಿಲಿನಲ್ಲಿ ಇತ್ತು ಕೊಂಡು ಅವನ ದಂತ ವೈದ್ಯೆ ನಾನದೆ ಬಾಯಲಿ ಹುಣ್ಣು ಏನು ಇರಲಿಲ್ಲ . ಆದ ಅವನ ಬಾಯಿಯಲ್ಲಿ ದವಡೆ ಹಲ್ಲು , ಕೋರೆ ದಾಡೆ ಎಲ್ಲ ಮಾಯ... ಬಾಯೆಲ್ಲ ಬೊಚ್ಚು ಬಾಯಿ ! ಅಲ್ಲಿಗೆ ಅವನ ಹಾಲು ಹಲ್ಲೆಲ್ಲಾ ಬಿದ್ದು ಹೋಗಿದೆ ಅಂತ ತೀರ್ಮಾನಕ್ಕೆ ಬಂದೆ. ಸರಿ ಅವನಿಗೆ ಮೆತ್ತನೆ ವಸ್ತು ಮಾತ್ರ ತಿನ್ನೋಕೆ ಕೊಡ್ತಾ ಇದ್ದೆ. ಸ್ವಲ್ಪ ಸಣ್ಣನೂ ಆದ ಸರಿ ತಿನ್ನೋಕೆ ಆಗ್ತಾ ಇರಲಿಲ್ಲ .
ವಾರ ಕಳೆದು ಮತ್ತೆ ಹೇಗಿದೆ ಬಾಯಿ ಅಂತ ನೋಡಿದರೆ ಅಬ್ಬಾ ಗಟ್ಟಿ ಮುಟ್ಟಾದ 4 ಕೋರೆ ದಾಡೆಗಳು ಬರಲು ಪ್ರಾರಂಭಿಸಿದ್ದವು.ಹೀಗೆ ಒಂದೊಂದೇ ಹಲ್ಲು ಬಂದು ತಿಂಗಳು ಕಳೆಯೋದರಲ್ಲಿ ಅವನೊಬ್ಬ 30 ಹಲ್ಲು ಹೊತ್ತ ವಯಸ್ಕ ಬೆಕ್ಕು ಆಗಿದ್ದ. ಇದರೊಂದಿಗೆ ಅವನ ಕೈ ಕಾಲಿನ ಅಡಿ ಚರ್ಮವೂ ಮೊದಲಿನ ಮೃದುತ್ವ ಕಳೆದು ಕೊಂಡು ಒರಟಾಗಿ ಹೋಗಿದ್ದುವು. ಈ ಪ್ರಕ್ರಿಯೆ ಕಂಡು ಹಾಲು ಹಲ್ಲು ಬಿದ್ದು ಶಾಶ್ವತ ಹಾಲುಗಳ ಬೆಳವಣಿಗೆ ಮನುಷ್ಯ ನಲ್ಲಿ ಮಾತ್ರವೇ ಅಲ್ಲದೆ ಬೆಕ್ಕುಗಳಲ್ಲಿ ಕೂಡ ಇದೆ ಎಂದು ದೃಢಪಡಿಸಿ ಕೊಂಡೆ .
ನಾಳೆ ನಾನು ಮನೆ ಬಿಟ್ಟು ಹೋದಾಗ ಅವನ ತಲ್ಲಣ ತಳಮಳಗಳು ....
3 comments:
ee chinnuna autobiography... bekkina bagge poorna maahiti tilisuttide.. bekku saakadeye namagellaa saakida anubhava.
ನಮ್ಮೊದಿಂಗೆ ಬದುಕು ಆ ಪ್ರಾಣಿಗಳಿಗೆ ಒಂದು ಭಾವನೆ ಇರುತ್ತದೆ
ಎಂದು ಚೆನ್ನಾಗಿ ಹೇಳುತ್ತಾ ಸಾಗುತ್ತಿದ್ದೀರ!
ನಿಮ್ಮ ಆ ಬೆಕ್ಕಿನ ಜೊತೆಗಿನ ಒಡನಾಟದ
ಕ್ಷಣಗಳು ನಾವು ನೋಡುವ ಹಾಗೆ ಇದೆ !
ಸಾಗಲಿ !
ನನಗಿಷ್ಟವಾಗಿರೋ ಬೆಕ್ಕುಗಳನ್ನು ತಂದು ಕೂರಿಸಿದ್ದೀರಿ... ತುಂಬ ಚೆನ್ನಾಗಿದೆ ಪರಕಾಯ ಪ್ರವೇಶ!
Post a Comment