ಮೊದಲ ಬಾರಿ ಗ್ರಂಥಾಲಯದ ಕಾರ್ಡ್ ಸಿಕ್ಕಿದಾಗ ಅದೇನೋ ಖುಷಿ , ಓಡಿ ಬಂದು ಅಮ್ಮಮ್ಮ ನಿಮಗೆ ಯಾವ ಪುಸ್ತಕ ಬೇಕು ? ನಾನು ತಂದು ಕೊಡುವೆ ಅಂತ ಹೇಳಿದಾಗ ನಂಗೆ ಕಾರಂತಜ್ಜನ ಪುಸ್ತಕ ತಂದು ಕೊಡು ಅಂದ್ರು . ಸರಿ ಅಂತ ಗ್ರಂಥಾಲಯದಲ್ಲಿ ಹೋಗಿ ಹುಡುಕಿ ಮರಳಿ ಮಣ್ಣಿಗೆ , ಮುಗಿದ ಯುದ್ದ ತಂದು ಕೊಟ್ಟೆ. ಅದನ್ನು ಬಿಡಿಸಿ ನೋಡಿದವರೇ ಇದು ನಾನು ಓದಿ ಆಗಿದೆ ಅಂದ್ರು. ಸರಿ ಇನ್ನೊಮ್ಮೆ ಬೇರೆ ತಂದು ಕೊಡುವೆ ಅಂದು ಸುಮ್ಮನಾದೆ. ಆಗ ಅಮ್ಮಮ್ಮ ನೀನು ಮೊದಲು ಗೃಹಭಂಗ ಓದಿ ನೋಡು ಅರ್ಥ ಆಗುತ್ತಾ ನಿಂಗೆ ನೋಡು ಅಂದ್ರು . ಅದು ಅರ್ಥ ಆದರೆ ಮುಂದೆ ನಾಯಿ ನೆರಳು , ತಬ್ಬಲಿಯು ನೀನಾದೆ ಮಗನೇ , ವಂಶ ವೃಕ್ಷ ಓದು ಅಂತ ಹೇಳಿ ಸಲಹೆ ಇತ್ತರು. ಅದುವರೆಗೆ ನಾನು ಮಯೂರ ದಲ್ಲಿ ಪ್ರಕಟವಾದ ಕೆಲವು ಕಾದಂಬರಿ ಓದಿ ಮುಗಿಸಿದ್ದೆ. ಅದೆಲ್ಲ ಹೆಚ್ಚಿನವು ತ್ರಿವೇಣಿಯವರ ಕಾದಂಬರಿಗಳು. ತುಷಾರ , ತರಂಗ, ಸುಧಾ ಇವೆಲ್ಲಾವನ್ನೂ ತಪ್ಪದೆ ಓದುತ್ತಿದ್ದೆ .
ಅಂತೂ ಇಂತು ಗೃಹ ಭಂಗ ಹಾಗೂ ಕಾರಂತರ ಬೆಟ್ಟದ ಜೀವ ಹುಡುಕಿ ತಂದೆ. ಆ ಗ್ರಂಥಪಾಲಕಿ ನನ್ನನ್ನು ಸ್ವಲ್ಪ ವಿಚಿತ್ರವಾಗಿ ನೋಡುತ್ತಿದ್ದರು. ಈ ಕಾದಂಬರಿ ನೀನು ಓದುವುದೋ ಅಲ್ಲ ನಿನ್ನ ಅಮ್ಮ ಓದುವುದೋ ಎಂದು ಕೇಳಿಯೇ ಬಿಟ್ಟರು. ನಾನು ಗೃಹ ಭಂಗ ವನ್ನು ನನ್ನ ಅಮ್ಮಮ್ಮ ನಂಗೆ ಓದೋಕೆ ಹೇಳಿದ್ದಾರೆ . ಬೆಟ್ಟದ ಜೀವ ಅವರಿಗೆ ಓದೋಕೆ ಅಂತ ಹೇಳಿ ಬಂದೆ. ಅಮ್ಮಮ್ಮನ ಹತ್ರ ಬಂದು ನೋಡಿ ಈ ಸರಿ ನಿಮಗೆ ಬೆಟ್ಟದ ಜೀವ ತಂದಿದ್ದೇನೆ . ಮತ್ತೆ ನೀವು ಹೇಳಿದ ಗೃಹಭಂಗ ತಂದಿದ್ದೇನೆ ಅಂದೆ. ಬೆಟ್ಟದ ಜೀವ ನಾನು ಓದಿ ಮುಗಿಸಿದ್ದೇನೆ ಅಂದಾಗ ನಂಗೆ ತೀವ್ರ ನಿರಾಸೆ ! ಯಾವ ಪುಸ್ತಕ ತಂದರೂ ಓದಿ ಆಗಿರುತ್ತೆ ಛೆ !! ನೀವು ಓದದೆ ಉಳಿದ ಪುಸ್ತಕ ಇದ್ರೆ ಹೇಳಿ ಅಂದೆ . ಅಯ್ಯೋ ನಿನ್ನ ಗ್ರಂಥಾಲಯದಲ್ಲಿ ಇರುವ ಪುಸ್ತಕಗಳ ಪಟ್ಟಿ ಕೊಡು ಆಗ ಹೇಳಬಹುದು. ಹೀಗೆ ಹೇಗೆ ಹೇಳೋದು ಅಂದಾಗ ನಾನು ಕಕ್ಕಾ ಬಿಕ್ಕಿ !
ಗೃಹ ಭಂಗ ದಪ್ಪ ಪುಸ್ತಕ ಇದನ್ನು ಹೇಗೆ ಓದೋದು ? ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಾ ಇರುವಾಗ ಶಾಲೆ ಹತ್ತಿರ ಇದ್ದ ಕಾರಣ ನನ್ನಲ್ಲಿ ಓದೋಕೆ ಸಮಯ ಶಕ್ತಿ ಎರಡೂ ಇತ್ತು . ಹೈ ಸ್ಕೂಲ್ ಮೆಟ್ಟಿಲು ಹತ್ತಿದಾಗ ದಿನಕ್ಕೆ 15 ಕಿ ಮೀ ನಡೆಯಬೇಕಿತ್ತು ಹೀಗಾಗಿ ನನ್ನ ಸಮಯ ಹಾಗೂ ಶಕ್ತಿ ವ್ಯಯವಾಗುತ್ತಿತ್ತು. ದಿನವೂ ಗಿಣಿ ಪಾಠ ಮಾಡಿ ನಮ್ಮ ಕನ್ನಡ ಟೀಚರ್ ಮಮತಾ ಗೆ ಒಪ್ಪಿಸೋಕೆ ಇರ್ತಾ ಇತ್ತು . ಇನ್ನು ಒಂದು ರಾಶಿ ಗಣಿತದ ಮನೆ ಕೆಲಸ . ವಿಜ್ಞಾನದ ಚಿತ್ರ , ಪ್ರಶ್ನೋತ್ತರ , ವಾರಕ್ಕೊಂದು ಕಿರು ಪರೀಕ್ಷೆ , ಆಮೇಲೆ ವಿಜ್ಞಾನ ಸಂಘದ ಚಟುವಟಿಕೆಯ ಕೆಲಸ ಈ ಎಲ್ಲದರ ನಡುವೆ ನಾನು ಗೃಹಭಂಗ ಓದೋದು ಹೇಗೆ ? ಸಾಲದ್ದಕ್ಕೆ ನನ್ನ ಊರು ಕರಾವಳಿ, ಮಳೆಗಾಲದಲ್ಲಿ ಗಟ್ಟಿಯಾಗಿ ಒಂದು ಗಾಳಿ ಬೀಸಿದರೆ ಎಲ್ಲಾದರೂ ಒಂದು ಮರ ಬಿದ್ದು ವಿದ್ಯುತ್ ದೀಪ ಮಾಯ ! ಈಗಿನಂತೆ ಚಾರ್ಜರ್ ,ಸೋಲಾರ್ ದೀಪ , ಇನ್ವರ್ಟರ್ ವ್ಯವಸ್ಥೆ ಇರಲಿಲ್ಲ. ಚಿಮಣಿ ದೀಪ , ಕ್ಯಾಂಡಲ್ ಅಷ್ಟೇ . ಆದರೂ ದಿನಕ್ಕೆ ಅರ್ಧ ಘಂಟೆ ಗೃಹ ಭಂಗಕ್ಕೆ ಮೀಸಲು ಇಟ್ಟೆ .
ಪ್ರತಿವಾರಕ್ಕೆ ಒಂದೋ ಆ ಪುಸ್ತಕವನ್ನು ನವೀಕರಣ ಮಾಡಬೇಕಿತ್ತು ಇಲ್ಲ ಒಂದು ವಾರ ಅದ ಕೂಡಲೇ ಅದನ್ನು ಹಿಂತಿರುಗಿಸಬೇಕಿತ್ತು. ನನ್ನ ಅರ್ಧ ಘ೦ಟೆ ಓದಿನಲ್ಲಿ ಎಷ್ಟು ಓದಲಾದೀತು? ತಿಂಗಳು ಒಂದು ಕಳೆದರೂ ಓದಿ ಮುಗಿಸಲಾಗಲಿಲ್ಲ. ಅಲ್ಲಿ ಆ ಗ್ರಂಥಪಾಲಕಿ ಮತ್ತೆ ಕೇಳಿದ್ದರು ಈ ಗೃಹಭಂಗ ಯಾರು ಓದೋದು ? ನಾನೇ ಅಂದೆ . ಅವರಿಗೆ ಅಚ್ಚರಿಯೋ ಅಚ್ಚರಿ ... ಅಲ್ಲಾ ನಿನ್ನ ಸ್ನೇಹಿತೆಯರೆಲ್ಲಾ ಸಾಯಿಸುತೆ ಕಾದಂಬರಿ ಓದುತ್ತಾರೆ ನೀನು ಮಾತ್ರ ಯಾಕೆ ಈ ಪುಸ್ತಕದ ಹಿಂದೆ ಬಿದ್ದೆ? ನಂಗೆ ಗೃಹಭಂಗ ಇಷ್ಟ ಆಗಿದೆ, ಆದರೆ ಓದಲು ನನ್ನ ಹತ್ತಿರ ಹೆಚ್ಚು ಸಮಯ ಸಿಗುತ್ತಾ ಇಲ್ಲ ಅಂದೆ. ನನ್ನ ಈ ಮಾತು ಕೇಳಿ ಕಿರು ನಗು ಅವರ ಮುಖದಲ್ಲಿ . ಅಂತೂ ಸಮಯ ಹೊಂದಿಸಿ ೩ ತಿಂಗಳು ತೆಗೆದು ಕೊಂಡು ಗೃಹಭಂಗ ಓದಿ ಮುಗಿಸಿದೆ. ಈ ನಡುವೆ ಸುಮಾರು ಪುಸ್ತಕ ಅಮ್ಮಮ್ಮನಿಗೆ ಎಂದು ತಂದೆ ಹೆಚ್ಚಿನವು ಓದಿ ಆಗಿದೆ ಎಂದು ತಿರಸ್ಕೃತ ಆದರೂ ಕುವೆಂಪುರವರ ಮಲೆಗಳಲ್ಲಿ ಮದುಮಗಳು ಇದು ನಾನು ಓದಿಲ್ಲ ಎಂದು ನನ್ನ ಅಮ್ಮಮ್ಮನ ಕೈ ಸೇರುವ ಪುಣ್ಯ ಮಾಡಿತು. ಇದನ್ನು ಸುಮಾರು ಸಮಯ ಬಹಳ ತನ್ಮಯರಾಗಿ ಓದುತ್ತಿದ್ದುದನ್ನು ನನ್ನ ಕಣ್ಣಾರೆ ಕಂಡು ಅಬ್ಬಾ .. ಈ 70 ರ ಇಳಿವಯಸ್ಸಿನಲ್ಲಿ ಅದೆಷ್ಟು ಉತ್ಸಾಹ ದಿಂದ ಓದುತ್ತಾರೆ ಅಂತ ವಿಸ್ಮಯ ಗೊಂಡಿದ್ದೆ. ಈ ಗೃಹಭಂಗ ನನ್ನ ಎಸ್ಟ್ ಕಾಡಿತ್ತು ಅಂದರೆ 8 ನೇ ತರಗತಿಯ ಬೇಸಗೆ ರಜೆಯಲ್ಲಿ ಇನ್ನೊಮ್ಮೆ ಓದಿ ಕೊಂಡೆ. ನನ್ನ ಹೈ ಸ್ಕೂಲ್ ಮುಗಿಯುವಾಗ ನನ್ನ ಅಮ್ಮಮ್ಮ ಓದಿ ಮುಗಿಸಿದ್ದು ಸುಮಾರು 30 - 35. ನಾನು ತಂದ ನೀಡಿದ ಪುಸ್ತಕಗಳನ್ನು ಅಮ್ಮಮ್ಮ ಮಾತ್ರ ಓದದೇ ಅತ್ತ ಮಾವನೂ ಓದುತ್ತಿದ್ದರು . ಅಲ್ಲಿಗೆ ಹೈ ಸ್ಕೂಲ್ ಮುಗಿಯುವ ವೇಳೆಗಾಗಲೇ ಭೈರಪ್ಪ ನನ್ನ ಮೆಚ್ಚಿನ ಕಾದಂಬರಿಕಾರರಾಗಿದ್ದರು.
ಪಿ ಯು ದಿನಗಳಲ್ಲಿ ನನ್ನ ಕನ್ನಡ ಉಪನ್ಯಾಸಕರಾದ ಶ್ರೀಧರ ಮೂರ್ತಿ ಇವರು ಕೊಟ್ಟ ಪುಸ್ತಕದ ಪಟ್ಟಿ ಇನ್ನು ಓದಿ ಮುಗಿಸಿಲ್ಲ. ಪಿ ಯು ಹಂತ ಮುಗಿದು ೧ ದಶಕವೇ ಕಳೆದು ಹೋಯಿತು. ಇಲ್ಲಿಂದ ಮುಂದೆ ನಾನು ಅಮ್ಮಮ್ಮ.. ನಾನು ಯಾವ ಪುಸ್ತಕ ಓದಬೇಕು ಎಂದು ಹೇಳಲಿಲ್ಲ, ನಾನು ಕೇಳಲಿಲ್ಲ. ನಾನು ತಂದು ಅವರ ಎದುರಿಗೆ ಇಡುತ್ತಿದ್ದ ಪುಸ್ತಕ ನಾನು ಓದಿ ಆಗಿದೆ ಎಂದು ತಿರಸ್ಕೃತ ಆಗಲೇ ಇಲ್ಲ.
ನಾನು ಪಿ ಯು ದಿನಗಳಲ್ಲಿ ಇದ್ದಾಗ ನನ್ನ ಅಜ್ಜ ವೃದ್ದಾಪ್ಯ ದಿಂದ ತೀರಿ ಕೊಂಡರು. ಆಗ ಮಳೆಗಾಲ 11 ದಿನ ಕಳೆಯಬೇಕಲ್ಲ ಅದು ಒಬ್ಬರು ಇಬ್ಬರು ಅಲ್ಲ ೭ ಜನ ಮಕ್ಕಳು ! ಸಾವು ಅಂದರೆ ಅದೊಂದು ದುಃಖವೇ ಮಾತಿಲ್ಲ ಕತೆ ಇಲ್ಲ ಏನೇನೋ ನೆನಪುಗಳು ... ಆಗ ಎಲ್ಲರೂ ಮೊರೆ ಹೋಗಿದ್ದೆ ಈ ಪುಸ್ತಕ ಓದುವ ಹವ್ಯಾಸದಲ್ಲಿ ನಾನಂತು ವಿಶೇಷ ಅನುಮತಿ ಪಡೆದು 25 -30 ಪುಸ್ತಕ ತಂದು ಕೊಟ್ಟೆ . ಎಲ್ಲರೂ ನಿತ್ಯದ ವಿಧಿಯನ್ನು ಮುಗಿಸಿ , ಮಾಡಿ ಹಾಕಿದ ಊಟ ತಿಂಡಿ ತಿಂದು ಒಳ್ಳೆ ಪರೀಕ್ಷೆಗೆ ತಯಾರಾಗುವ ಹಾಗೆ ಒಂದೊ೦ದು ಮೂಲೆ ಸೇರಿ ಅವರಿಷ್ಟದ ಪುಸ್ತಕ ಓದಿಕೊಳ್ಳುತ್ತಿದ್ದರು. ನನ್ನ ಅಮ್ಮ , ಚಿಕ್ಕಮ್ಮ , ಮಾವಂದಿರು ಮಾತ್ರವಲ್ಲ ನನ್ನ ಅಮ್ಮಮ್ಮನೂ ಸೇರಿ ...
ಅಯ್ಯೋ ಇದ್ಯಾವ ರೀತಿ ಅಂದಿರಾ ಅಮ್ಮಮ್ಮನಿಗೆ ಅಜ್ಜ ಸತ್ತರಲ್ಲ ಅಂತ ಬೇಸರವಿರಲಿಲ್ಲ ಬದಲಿಗೆ ಅವರಿಗೆ ತಾನು ಮುತ್ತೈದೆಯಾಗಿ ಸಾಯಲು ಸಾಧ್ಯವಿಲ್ಲವಲ್ಲ ಅನ್ನೋ ಕೊರಗು ಮಾತ್ರ ಇತ್ತು. ಆ ದಿನಗಳಲ್ಲಿ ನನ್ನ ಹತ್ರ ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ ಕಾದಂಬರಿ ಓದಬೇಕು ಅದನ್ನು ತಾ ಅಂದು ತರಿಸಿ ಕೊಂಡು ಓದಿದ್ದರು ನನ್ನ ಅಮ್ಮಮ್ಮ.
ನಾಳೆ ನನ್ನ ಪದವಿ ದಿನಗಳಲ್ಲಿ 'ಭಿತ್ತಿ'ಗಾಗಿ ತಾಯಿ ಮಗ ಮಗಳು ಕಿತ್ತಾಡಿದರು ಅಂತ ನೋಡೋಣ ...

4 comments:
nimma prathibhe ya moola sele elliyadu antha eega gotthaaythu-padmapani
ಬೆನ್ನು ತಟ್ಟಿದಕ್ಕೆ ವಂದನೆಗಳು ಪಾಣಿ ಸರ್ ! :)
satta bEaraviralillaa.. taanu munche hogalilla emba bEsara.. entaha sthita pragne?
super ri nimma odina chata haage munduvarili
Post a Comment